ನೀವು ಸ್ವಂತವಾಗಿ ಆಲೋಚಿಸುವದು ಹೇಗೆ

ನೀವು ಸ್ವಂತವಾಗಿ ಆಲೋಚಿಸುವದು ಹೇಗೆ

ಸಾರಾಂಶ

ದೇವರ ಪ್ರವಾದಿಗಳು "ಬಾಬೆಲ್" ಎಂಬ ಸಾಂಕೇತಿಕ ಗುರುತಿನ ಹೆಸರಿನಿಂದ ವಿವರಿಸಲ್ಪಟ್ಟ ಒಂದು ಅಪಾಯಕಾರಿ ಧಾರ್ಮಿಕ ಶಕ್ತಿಯ ಬಗ್ಗೆ ಮುಂತಿಳಿಸಿದ್ದರು. ಪ್ರವಾದನೆಯ ಪ್ರಕಾರ, ಈ ಶಕ್ತಿಯು ನಮ್ಮನ್ನು ಸುಳ್ಳು ಆರಾಧನೆಗೆ ಒತ್ತಾಯಿಸುತ್ತದೆ ಮತ್ತು ಮನವೊಲಿತ್ತದೆ. ಇಂಥಹ ಸಂದರ್ಭದಲ್ಲಿ ನಮ್ಮ ಸುರಕ್ಷತೆಗೆ ಇರುವ ಏಕೈಕ ಮಾರ್ಗ: ನಮ್ಮ ಬಗ್ಗೆ ಯೋಚಿಸುವುದು ಮತ್ತು ದೇವರಿಂದ ಪ್ರಕಟಿಸಲ್ಪಟ್ಟ ವಾಕ್ಯಕ್ಕೆ ಕಟ್ಟುನಿಟ್ಟಾದ ನಿಷ್ಠೆತೋರುವದು. ಜಾಗತಿಕ ಬಿಕ್ಕಟ್ಟಿನ ಕಾಲದಲ್ಲಿ ನಾವು ಬುದ್ಧಿವಂತ, ಚಿಂತನಶೀಲ ವಿಶ್ವಾಸಿಗಳಾಗಿರಲು ನಮ್ಮ ಮನಸ್ಸನ್ನು ಹೇಗೆ ಕಸರತ್ತು ಮಾಡಬೇಕೆಂದು ಈ ಕರಪತ್ರವು ನಮಗೆ ಹೇಳಿಕೊಡುತ್ತದೆ.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

21 ಭಾಷೆಗಳು

ಪುಟಗಳು

6

ಡೌನ್ ಲೋಡ್

ದೀರ್ಘವಾದ ನಡಿಗೆಯ ನಂತರ ನಾವು ಆಗತಾನೇ ಗುನುಂಗ್ ದತುಕ್ ನ ಶಿಖರವನ್ನು ತಲುಪಿದ್ದೆವು. ಈ ದೃಶ್ಯವನ್ನು ಆನಂದಿಸಲು ನಾನು ನನ್ನ ಹೊಸ ಸ್ನೇಹಿತ ಅಡ್ಜಾಕ್ ನೊಂದಿಗೆ ಕುಳಿತೆ. ಸ್ವಲ್ಪ ಸಮಯದ ನಂತರ, ನಮ್ಮ ಸಂಭಾಷಣೆಯು ಧಾರ್ಮಿಕ ವಿಷಯಗಳ ಕಡೆಗೆ ತಿರುಗಿತು.

“ನಾನೊಬ್ಬ ಸ್ವತಂತ್ರ ಚಿಂತಕ,” ಎಂದು ಹೇಳಿದರು ಅಡ್ಜಾಕ್. “ಪ್ರಪಂಚದ ಬಗ್ಗೆ ನನಗೆ ನನ್ನದೇ ಆದ ದೃಷ್ಟಿಕೋನಗಳಿವೆ.”

“ಆಹ್ ಹೌದಾಎಂದು ನಾನು ಉತ್ತರಿಸಿದೆ. “ಅನೇಕ ಮಲೇಷಿಯಾದ ಯುವಕರು ತಾವು ಸ್ವತಂತ್ರ ಚಿಂತಕರು ಎಂದು ಗುರುತಿಸುವುದನ್ನು ನಾನು ಕೇಳಿದ್ದೇನೆ.”

ಅಡ್ಜಾಕ್ ನಕ್ಕನು. “ನಾವು ನಮ್ಮದೇ ಆದ ರೀತಿಯಲ್ಲಿ ಯೋಚಿಸಬೇಕು. ಇಲ್ಲವಾದರೆ ಬಹಳಷ್ಟು ಗೊಂದಲಗಳು ಉಂಟಾಗುತ್ತವೆ. ಆ ಗೊಂದಲಗಳು ನಿನ್ನನ್ನು ಹುಚ್ಚನನ್ನಾಗಿ ಮಾಡಿಬಿಡಬಹುದು.”

“ಆದರೆ ನೀನು ಮನೆಗೆ ಹೋದಾಗ ಏನಾಗುತ್ತದೆ?” ಎಂದು ನಾನು ಕೇಳಿದೆ. “ಮಲೇಷಿಯಾದಲ್ಲಿ, ಅನೇಕ ಯುವಕರು ತಮ್ಮನ್ನು ತಾವು ಸ್ವತಂತ್ರ ಚಿಂತಕರು ಎಂದು ಕರೆದುಕೊಳ್ಳುತ್ತಾರೆ, ಆದರೆ ಮನೆಯಲ್ಲಿ, ನೀವು ಇಸ್ಲಾಮಿಕ್ ಅಥವಾ ಬೌದ್ಧ ಆಚರಣೆಗಳಲ್ಲಿ ಭಾಗವಹಿತ್ತೀರಿ ಎಂಬ ನಿರೀಕ್ಷೆಯಿರುತ್ತದೆ. ಆಗ ನೀನು ನಿನ್ನ ತಂದೆ ತಾಯಿಗೆ ಏನು ಹೇಳುವೆ?”

“ನಾನು ಅವರಿಗೆ ಏನೂ ಹೇಳುವದಿಲ್ಲ,” ಎಂದು ಅಡ್ಜೆಕ್ ಉತ್ತರಿಸಿದ್ದ. “ಅವರಿಗೆ ಏನು ಬೇಕೋ ಅದರೊಂದಿಗೆ ನಾನು ಹೋಗುತ್ತೇನೆ. ನಾನು ಸ್ವತಂತ್ರವಾಗಿ ಯೋಚಿಸಬಲ್ಲೆ, ಆದರೆ ಅದನ್ನು ನಾನು ನನ್ನಲ್ಲಿಯೇ ಇಟ್ಟುಕೊಳ್ಳಬೇಕು.”

ಸ್ವತಂತ್ರವಾದ ಚಿಂತನೆಗಳು ಬಹು ಮುಖ್ಯವೇ?

ಪ್ರಪಂಚದ ಕೆಲವು ಭಾಗಗಳಲ್ಲಿ, ತಪ್ಪು ನಂಬಿಕೆಯನ್ನುನೀವು ಪ್ರತಿಪಾದಿಸಿದಾಗ ಅವರು ನಿಮ್ಮನ್ನು ನಿಮ್ಮ ಸಮುದಾಯದಿಂದ ಬಹಿಷ್ಕರಿಸಬಹುದು, ನಿಮ್ಮನ್ನು ನಿಮ್ಮ ಕೆಲಸದಿಂದಲೂ ತೆಗೆದುಹಾಕಬಹುದು ಅಥವಾ ನಿಮ್ಮನ್ನು ಕೊಲ್ಲಲೂಬಹುದು. ಸ್ವತಃ ನಿಮಗಾಗಿ ಯೋಚಿಸುವುದು ಅಪಾಯಕಾರಿಯಾಗಬಹುದು. ಆದರೆ ಇದು ಮುಖ್ಯವೇ? 

ನಮ್ಮ ಜಗತ್ತು ಒಳ್ಳೆಯ ಆಲೋಚನೆಗಳು ಮತ್ತು ಕೆಟ್ಟ ಆಲೋಚನೆಗಳಿಂದ ತುಂಬಿದೆ. ಒಳ್ಳೆಯದನ್ನು ಕೆಟ್ಟದರಿಂದ ಬೇರ್ಪಡಿಸಲು ಆರಂಭಿಸುವ ಒಂದು ಮುಖ್ಯವಾದ ಮಾರ್ಗವೆಂದರೆ ಅವುಗಳ ಬಗ್ಗೆ ಯೋಚಿಸುವುದು ಮತ್ತು ಮಾತನಾಡುವುದು. ನೀವು ಚಿನ್ನ, ಕೇಸರಿ ಅಥವಾ ಐಫೋನ್ ನಂತಹ ದುಬಾರಿ ವಸ್ತುಗಳೇನನ್ನಾದರೂ ಖರೀದಿಸಿದರೆ, ನೀವು ಅದರ ಬೆಲೆಯನ್ನು ಪಾವತಿಸಿ ತಕ್ಷಣ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ. ನೀವು ಕೊಂಡುಕೊಂಡ ವಸ್ತು ಅತ್ಯುತ್ತಮ ಗುಣಮಟ್ಟದ್ದೇ ಎಂದು ಖಚಿತಪಡಿಸಿಕೊಳ್ಳಲು, ನೀವು ಅದನ್ನು ಪರಿಶೀಲಿಸುತ್ತೀರಿ ಮತ್ತು ಅವುಗಳಿಗೆ ಪ್ರತಿಸ್ಪರ್ಧಿಗಳೆನಿಸಿದ ಉತ್ಪನ್ನಗಳೊಂದಿಗೆ ಹೋಲಿಸುತ್ತೀರಿ. ಈ ರೀತಿಯಾಗಿಯೇಆಲೋಚನೆಗಳನ್ನು ಪರಿಶೀಲಿಸಬೇಕು. 

ಜಗತ್ತಿನಲ್ಲಿ ಬಹಳಷ್ಟು ಗೊಂದಲಗಳಿವೆ, ಮತ್ತು ಜನರು ತಮ್ಮದೇ ಆದ ಗೊಂದಲದ ಆಲೋಚನೆಗಳನ್ನು / ಚಿಂತನೆಗಳನ್ನು ಸಮುದಾಯದ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸಿದಾಗ ಸಮಾಜ ಹದಗೆಡುತ್ತದೆ. ನಾನೀಗ ಒಂದು ಬಹು ಮುಖ್ಯವಾದ ಪ್ರವಾದನೆಯನ್ನು ಕುರಿತು ಪ್ರಸ್ತಾಪ ಮಾಡುತ್ತೇನೆ. “ಯೇಸು ಕ್ರಿಸ್ತನ ಪ್ರಕಟನೆ” ಎಂದು ಕರೆಯಲ್ಪಡುವ ಒಂದು ಅತ್ಯಂತ ಹಳೆಯ ಪುಸ್ತಕದಲ್ಲಿ, ಒಂದು ಪ್ರವಾದನೆಯು, ತಮ್ಮ ಗೊಂದಲಮಯ ಧಾರ್ಮಿಕ ದೃಷ್ಟಿಕೋನಗಳನ್ನು ಇತರರ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸುವ ಜನರ ಬಗ್ಗೆ ಹೇಳುತ್ತದೆ. ಅದು ಹೇಳುವುದು: “ಬಿದ್ದಳು, ಬಿದ್ದಳು ಬಾಬೆಲೆಂಬ ಮಹಾ ನಗರಿಯು ಬಿದ್ದಳು. ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” (ಪ್ರಕಟನೆ 14:8).

ಈ ಸಾಂಕೇತಿಕ ಪದಗಳನ್ನು ಅರ್ಥ ಮಾಡಿಕೊಳ್ಳುವದು ಕಷ್ಟವೇನಲ್ಲ. ಬಾಬೆಲ್ ಪ್ರಸಿದ್ದವಾದ ಪುರಾತನ ನಗರ, ಆದರೆ ಆ ಹೆಸರಿನ ಅರ್ಥವೇ: “ಗೊಂದಲ.” ಈ ನಗರವು “ಬಿದ್ದಿದ್ದು”, ಆಕೆಯು ಗೊಂದಲಕ್ಕೊಳಗಾಗಿದ್ದಾಳೆ ಎಂಬ ಕಾರಣಕ್ಕಾಗಿ ಅಲ್ಲ, ತನ್ನ ಗೊಂದಲವನ್ನು ಬಿಡಲು ಬಯಸದ ಕಾರಣಕ್ಕಾಗಿ ಬಿದ್ದಿದ್ದಾಳೆ. ಅವಳು ತನ್ನ ಆಧ್ಯಾತ್ಮಿಕ ವ್ಯಭಿಚಾರದಲ್ಲಿ ಸೇರುವಂತೆ ಜನಾಂಗಗಳನ್ನು ತಪ್ಪುದಾರಿಗೆಳೆ ಯುತ್ತಾಳೆ, ಅಂದರೆ: ಸುಳ್ಳು ಮತ್ತು ಸತ್ಯಾರಾಧನೆಯನ್ನು ಬೆರೆಸುವ ಮೂಲಕ ದೇವರಿಗೆ ವಿಶ್ವಾಸದ್ರೋಹ ಬಗೆಯುವುದು. ಈ ತಪ್ಪಾದ ಆಲೋಚನೆಗಳನ್ನು ಸಾಧಾರಣ ಗೊಳಿಸಲಾಗುತ್ತದೆ ಮತ್ತು ಸ್ವೀಕರಿಸಲಾಗುತ್ತದೆ. “ಬಾಬೆಲಿನ” ಕುರಿತಾದ ಈ ಪ್ರವಾದನೆಯು, ಒಂದು ಜಾಗತಿಕ ಆಧ್ಯಾತ್ಮಿಕ ಸಂಸ್ಥೆಯನ್ನು ಸೂಚಿಸುತ್ತದೆ, ಆ ಸಂಸ್ಥೆ ಆಧ್ಯಾತ್ಮಿಕ ದೋಷವನ್ನು (ತಪ್ಪಾದ ಬೋಧನೆಯನ್ನು) ಸಾಮಾನ್ಯೀಕರಿಸುವದಲ್ಲದೆ, ಅಂತಿಮವಾಗಿ ಸತ್ಯಕ್ಕೆ ಅಂಟಿಕೊಂಡಿರುವ ಜನರ ಮೇಲೆ ಅದನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತದೆ.

ಯೇಸುವಿನ ಪ್ರಕಟನೆಯು, ಇದು ನಮ್ಮ ಕಾಲದಲ್ಲಿ ನಡೆಯುತ್ತದೆಯೆಂದು ಭವಿಷ್ಯವಾಣಿ ನುಡಿದಿದೆ. ಬಹುಶಃ ಇವು ನೆರವೇರುತ್ತಿರುವದನ್ನು ನೀವು ಈಗಾಗಲೇ ನೋಡಿರಬಹುದು. ತಪ್ಪಾದ ಕಲ್ಪನೆಗಳಿಂದ ದೇವರನ್ನು ಪ್ರತಿನಿಧಿಸುವ ಜನರಿದ್ದಾರೆಯೇ? ಇಂತಹ ತಪ್ಪು ಬೋಧನೆಯು ನಿಮ್ಮ ಪ್ರಜ್ಞೆಗೆ ದಕ್ಕೆಯನ್ನುಂಟುಮಾಡುತ್ತಿದೆಯೆ?

ಹೌದು, ಈ ಕಾರಣಕ್ಕಾಗಿಯೇ ಸ್ವತಂತ್ರ ಆಲೋಚನೆ/ಚಿಂತನೆ ಬಹು ಮುಖ್ಯ.

ನಿಮಗಾಗಿ ಚಿಂತನೆ ಮಾಡುವದು ಹೇಗೆ

ಬಹಳಷ್ಟು ಜನ ತಮ್ಮ ಸಮುದಾಯದ ಧರ್ಮವನ್ನು ಅನುಸರಿಸಲು ಸಂತೃಪ್ತರಾಗಿರುತ್ತಾರೆ. ಅವರು ತಮ್ಮ ನಂಬಿಕೆಗಳ ಆಧಾರದ ಮೇಲೆ ಚಿಂತನೆ ನಡೆಸುವದಿಲ್ಲ. ಅವರು ಅರ್ಥಹೀನ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುತ್ತಾರೆ, ಅಥವ ಒಳ್ಳೆಯದನ್ನು ಉಂಟುಮಾಡುವದಕಿಂತ ಹೆಚ್ಚು ಹಾನಿಯನ್ನು ಉಂಟುಮಾಡುವ ಧಾರ್ಮಿಕ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಬಹಳಷ್ಟು ಸಲ ನಮಗೆ, ದೇವರ ಕಡೆಗೆ ನಮ್ಮನ್ನು ಕೈಹಿಡಿದು ನಡೆಸಬೇಕಾದ ಧಾರ್ಮಿಕ ನಾಯಕರೇ ಸ್ವತಃ ಭ್ರಷ್ಟಾಚಾರದಿಂದ ತುಂಬಿರುತ್ತಾರೆ.

ನಾವು ಸತ್ಯವನ್ನು ಕಂಡುಕೊಳ್ಳುವದು ಹೇಗೆ? ನಾವು ಪ್ರವಾದಿಗಳನ್ನು ನಂಬಬೇಕೆಂದು ನಾನು ನಿಮಗೆ ಸಲಹೆಯನ್ನು ನೀಡುತ್ತೇನೆ. ಏಕೆ? ಏಕೆಂದರೆ ಅದಕ್ಕೆ ಮೂರು ಕಾರಣಗಳಿವೆ:

  1. ಪ್ರವಾದಿಗಳು ಭವಿಷ್ಯತ್ ಕಾಲಕ್ಕೆ ಸಂಬಂಧಿಸಿದಂತೆ ಆಶ್ಚರ್ಯಕರ ಜ್ಞಾನವನ್ನು ತೋರಿಸುತ್ತಾರೆ. ಪ್ರವಾದಿಯಾದ ದಾನಿಯೇಲನು ಯೂರೋಪ್ ಲೋಕವನ್ನೇ ವಸಾಹತುಗೊಳಿಸುವ ಅದರ ಐತಿಹಾಸಿಕ ಉದಯದ ಬಗ್ಗೆ ಪ್ರವಾದನೆ ನುಡಿದಿದ್ದನು. ಯೇಸು ಕ್ರಿಸ್ತನು (ಇಸಾ ಅಲ್-ಮಾಸಿಹ್ ಎಂದೂ ಕರೆಯಲ್ಪಡುತ್ತಾನೆ) ಕ್ರಿ. ಶ. 70ರಲ್ಲಿ ಆಗಲಿರುವ ಯೆರೂಸಲೇಮಿನ ವಿನಾಶ ಕುರಿತು ಭವಿಷ್ಯ ನುಡಿದಿದ್ದನು. ಪ್ರವಾದಿಯಾದ ಮೋಶೆಯು (ಮೂಸ) ಇಸ್ಮಾಯೇಲನ ಇತಿಹಾಸವನ್ನು ಅಂತ್ಯಕಾಲದವರೆಗೆ ಪ್ರವಾದಿಸಿದನು

  2. ಪ್ರವಾದಿಗಳು ಆರೋಗ್ಯದ ಆಶ್ಚರ್ಯಕರ ವೈಜ್ಞಾನಿಕ ಜ್ಞಾನವನ್ನು ತೋರಿಸಿದ್ದಾರೆ. ಸುಮಾರು 3,500 ವರ್ಷಗಳ ಹಿಂದೆ ಜೀವಿಸಿದ್ದ ಪ್ರವಾದಿ ಮೋಶೆಯು, ಕ್ವಾರಂಟೈನ್, ಒಳಚರಂಡಿಯ ನೈರ್ಮಲ್ಯಯುಕ್ತ ವಿಲೇವಾರಿ ಮತ್ತು ಕ್ರಿಮಿನಾಶಕ ತತ್ವಗಳನ್ನು ವಿವರಿಸಿದ್ದನು. ಮೋಶೆ, ಪ್ರಾಣಿಗಳನ್ನು ಶುದ್ದ ಮತ್ತು ಅಶುದ್ಧವೆಂದು ವಿಂಗಡಿಸಿದ್ದನು. ಮತ್ತು ನಾವು ಶುದ್ದ ಪ್ರಾಣಿಯ ಮಾಂಸವನ್ನು ತಿನ್ನುವಾಗ, ರಕ್ತ ಅಥವಾ ಕೊಬ್ಬನ್ನು ತಿನ್ನಬಾರದೆಂದು ಮೋಶೆ ನಮಗೆ ಹೇಳಿದ್ದನು. ಇಂದಿಗೂ ಸಹ, ಮೋಶೆಯ ಆಹಾರ ಮತ್ತು ನೈರ್ಮಲ್ಯ ಕಾನೂನುಗಳನ್ನು ಅನುಸರಿಸುವವರು ಸಾಮಾನ್ಯ ಜನರಿಗಿಂತ 15 ವರ್ಷಗಳ ಹೆಚ್ಚಿನ ಆಯುಷ್ಯ ಪಡೆದು ಸುಖ ಜೀವನ ಸಾಗಿಸುತ್ತಿದ್ದಾರೆ.

  3. ತನ್ನಲ್ಲಿ ಮತ್ತು ತನ್ನ ಪ್ರವಾದಿಗಳಲ್ಲಿ ನಂಬಿಕೆಯಿಡುವ ವಿಶ್ವಾಸಿಗಳ ಪ್ರಾರ್ಥನೆಗಳಿಗೆ ದೇವರು ಉತ್ತರ ದಯಪಾಲಿಸುತ್ತಾನೆ. 

ಪ್ರವಾದಿಗಳ ಬರಹಗಳು ಮಾರ್ಗದರ್ಶನಗಳಿಂದ ತುಂಬಿವೆಆದರೆ ಅವುಗಳಿಂದ ಪ್ರಯೋಜನ ಪಡೆಯಲಿಕ್ಕಾಗಿ, ನಾವು ವಿಮರ್ಶಾತ್ಮಕವಾಗಿ ಆಲೋಚನೆ ಮಾಡುವದನ್ನೂ, ನಮ್ಮ ನಂಬಿಕೆಗಳನ್ನು ಪರೀಕ್ಷೆಗೆ ಒಳಪಡಿಸುವದನ್ನೂ ಮತ್ತು ನಮ್ಮ ನಂಬಿಕೆಗೆ ಬೇಕಾದ ಸಾಕ್ಷಿ-ಪುರಾವೆಗಳ ಪರಿಶೀಲನೆ ಮಾಡುವದನ್ನು ಕಲಿಯಬೇಕು. ಆಲೋಚಿಸುವುದು ನಿಜ ಧರ್ಮದ ಒಂದು ಬಹು ಮುಖ್ಯ ಭಾಗ.

ಈಗ, ನಾವು ಒಂದು ತಪ್ಪನ್ನು ತನಿಖೆ ಮಾಡಿದಾಗ ಏನಾಗುತ್ತದೆ? ಪ್ರಾರಂಭದಲ್ಲಿ ನಿಜ ಅನಿಸಬಹುದು. ಆದರೆ ನಾವು ಸಾಕ್ಷಿಗಾಗಿ ಹುಡುಕುತ್ತಿದ್ದಂತೆ, ನಮ್ಮ ಆಲೋಚನೆಯಲ್ಲಿಯೇ ಸಮಸ್ಯೆಯನ್ನು ನೋಡಲಾರಂಭಿಸುತ್ತೇವೆ. 

ಸತ್ಯವು ಕೇವಲ ವಿರುದ್ಧವಾಗಿದೆ ಎಚ್ಚರಿಕೆಯಿಂದ ಪರಿಶೀಲಿಸಿದಾಗ ಸತ್ಯ ಎಂದೂ ಎಲ್ಲಿಯೂ ಕಳೆದುಹೋಗುವದಿಲ್ಲ. ನಾವು ಶೋಧಿಸಿದಷ್ಟು, ಹೆಚ್ಚಿನ ಸತ್ಯವನ್ನು ನಾವು ಕಂಡುಕೊಳ್ಳುತ್ತೇವೆ. 

ವಿಶ್ವಾಸಿಗಳು ಲೋಕದಲ್ಲಿ ಅತ್ಯಂತ ಬುದ್ಧಿವಂತರಾಗಿರಬೇಕು, ಏಕೆಂದರೆ ದೇವರು ನಮ್ಮನ್ನು ವಿವೇಕದ ಮಾರ್ಗದಲ್ಲಿ ಮುನ್ನೆಡೆಸುತ್ತಾನೆ. ಮುಕ್ತವಾಗಿ ಆಲೋಚಿಸಲು ಅಥವ ಪ್ರಶ್ನೆಗಳನ್ನು ಕೇಳಲು ನಿಮಗೆ ಅನುಮತಿಸದ ಸನ್ನಿವೇಶದಲ್ಲಿ ನೀವಿದ್ದರೆ, ಆ ಸನ್ನಿವೇಶ ದೇವರಿಂದ ಬಂದದ್ದಲ್ಲ. ಆತನು ನಾವು ನಡೆಸಬಹುದಾದ ಆಳವಾದ ತನಿಖೆಯನ್ನು ಸ್ವಾಗತಿಸುತ್ತಾನೆ, ಏಕೆಂದರೆ ಸತ್ಯಕ್ಕೆ ತನಿಖೆಯನ್ನು ಎದುರಿಸುವಷ್ಟು ಬಲಶಕ್ತಿ ಇರುತ್ತದೆ. ಆದರೆ ಬಾಬಿಲೋನ್ ನಿಮ್ಮನ್ನು ಸುಳ್ಳಿನ ಕಡೆಗೆ ಮನವೊಲಿಸುತ್ತದೆ ಮತ್ತು ನಿಮ್ಮ ವೈಚಾರಿಕತೆಯ ಬಾಗಿಲನ್ನು ಮುಚ್ಚಿ ನಿಮ್ಮನ್ನು ಸುಳ್ಳಿನ ಪ್ರಪಂಚದಲ್ಲಿಯೇ ಕೊಡಿಹಾಕುತ್ತದೆ.

ನೀವು ಬಾಬೆಲೋನ್ ನಲ್ಲಿದ್ದೀರಿ ಎಂಬ ಅನಿಸಿಕೆಯ ಗೊಂದಲಕ್ಕೆ ಸಿಕ್ಕಿಹಾಕಿಕೊಂಡಿದ್ದರೆ, ಹೊರಗೆ ಬನ್ನಿ! ದೇವರ ವಿವೇಕದ ಮಾರ್ಗಕ್ಕೆ ಬನ್ನಿ. ನೀವೇ ಚೆನ್ನಾಗಿ ಯೋಚಿಸಿರಿ ಮತ್ತು ನಿಮ್ಮಲ್ಲಿಯೇ ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳಿ. ಆಗ ನೀವು ನಿರಾಸರಾಗುವದಿಲ್ಲ. 

ನಿಮಗೆ ಯೇಸುಕ್ರಿಸ್ತನ ಪ್ರಕಟನೆಯ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಬೇಕೆಂಬ ಹಂಬಲವಿದೆಯೇ? ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯನ್ನು ಉಪಯೋಗಿಸಿಕೊಂಡು ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟಿಸ್: ಕನ್ನಡ ಜೆ. ವಿ. ಬೈಬಲ್  ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, ೨೦೧೬

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover