ನಮ್ಮ ಬಗ್ಗೆ

ಕ್ರೈಸ್ತರ ಪವಿತ್ರ ಪುಸ್ತಕವು ಇತಿಹಾಸ ಮತ್ತು ಪ್ರವಾದನೆಯೊಂದಿಗೆ ನಮ್ಮ ಜೊತೆ ಮಾತನಾಡುತ್ತದೆ. ಮೊದಲು ಏನು ನಡೆಯಿತು ಮತ್ತು ಶೀಘ್ರದಲ್ಲೇ ಏನು ನಡೆಯಲಿದೆ ಎಂದು ಇದು ನಮಗೆ ತಿಳಿಸುತ್ತದೆ. ಬೆರಗುಪಡಿಸುವ ಪ್ರವಾದನೆಯಲ್ಲಿ, ವಿಶ್ವವಿನಾಶವಾಗುವ ಮೊದಲೇ ನಾವು ಅಂತ್ಯಕಾಲದ ಎಚ್ಚರಿಕೆಯ ಕೊನೆಯ ಸಂದೇಶವನ್ನು ಓದಬಹುದು.

ಈ ಎಚ್ಚರಿಕೆಯ ಸಂದೇಶವನ್ನು ಪ್ರಕಟಣೆ 14ನೇ ಅಧ್ಯಾಯದಲ್ಲಿ, ಮೂರು ಭಾಗಗಳಲ್ಲಿ ಬರುವ ಮೂರು ದೇವದೂತರ ಸಂದೇಶಗಳ ಮೂಲಕ ವಿವರಿಸಲಾಗಿದೆ. ಈ ಪ್ರತಿಯೊಂದು ಎಚ್ಚರಿಕೆಯು ಇಡೀ ಜಗತ್ತಿಗೆ ಕೇಳಲು ಗಂಭೀರವಾಗಿದೆ.

  • ಮೊದಲ ದೇವದೂತನು ನಮಗೆ ಪರಲೋಕ, ಭೂಲೋಕ ಮತ್ತು ಸಮುದ್ರವನ್ನು ಉಂಟುಮಾಡಿದ ಸೃಷ್ಟಿಕರ್ತ ದೇವರನ್ನು ಆರಾಧಿಸಲು ಹೇಳುತ್ತಾನೆ. ನಾವು ಸೃಷ್ಟಿಕರ್ತನನ್ನು ಆರಾಧಿಸಲೇಬೇಕು ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಗಳಿಗೆಯು ಬಂದಿದೆ. ನ್ಯಾಯತೀರ್ಪನ್ನು ಎದುರಿಸಲು ನಾವು ದೇವರನ್ನು ಹೇಗೆ ತಿಳಿಯಬಹುದು ಮತ್ತು ಸಿದ್ದರಾಗಬಹುದು ಎಂಬುದನ್ನು ಕುರಿತು ಮೊದಲನೆಯ ದೇವದೂತನು ನಮಗೆ ಹೇಳುತ್ತಾನೆ.

  • ಅಂತ್ಯ ಕಾಲದಲ್ಲಿನ ಧಾರ್ಮಿಕ ಧರ್ಮಭ್ರಷ್ಟತೆ ಕುರಿತು ಎರಡನೆಯ ದೇವದೂತನು ನಮಗೆ ಎಚ್ಚರಿಸುತ್ತಾನೆ. ಸೃಷ್ಟಿಕರ್ತ ದೇವರು ಮತ್ತು ಆತನ ಪ್ರಕಟಗೊಂಡ ವಾಕ್ಯವನ್ನು ಗೌರವಿಸದ ಧಾರ್ಮಿಕ ವ್ಯವಸ್ಥೆಗಳಿಂದ 'ಹೊರಬರಲು' ನಮಗೆ ಹೇಳಲಾಗುತ್ತಿದೆ.

  • ಸೃಷ್ಟಿಕರ್ತನಾದ ದೇವರು ಮತ್ತು ಆತನ ಜನರ ವಿರುದ್ಧ ಒಂದು ಅಂತಿಮ ದಾಳಿಯನ್ನು ಹುಟ್ಟುಹಾಕಲು ದುಷ್ಟನು ಧರ್ಮಭ್ರಷ್ಟ ಧಾರ್ಮಿಕ ವ್ಯವಸ್ಥೆಯ ಮೂಲಕ ಕೆಲಸ ಮಾಡುತ್ತಾನೆ ಎಂದು ಮೂರನೆಯ ದೇವದೂತನು ನಮಗೆ ಎಚ್ಚರಿಸುತ್ತಾನೆ. ದುಷ್ಟನನ್ನು ಹಿಂಬಾಲಿಸುವವರ ಮೇಲೆ "ಗುರುತು" ಇಡಲಾಗುತ್ತದೆ ಮತ್ತು ದೇವರಿಗೆ ನಿಷ್ಠರಾಗಿ ಉಳಿಯುವವರು ಹಿಂಸಿಸಲ್ಪಡುತ್ತಾರೆ. ಆದರೆ ಈ ಭಯಾನಕ ಗುರುತು ಹೊಂದಿರುವವರ ಮೇಲೆ ದೇವರು ತನ್ನ ತೀರ್ಪುಗಳ ಮಳೆಗರೆಯುತ್ತಾನೆ. ನಂಬಿಕೆ ಮತ್ತು ವಿಧೇಯತೆಯಿಂದ ನಡೆದುಕೊಳ್ಳುವ ಆತನ ಜನರು ನಾಶವಾಗಲಿರುವ ಗ್ರಹದ ವಿನಾಶದಿಂದ ರಕ್ಷಿಸಲ್ಪಡುತ್ತಾರೆ. ಅವರು ದೇವರೊಂದಿಗೆ ಪರಲೋಕಕ್ಕೆ ಹೋಗುತ್ತಾರೆ ಮತ್ತು ದೇವರು ಜಗತ್ತನ್ನು ಅದರ ಮೂಲ ಪರಿಪೂರ್ಣತೆಯಲ್ಲಿ ಮರುಸೃಷ್ಟಿಸುವುದನ್ನು ಅವರು ವೀಕ್ಷಿಸುತ್ತಾರೆ.

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover