
ನಿಮಗೆ ಪವಾಡ ಬೇಕೇ?
ಸಾರಾಂಶ
ದೇವರು, ತನ್ನ ಜನರಿಗೆ ಅವಶ್ಯವಾಗಿ ಅದ್ಭುತ ಕಾರ್ಯವೊಂದರ ಅಗತ್ಯವಿದ್ದಾಗ, ಅದನ್ನು ನೆರವೇರಿಸಿ ದಕ್ಕೆ ಸುದೀರ್ಘ ಇತಿಹಾಸವೇ ಇದೆ. ನೆರವೇರಿದ ಪ್ರವಾದನೆಗಳು, ರೋಗಗುಣವಾದ ವ್ಯಕ್ತಿಗಳು ಮತ್ತು ಪ್ರಾರ್ಥನೆಗೆ ಉತ್ತರವಾಗಿ ಗತಿಸಿದ ನಂಬಲಾಗದ ಘಟನೆಗಳ ಬಗ್ಗೆ ಸತ್ಯವೇದ ನಮಗೆ ಅನೇಕ ಕಥೆಗಳನ್ನುಹೇಳಿದೆ. ಅವೆಲ್ಲವೂ ಪ್ರಾರ್ಥನೆಗೆ ಬಂದ ಉತ್ತರಗಳಾಗಿವೆ. ದೇವರ ಬದಲಾಗದ ವಾಕ್ಯವೆಂದು ಸತ್ಯವೇದವನ್ನು ನಾವು ಏಕೆ ನಂಬಬೇಕು ಮತ್ತು ನಿಮ್ಮ ಜೀವನ ದಲ್ಲಿ ಅದ್ಭುತಕಾರ್ಯ ನಡೆಯಲು ದೇವರನ್ನು ಹೇಗೆ ಸಮೀಪಿಸಬೇಕು ಎಂಬುದಕ್ಕೆ ಈ ಕರಪತ್ರ ಹಲ ವಾರು ಕಾರಣಗಳನ್ನು ನೀಡುತ್ತದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
21 ಭಾಷೆಗಳು
ಪುಟಗಳು
6
ಒಂದು ಜನಾಂಗದ ಕುಲಗಳು ಉತ್ತಮ ಜೀವನಕ್ಕಾಗಿ ಆಶಿಸುತ್ತಿದ್ದರು ಮತ್ತು ಹೊಸ ದೇಶವೊಂದಕ್ಕೆ ವಲಸೆ ಹೋಗಲು ನಿರ್ಧರಿಸಿದರು. ಆದರೆ ಅವರ ಪ್ರಯಾಣವು ಸುಲಭವಾಗಿರಲಿಲ್ಲ; ಅವರು ಕಾಲ್ನಡಿಗೆಯಲ್ಲಿಯೇ ದೊಡ್ಡ ಮರುಭೂಮಿಯೊಂದನ್ನು ದಾಟಬೇಕಾಗಿತ್ತು. ಆ ಮರುಭೂಮಿಯು ಹಾವು ಮತ್ತು ಚೇಳುಗಳಿಂದ ತುಂಬಿತ್ತು. ಅಲ್ಲಿ ಬಿಸಿಲಿನ ತಾಪ ಸಹ ಬಹಳವೇ ಇತ್ತು. ಅನಾರೋಗ್ಯಪೀಡಿತ ಅಥವಾ ದುರ್ಬಲ ಕುಲಗಳ ಸದಸ್ಯರು ಗುಂಪಿನಿಂದ ಹಿಂದೆ ಬಿದ್ದರೆ, ಅವರ ಮೇಲೆ ಡಕಾಯಿತರ ದಾಳಿ ನಡೆಯಿತ್ತಿತ್ತು.
ಶೀಘ್ರದಲ್ಲೇ ಅವರು ತೆಗೆದುಕೊಂಡು ಬಂದಿದ್ದ ಆಹಾರ ಮುಗಿಯುತ್ತ ಬರುತ್ತಿತ್ತು. ಆಗ ಅವರ ನಾಯಕ ಅದ್ಬುತ ನಡೆಸುವಂತೆ ದೇವರಲ್ಲಿ ಬೇಡಿಕೊಂಡನು. ಮರುದಿನ, ಜನರು ಎಚ್ಚರಗೊಂಡಾಗ, ರೊಟ್ಟಿಯಂತೆ ಕಾಣುವ ಸಣ್ಣ ಚೂರುಗಳು ನೆಲದ ಮೇಲೆ ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡರು. ಜೇನುತುಪ್ಪದೊಂದಿಗೆ ನೆಂಚಿಕೊಂಡ ರೊಟ್ಟಿಯಂತೆ ಇದು ಬಹು ರುಚಿಕರವಾಗಿತ್ತು. ಮತ್ತು ಪ್ರತಿಯೊಬ್ಬರಿಗೂ ತಮ್ಮ ಹಸಿವನ್ನು ತಣಿಸಲು ಬೇಕಾದಷ್ಟು ಕೊಡಲ್ಪಟ್ಟಿತ್ತು! ಮರುಭೂಮಿಯನ್ನು ದಾಟಲು ಅನೇಕ ದಿನಗಳನ್ನು ತೆಗೆದುಕೊಂಡಿತು, ಮತ್ತು ಪ್ರತಿದಿನ ಪರಲೋಕದಿಂದ ರೊಟ್ಟಿಯ ಮಳೆಯಾಯಿತು. ದೇವರಿಗೆ ಸ್ತೋತ್ರ, ಅವರು ರಕ್ಷಿಸಲ್ಪಟ್ಟರು!
ಈ ಕಥೆಯು ನಿಮಗೆ ಆಶ್ಚರ್ಯವನ್ನುಂಟುಮಾಡಬಹುದು, ಆದರೆ ಅದು ನಿಜವಾಗಿ ನಡೆದ ಸತ್ಯಕಥೆ. ಸತ್ಯವೇದದಲ್ಲಿ ಹೇಳಲಾದ ಅನೇಕ ಅದ್ಭುತ ಕಾರ್ಯಗಳಲ್ಲಿ ಇದೂ ಸಹ ಒಂದಾಗಿದೆ. ಇದನ್ನು ನೀವು ತವ್ರತ್, ಜಬುರ್ ಮತ್ತು ಇಂಜಿಲ್ ಎಂಬ ಹೆಸರುಗಳಿಂದಲೂ ತಿಳಿದುಕೊಳ್ಳಬಹುದು. ಸತ್ಯವೇದದಲ್ಲಿ ನೂರಾರು ಸತ್ಯಕಥೆಗಳಿವೆ. ಅವುಗಳಲ್ಲಿ ಅನೇಕ ಸತ್ಯಕಥೆಗಳು ಜನರ ಜೀವನದಲ್ಲಿ ದೇವರು ಮಾಡಿದ ಅದ್ಭುತಗಳನ್ನೇ ಆಧಾರಿಸಿವೆ. ತಮ್ಮದೇ ಆದ ಜೀವನದಲ್ಲಿ ಅದ್ಭುತ ಕಾರ್ಯಗಳು ನಡೆಯಬೇಕು ಎನ್ನುವ ಜನರು ಓದಲೇ ಬೇಕಾದ ಬಹು ಮುಖ್ಯವಾದ ಪುಸ್ತಕ.
ಆಧುನಿಕ-ದಿನದ ಅದ್ಭುತಗಳು
ಇತ್ತೀಚಿನ ವರ್ಷಗಳಲ್ಲಿ, ನಾವು ಅಂತರ್ಯುದ್ಧಗಳು, ಕ್ರಾಂತಿಗಳು, ಆರ್ಥಿಕ ಕುಸಿತ, ನಿರುದ್ಯೋಗ, ಸಾಂಕ್ರಾಮಿಕ ರೋಗಗಳು ಮತ್ತು ಸಾವುಗಳನ್ನು ನೋಡಿದ್ದೇವೆ. ನಿಮ್ಮ ಪರಿಸ್ಥಿತಿ ಈಗ ಏನಾಗಿದೆ ಎಂದು ನನಗೆ ತಿಳಿದಿಲ್ಲ. ನಿಮ್ಮ ಮನೆಯಿಂದ ನಿಮ್ಮನ್ನು ಬೇರುಸಹಿತ ಕಿತ್ತುಹಾಕಿರಬಹುದು. ಬದುಕು ಮತ್ತು ಸಾವಿನ ನಡುವೆ ನಿಮ್ಮ ಪ್ರೀತಿಪಾತ್ರರು ಜೀವನ ನಡೆಸುತ್ತಿರಬಹುದು. ನೀವೂ ಸಹ ಕೆಲಸವೊಂದನ್ನು ಕಂಡುಕೊಳ್ಳಲು ಹೆಣಗಾಡುತ್ತಿರಬಹುದು.
ನಿಮ್ಮ ಪರಿಸ್ಥಿತಿ ಏನೇ ಇರಲಿ, ದೇವರು ನಿಮ್ಮ ಬಗ್ಗೆ ಕಾಳಜಿವಹಿಸುತ್ತಾನೆ ಮತ್ತು ಹಿಂದಿನ ಕಾಲದಲ್ಲಿ ಅದ್ಭುತ ಕಾರ್ಯಗಳನ್ನು ನಡೆಸಿದಂತೆಯೇ ಇಂದು ಸಹ ನಿಮಗಾಗಿ ಅದ್ಭುತ ಕಾರ್ಯವೊಂದನ್ನು ಮಾಡಲು ಸಿದ್ಧನಿದ್ದಾನೆ. ನಿಮಗೆ ದುಃಖವಾದಾಗ, ಆದ್ಭುತ ಪುಸ್ತಕವಾದ ಸತ್ಯವೇದವನ್ನು ಓದುವ ಮೂಲಕ ನೀವು ಜೀವನದಲ್ಲಿ ಮತ್ತೆ ಪ್ರೋತ್ಸಾಹವನ್ನು ಪಡೆದುಕೊಳ್ಳಲು ಸಾಧ್ಯವಿದೆ.
ನಮ್ಮ ಕಾಲಕ್ಕೆ ದೇವರ ಸಾಂತ್ವನದ ಮಾತುಗಳು
ಕೆಲವರು ಸತ್ಯವೇದ ಓದಲು ಹಿಂಜರಿಯುತ್ತಾರೆ ಏಕೆಂದರೆ ಅದು ಹೇಗೋ ಬದಲಾಗಿದೆ ಎಂಬುದನ್ನು ಅವರು ಕೇಳಿಸಿಕೊಂಡಿದ್ದಾರೆ. ಪ್ರಾಯಶಃ ಈ ತಪ್ಪು ಕಲ್ಪನೆಗೆ, ಸತ್ಯವೇದ ಅನುಸರಿಸುವುದಾಗಿ ಹೇಳಿಕೊಳ್ಳುವ ಅನೇಕ ಜನರ ತಪ್ಪಾದ ಜೀವನ ಶೈಲಿಯೂ ಕಾರಣವಾಗಿರಬಹುದು. ಕೆಲವೊಮ್ಮೆ ಕ್ರೈಸ್ತರು ಮದ್ಯಪಾನ ಮಾಡುವುದನ್ನೂ, ಜೂಜಾಡುವುದನ್ನೂ, ಅಸಭ್ಯವಾಗಿ ಉಡುಗೆ ತೊಡುವುದನ್ನೂ, ಹಂದಿಮಾಂಸ ತಿನ್ನುವುದನ್ನೂ ಮತ್ತು ಜನರನ್ನು ನಿರ್ದಯವಾಗಿ ನಡೆಸಿಕೊಳ್ಳುವುದನ್ನೂ ನಾವು ನೋಡುತ್ತೇವೆ.
ಆದರೆ ಸತ್ಯವೇನೆಂದರೆ, ಈ ಎಲ್ಲ ತಪ್ಪುಗಳನ್ನು ಸತ್ಯವೇದದಲ್ಲಿ ಖಂಡಿಸಲಾಗಿದೆ. ಕ್ರೈಸ್ತರು ದೇವರಿಗೆ ಅವಿಧೇಯತೆಯಿಂದ ಜೀವಿಸುತ್ತಿರುವಾಗ, ಇದು ಆತನ ನಿತ್ಯವಾಕ್ಯದ ನ್ಯಾಯ ಸಮ್ಮತ ಸಮರ್ಥನೆಯನ್ನು ಬದಲಾಯಿಸುವುದಿಲ್ಲ. ಆದ್ದರಿಂದಲೇ ಪ್ರವಾದಿಯಾದ ಯೆಶಾಯನು ಹೀಗೆ ಬರೆದನು, “ಹುಲ್ಲು ಒಣಗಿಹೋಗುವದು, ಹೂ ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವದು” (ಯೆಶಾಯ 40:8). ಮಾನವರು ದೇವರ ವಾಕ್ಯವನ್ನು ಬದಲಾಯಿಸುವಷ್ಟು ಶಕ್ತಿಶಾಲಿಗಳಾಗಿದ್ದಾರೆಯೇ ಅಥವಾ ಅವರು ಅದನ್ನು ಕೇವಲ ಕೆಟ್ಟ ನಡವಳಿಕೆಯಿಂದ ತಪ್ಪಾಗಿ ನಿರೂಪಿಸುತ್ತಿದ್ದಾರೆ ಎಂದು ನೀವು ಭಾವಿಸುತ್ತೀರಾ?
ಪ್ರವಾದಿ ದಾವೀದ (ದಾವೂದ್ ಎಂದೂ ಕರೆಯುತ್ತಾರೆ) ಮತ್ತು ಅವನ ಜನರು ಒಡಂಬಡಿಕೆಯ ಮಂಜೂಷವನ್ನು ಸಾಗಿಸುತ್ತಿದ್ದಾಗ, ದಶಾಜ್ಞೆಗಳನ್ನು ಒಳಗೊಂಡಿರುವ ಒಂದು ದೊಡ್ಡ ಚಿನ್ನದ ಪೆಟ್ಟಿಗೆಯನ್ನು ಸಾಗಿಸುತ್ತಿದ್ದರು ಎಂದು ಸತ್ಯವೇದ ಹೇಳುತ್ತದೆ. ಹತ್ತು ಆಜ್ಞೆಗಳು ಮನುಷ್ಯರು ನೈತಿಕ ಜೀವನ ನಡೆಸುವದಕ್ಕಾಗಿ ಕೊಡಲ್ಪಟ್ಟ ದೇವರ ನಿಯಮಗಳಾಗಿದ್ದವು ಮತ್ತು ಅವುಗಳನ್ನು ಕಲ್ಲಿನ ಎರಡು ದೊಡ್ಡ ಫಲಕಗಳ ಮೇಲೆ ಬರೆದು ಚಿನ್ನದ ಪೆಟ್ಟಿಗೆಯೊಳಗೆ ಇರಿಸಲಾಗಿತ್ತು. ಮೆರವಣಿಗೆಯಲ್ಲಿ, ಒಬ್ಬ ವ್ಯಕ್ತಿಯು ದೇವರ ಆಜ್ಞೆಯಿದ್ದ ಪೆಟ್ಟಿಗೆಯನ್ನು ಮುಟ್ಟಿದನು. ಮುಟ್ಟಿದ ತಕ್ಷಣವೇ ಆತನು ಸತ್ತುಹೋದನು!
ದುರಾಹಂಕಾರಿಯ ಕೈಗಳು ತನ್ನ ವಾಕ್ಯವನ್ನು ಒಳಗೊಂಡಿರುವ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಲು ದೇವರು ಅನುಮತಿಸದಿದ್ದರೆ, ತನ್ನ ಲಿಖಿತ ವಾಕ್ಯವನ್ನು ಕತ್ತರಿ ಮತ್ತು ತಿದ್ದುವ ಲೇಖನಿಯಿಂದ ತಿದ್ದಲು ದುಷ್ಟರಿಗೆ ಅವನು ಅನುಮತಿಸುವನೋ? ದೇವರು ತನ್ನ ವಾಕ್ಯವನ್ನು ರಕ್ಷಿಸುವಷ್ಟು ದೊಡ್ಡ ಶಕ್ತಿಶಾಲಿಯಾಗಿದ್ದಾನೆ.
ವಸ್ತುನಿಷ್ಠವಾಗಿ ಹೇಳುವುದಾದರೆ, ಸತ್ಯವೇದವು ಮಾನವ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ದೃಢೀಕರಿಸಲ್ಪಟ್ಟ ಪುಸ್ತಕವಾಗಿದೆ. ಸ್ವಲ್ಪ ಸಮಯದ ಹಿಂದೆ, ಮುಹಮ್ಮದ್ ಈದ್ ಧಿಬ್, ಜುಮಾ ಮುಹಮ್ಮದ್ ಮತ್ತು ಖಲೀಲ್ ಮೂಸಾ ಎಂಬ ಪ್ಯಾಲೆಸ್ಟೈನ್ ನಲ್ಲಿದ್ದ ಮೂವರು ಬೆಡೌಯಿನ್ ಕುರುಬರು ಆಕಸ್ಮಿಕವಾಗಿ ಮೃತ ಸಮುದ್ರದ ಬಳಿಯಲ್ಲಿ ಹಳೆ ಒಡಂಬಡಿಕೆಯ ಸುರುಳಿಗಳನ್ನು ಕಂಡುಹಿಡಿದರು. ಇದು ಒಂದು ಪ್ರಮುಖ ಪುರಾತತ್ವ ಶೋಧನೆಯಾಗಿದ್ದು, ಇಂದಿನ ಸತ್ಯವೇದವನ್ನು ಸುಮಾರು 2,000 ವರ್ಷಗಳಷ್ಟು ಹಳೆಯದಾದ ಪ್ರಾಚೀನ ಸತ್ಯವೇದದ ಹಸ್ತಪ್ರತಿಗಳೊಂದಿಗೆ ಹೋಲಿಸಲು ನಮಗೆ ಅನುವು ಮಾಡಿಕೊಟ್ಟಿತ್ತು. ಈ ಹೋಲಿಕೆಯು ಆಶ್ಚರ್ಯಕರವಾಗಿದೆ, ದೇವರ ಪ್ರಕಟನೆಗಳನ್ನು ಬದಲಾಯಿಸಲಾಗುವುದಿಲ್ಲ ಎಂಬ ಅಂಶವನ್ನು ಮತ್ತೊಮ್ಮೆ ಸೂಚಿಸುತ್ತಿದೆ. ನಿಮಗೆ ಒಂದು ಅದ್ಭುತ ಕಾರ್ಯದ ಆವಶ್ಯಕತೆಯಿದ್ದಲ್ಲಿ, ಸತ್ಯವೇದ ಅದನ್ನು ಕಂಡುಕೊಳ್ಳಲು ಒಂದು ವಿಶ್ವಾಸಾರ್ಹ ಮೂಲವಾಗಿದೆ! ಸತ್ಯವೇದದಲ್ಲಿ ನೋಹ (ನುಹ್), ಅಬ್ರಹಾಂ (ಇಬ್ರಾಹಿಂ), ಯೋಸೇಫ (ಯೂಸೆಫ್), ಯೋನಾ (ಯೂನುಸ್), ಡ್ಯಾನಿಯೆಲ್, ಡೇವಿಡ್ (ದಾವುದ್) ಮತ್ತು ಸೊಲೊಮೋನ (ಸುಲೇಮನ್) ರಂತಹ ಪ್ರವಾದಿಗಳ ಅದ್ಭುತ ಕಥೆಗಳನ್ನು ಕಾಣಬಹುದು. ಇತರ ಸ್ಥಳಗಳಲ್ಲಿ ಇವರ ಜೀವನದ ತುಣುಕುಗಳನ್ನು ನೀವು ಓದಿರಬಹುದು, ಆದರೆ ಸತ್ಯವೇದವು ಇಡೀ ಕಥೆಯನ್ನು ನಿಮಗೆ ಸಮಗ್ರವಾಗಿ ತಿಳಿಸಿಕೊಡುತ್ತದೆ!
ಬನ್ನಿ, ನಿಮ್ಮ ಜೀವನದ ಅದ್ಭುತವೆನೆಂದು ಹುಡುಕಿ
ನೀವು ಯಾವುದೇ ಬಿಕ್ಕಟ್ಟನ್ನು ಅನುಭವಿಸುತ್ತಿರಬಹುದು, ಸತ್ಯವೇದವು ಕೇವಲ ನಿಮಗಾಗಿಯೇ ಒಂದು ಅದ್ಭುತ ಕಥೆಯನ್ನು ಹೊಂದಿದೆ:
ನೀವು ಅಥವಾ ನಿಮ್ಮ ಪ್ರೀತಿಪಾತ್ರರು ಅನಾರೋಗ್ಯದಿಂದ ಬಳಲುತ್ತಿದ್ದೀರಾ? ಕುಷ್ಠರೋಗದಿಂದ ಬಳಲುತ್ತಿದ್ದ ಸಿರಿಯಾದ ಸೇನಾಧಿಪತಿ ನಾಮನ್ ಅದ್ಭುತವಾಗಿ ಗುಣಮುಖನಾದ ಬಗ್ಗೆ ಓದಿರಿ.
ನಿಮ್ಮ ಕುಟುಂಬವನ್ನು ಪೋಷಿಸಲು ನೀವು ಹೆಣಗಾಡುತ್ತಿದ್ದೀರಾ? ಚಾರೆಪ್ತಾ ಊರಿನ ವಿಧವೆ ಮತ್ತು ಅವಳ ಮಗನ ಬಗ್ಗೆ ಓದಿರಿ ಅವಳು ಒಂದು ಮೊಗೆಯಲ್ಲಿ ಸ್ವಲ್ಪ ಎಣ್ಣೆ ಮತ್ತು ಒಂದು ಹಿಡಿ ಹಿಟ್ಟನ್ನು ಅವಲಂಬಿಸಿ ದೀರ್ಘಕಾಲದ ಕ್ಷಾಮದಿಂದ ಬದುಕಿ ಉಳಿದಿದ್ದಳು.
ನಿಮ್ಮ ಜೀವಕ್ಕೆ ಅಪಾಯವಿದೆಯೇ? ರಾಜನ ಅರಮನೆಯಲ್ಲಿದ್ದ ಇಥಿಯೋಪಿಯಾದ ಒಬ್ಬ ಗುಲಾಮನಾದ ಎಬೆದ್-ಮೆಲೆಕ್ ನ ಕುರಿತು ಓದಿರಿ, ದೇವರಲ್ಲಿ ಆತನಿಗಿದ್ದ ನಂಬಿಕೆಯ ಕಾರಣದಿಂದಾಗಿ ಯುದ್ಧಕಾಲದಲ್ಲಿ ಅವನ ಜೀವವನ್ನು ಉಳಿಸಲಾಯಿತು.
ನೀವು ಬಹಿಷ್ಕೃತರೆಂದು ನಿಮಗೆ ಅನಿಸುತ್ತಿದೆಯೇ? ಈಜಿಪ್ಟಿನ ಹಾಗರಳ ಬಗ್ಗೆ ಓದಿರಿ, ಆಕೆ ತಿರಸ್ಕರಿಸಲ್ಪಟ್ಟಾಗ, ದೇವರ ಅದ್ಭುತಗಳನ್ನು ಕಂಡಳು.
ನೀವು ಜೀವನದ ತೊಂದರೆಗಳ ಆಳದಲ್ಲಿ ಮುಳುಗುತ್ತಿದ್ದೀರಾ? ಯೇಸು ಕ್ರಿಸ್ತನು ತನ್ನ ಶಿಷ್ಯರನ್ನು ದೋಣಿಯಿಂದ ರಕ್ಷಿಸಲು, ತನ್ನ ಕೈಯನ್ನು ಚಾಚಿ, ಒಂದು ದೊಡ್ಡ ಬಿರುಗಾಳಿಯನ್ನು ಶಾಂತಗೊಳಿಸಿದ್ದನು ಎಂಬುದರ ಕುರಿತು ಸತ್ಯವೇದದಲ್ಲಿ ಓದಿರಿ.
ಅದ್ಭುತವಾದ ಉತ್ತರಗಳು
ನಾವು ಸತ್ಯವೇದವನ್ನು ಓದುತ್ತಿರುವಾಗ, ಸಕಾರಾತ್ಮಕ ನಿರೀಕ್ಷೆಯಿಂದ ಪ್ರಾರ್ಥಿಸುವ ಆತ್ಮವಿಶ್ವಾಸದಿಂದ ತುಂಬಿರುತ್ತೇವೆ. ಯೇಸು ಕ್ರಿಸ್ತನು: “ನೀವು ನಂಬಿಕೊಂಡು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅದನ್ನೆಲಾ ಹೊಂದುವಿರಿ” ಎಂದು ಹೇಳಿದ್ದನು. (ಮತ್ತಾಯ 21:22). ಕರ್ತನಿಂದ ಅದ್ಭುತಗಳನ್ನು ಪಡೆದುಕೊಂಡ ಇತರರ ಕಥೆಗಳನ್ನು ನಾವು ಓದುವಾಗ, ನಮ್ಮ ಪ್ರಾರ್ಥನೆಗಳನ್ನು ಪರಲೋಕದೆಡೆಗೆ ಕೊಂಡೊಯ್ಯಲು ನಮ್ಮ ಹೃದಯಗಳೂ ನಿರೀಕ್ಷೆಯಿಂದ ಸ್ಪೂರ್ತಿಗೊಳ್ಳುತ್ತವೆ.
ನಿಮಗೆ ಪವಾಡ ಬೇಕೇ? ಸತ್ಯವೇದದಲ್ಲಿರುವ ಅದ್ಭುತಗಳಿಂದ ಪ್ರೇರಿತರಾಗಿರಿ ಮತ್ತು ನಿಮ್ಮ ಜೀವನದಲ್ಲಿಯೂ ಒಂದು ಅದ್ಭುತವನ್ನು ಮಾಡುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಇಂದು ದೇವರು ಖಂಡಿತವಾಗಿಯೂ ನಿಮ್ಮ ಪ್ರಾರ್ಥನೆಯನ್ನು ಆಲಿಸುವನು!
ಸತ್ಯವೇದದಲ್ಲಿನ ಅದ್ಭುತಗಳ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯನ್ನು ಉಪಯೋಗಿಸಿ ನಮ್ಮನ್ನು ಸಂಪರ್ಕಿಸಿ.
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications