ವಿಶ್ರಾಂತಿರಹಿತ ಲೋಕದಲ್ಲಿ ವಿಶ್ರಾಂತಿ ಪಡೆಯಿರಿ

ವಿಶ್ರಾಂತಿರಹಿತ ಲೋಕದಲ್ಲಿ ವಿಶ್ರಾಂತಿ ಪಡೆಯಿರಿ

ಸಾರಾಂಶ

ಒತ್ತಡ ಮತ್ತು ಅತಿಕೆಲಸ ಅನೇಕ ಜನರನ್ನು ಅವರ ಸಹಜ ಮರಣದ ಸಮಯಬರುವ ಮೊದಲೇ ಸಮಾಧಿ ಸೇರಿಸುತ್ತದೆ. ಆದರೆ ಸೃಷ್ಟಿಯ ಸಮಯದಲ್ಲಿಯೇ ದೇವರು ಒತ್ತಡದ ಸಮಸ್ಯೆಗೆ ಪರಿಹಾರ ವಿನ್ಯಾಸಗೊಳಿಸಿದ್ದನು: ಆ ಪರಿಹಾರವೇ: ವಿಶ್ರಾಂತಿಯ ದಿನ. ಈ ಪರಿಶುದ್ಧ ದಿನವನ್ನು, ದೇವರು, ಮಾನವರು ತಮ್ಮ ಕೆಲಸದಿಂದ ವಿಶ್ರಮಿಸಿ ಆತನೊಂದಿಗೆ ಸಮಯ ಕಳೆಯುವದಕ್ಕಾಗಿ ಆತನ ಆಶಿರ್ವಾದದೋಪಾದಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಜನರು ಆ ದಿನವನ್ನು ನೆನಪಿಟ್ಟುಕೊಳ್ಳಲು ದೇವರು ಆಜ್ಞಾಪಿಸಿದಾಗ್ಯೂ, ಹೆಚ್ಚಿನ ಜನರು ಈ ವಿಶೇಷ ದಿನವನ್ನು ಮರೆತ್ತಿರುವದು ಮಾತ್ರವಲ್ಲದೆ ಮತ್ತು ಆ ದಿನವನ್ನು ಸೃಷ್ಟಿಮಾಡಿದ ಸೃಷ್ಟಿಕರ್ತನನ್ನೂ ಸಹ ಮರೆತಿರುವದು ದೌರ್ಭಾಗ್ಯವೇ ಸರಿ.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

22 ಭಾಷೆಗಳು

ಪುಟಗಳು

6

ಡೌನ್ ಲೋಡ್

ಮಿಟಾ ಡುರಾನ್ ಎಂಬಾಕೆ ಸತ್ತುಹೋದಳು. 24 ವರ್ಷದ, ಆಕರ್ಷಕ ಇಂಡೋನೇಷ್ಯಾದ ನಕಲು ಬರಹಗಾರಳಾಗಿದ್ದ (ಕಾಪಿರೈಟರ್ ಆಗಿದ್ದ) ಮಿಟಾ ತನ್ನ ಮೇಜಿನ ಬಳಿ ಕುಸಿದುಬಿದ್ದಿದ್ದಳು. ಆಕೆಗೆ ಏನಾಯಿತು? 

ಮಿಟಾ ಜಾಹಿರಾತಿಗೆ ಸಂಬಂಧಪಟ್ಟ ಒಂದು ಏಜೆನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲಿ ನಿರೀಕ್ಷೆ ಬಹಳವಾಗಿತ್ತು ಮತ್ತು ಕೆಲಸದ ಹೊರೆ ಬಹು ಭಾರವಾಗಿತ್ತು. ಅವಳು ಸಾವಿಗೀಡಾಗುವ ಸ್ವಲ್ಪ ಮುಂಚೆಯೇ, ಅವಳು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಆಯಾಸದ ಕೆಲಸದ ಬಗ್ಗೆ ಹೀಗೆ ಬರೆದಿದ್ದಳು: “ಈ ರಾತ್ರಿಯು ಸಹ, ನಾನು ಸತತ ಎಂಟನೇ ದಿನವೂ ಕಚೇರಿಗೆ ಕೀಲಿಗಳನ್ನು ಒಯ್ಯುತ್ತಿದ್ದೇನೆ.... ನನ್ನಲ್ಲಿ ಜೀವವೇ ಉಳಿದಿಲ್ಲ.”

ರೆಡ್ ಬುಲ್ ನ, ಏಷ್ಯನ್ ಆವೃತ್ತಿಯಾದ, ಕೆಪಿನ್ ಯುಕ್ತ ಪಾನೀಯವಾದ, ಕ್ರಾಟಿಂಗ್ ಡೇಂಗ್ ಅನ್ನು ಆಕೆ ತನ್ನ ಶಕ್ತಿಗಾಗಿ ಹೆಚ್ಚು ಅವಲಂಬಿಸಿದ್ದಳು. ಆಕೆಯ ಕೊನೆಯ ಆನ್ ಲೈನ್ ನ ಹೇಳಿಕೆ “30 ಗಂಟೆಗಳ ಕಾಲ ಸತತವಾಗಿ ಕೆಲಸಮಾಡಿದ್ದೇನೆ ಮತ್ತು ಇನ್ನೂ ಶಕ್ತಿಯುತವಾಗಿ ಮುಂದುವರಿಸುತ್ತಿದ್ದೇನೆ.” ನಂತರ ಅವಳು ತನ್ನ ಮೇಜಿನ ಬಳಿ ಕುಸಿದುಬಿದ್ದಳು ಮತ್ತು ಎಂದಿಗೂ ಮತ್ತೆ ಆಕೆ ಎಚ್ಚರಗೊಳ್ಳಲಿಲ್ಲ. 

ಏನಾಯಿತು? ಮಿಟಾ ವಿಪರೀತ ಕೆಲಸದಿಂದ ಸತ್ತಿದ್ದಳು.

ಇಂದು, ನಮ್ಮಲ್ಲಿಯೂ ಸಹ ಅನೇಕರು ಬಿಡುವಿಲ್ಲದ ಕೆಲಸದ ವೇಳಾಪಟ್ಟಿಗಳನ್ನು ಹೊಂದಿದ್ದಾರೆ. ಸಮಾಜವು ಹೆಚ್ಚು ಕೆಲಸ ಮಾಡಿ, ಹೆಚ್ಚು ಸಂಪಾದನೆ ಮಾಡಿ ಮತ್ತು ಹೆಚ್ಚು ಖರೀದಿಸಿ ಎಂದು ನಮ್ಮನ್ನು ಪ್ರೇರೇಪಿಸುತ್ತಿದೆ. ನಾವು ಒತ್ತಡ, ನಿದ್ರಾಹೀನತೆ ಮತ್ತು ಮಾನಸಿಕ ಹೊರೆಯಿಂದ ಬಳಲುತ್ತಿದ್ದೇವೆ. 

ನಾವು ಮಿಟಾ ಡುರಾನ್ ಳಂತೆ ನಾವು ನಮ್ಮನ್ನು ಕೊಂದುಕೊಳ್ಳದಿರಬಹುದು, ಆದರೆ ಜೀವನವು ಭಾರಿ ಹೊರೆಯಿಂದ ಕೂಡಿರಬಹುದು. ನಮ್ಮ ವಿಷಯದಲ್ಲಿ ದೇವರ ಉದ್ದೇಶ ಇದೇ ಆಗಿದೆಯೇ? ಆತನು ಶಾಂತಿಯನ್ನು ನೀಡುವವನು. ನಾವು ಅತಿಯಾಗಿ ದುಡಿದಾಗ, ಶಾಂತಿಯನ್ನು ಅನುಭವಿಸಿದ್ದೇವೆಯೇ? ಖಂಡಿತ ಇಲ್ಲ!

ನಾವು ದಣಿವಿನಿಂದ ಬಳಲಿಹೋಗಿದ್ದರೆ, ದೇವರು, ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಬಯಸುವ ಒಂದು ಸಂಗತಿಯನ್ನು ನಾವು ಮರೆತಿರಬಹುದು. ದೇವರು ವಿಶ್ರಾಂತಿಯ ಬಗ್ಗೆ ಏನು ಹೇಳಿದ್ದಾನೆಂದು ನಾವು ಈಗ ಕಂಡುಹಿಡಿಯೋಣ. 

“ಪೌಜ್” ಬಟನ್ ಅನ್ನು ಒತ್ತಿದಾಗ

ದೇವರು ಅತ್ಯಂತ ದಯಾಳು ಮತ್ತು ಕರುಣಾಮಯಿ. ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರಿನಂತೆ ಮಾನವರು ತಮ್ಮ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ರೀಚಾರ್ಜ್ ಮಾಡಲು ಸಮಯದ ಅಗತ್ಯವಿದೆ ಎಂದು ಆತನು ತಿಳಿದಿದ್ದನು. ಆದುದರಿಂದ, ಪ್ರವಾದಿಯಾದ ಮೋಶೆಯು (ಮೂಸಾ ಎಂದೂ ಕರೆಯಲ್ಪಡುವವನು) ದೇವರ ಆಜ್ಞೆಯನ್ನು ಸತ್ಯವೇದದಲ್ಲಿ ಹೀಗೆ ದಾಖಲಿಸಿದನು:

ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವದಕ್ಕೆ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಆರು ದಿವಸಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ. ಅದರಲ್ಲಿ ನೀನು ಯಾವ ಕೆಲಸವನ್ನೂ ಮಾಡಬಾರದು (ಬೈಬಲಿನ ಮೊದಲ ಭಾಗವಾದ ಆದಿಕಾಂಡದ ಎರಡನೇ ಪುಸ್ತಕವನ್ನು ವಿಮೋಚನಕಾಂಡ ಎಂದು ಕರೆದರೆ ಕುರ್ ಆನ್ ನಲ್ಲಿ ಈ ಪುಸ್ತಕವನ್ನು ತಾವ್ರತ್ ಅಥವ ತೋರಃ ಎಂದೂ ಕರೆಯಲಾಗುತ್ತದೆ: ಮೇಲಿನ ಉಲ್ಲೇಖ ವಿಮೋಚನಕಾಂಡ 20:810 ರಿಂದ ಆರಿಸಿಕೊಳ್ಳಲಾಗಿದೆ).

ದೇವರ ಬದಲಾಗದ ಆಜ್ಞೆಯು, ಏಳನೇ ದಿನವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಮಗೆ ಹೇಳುತ್ತದೆ. ಪ್ರಪಂಚದಲ್ಲಿರುವ ಅನೇಕ ಭಾಷೆಗಳಲ್ಲಿ, ವಿಶ್ರಾಂತಿಗಾಗಿ ಮೀಸಲಾದ ಈ ಏಳನೇ ದಿನವನ್ನು “ಸಬ್ಬತ್” ಎಂದು ಕರೆಯಲಾಗುತ್ತದೆ. ಸಬ್ಬತ್ ದಿನವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವಂತೆ ದೇವರು ನಮಗೆ ಏಕೆ ಆಜ್ಞಾಪಿಸಿದನು? ಏಕೆಂದರೆ, ಮರೆಗುಳಿತನವು ಆದಾಮನಿಂದ ಪ್ರಾರಂಭವಾಗಿ ಇಡೀ ಮಾನವಕುಲಕ್ಕೆ ಒಂದು ಸಮಸ್ಯೆಯಾಗಿ ಮುಂದುವರಿದಿದೆ ಎಂದು ದೇವರಿಗೆ ತಿಳಿದಿದೆ. ನಾವು ದೇವರ ಆಜ್ಞೆಗಳನ್ನು ಮರೆಯಬಾರದು, ಏಕೆಂದರೆ ನಾವು ಆತನನ್ನೂ ಮತ್ತು ಆತನ ಆಜ್ಞೆಗಳನ್ನೂ ನೆನಪಿಸಿಕೊಂಡಾಗ ಮಾತ್ರ ನಾವು ನೇರವಾದ ಮಾರ್ಗದಲ್ಲಿ ನಡೆಯುವದು ಸಾಧ್ಯ.

ಆದರೆ ಸಬ್ಬತ್ ಏಕೆ ವಿಶೇಷ ವಾಗಿದೆ? ದೇವರು ನಮಗೆ ಹೇಳುತ್ತಾನೆ,

ಏಕೆಂದರೆ, ಆರು ದಿನಗಳಲ್ಲಿ ಕರ್ತನು ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ ಅವುಗಳಲ್ಲಿರುವ ದನ್ನೆಲ್ಲ ಉಂಟು ಮಾಡಿ, ಏಳನೆಯ ದಿನದಂದು ವಿಶ್ರಮಿಸಿದನು. ಆದುದರಿಂದಲೇ ಕರ್ತನು ಸಬ್ಬತ್ ದಿನವನ್ನು ಪರಿಶುದ್ದ ದಿನವಾಗಿರಲಿ ಎಂದು ಆಶೀರ್ವದಿಸಿದನು (ವಿಮೋಚನಕಾಂಡ 20:11).

ಸಬ್ಬತ್ ದಿನವು, ದೇವರೇ ಸೃಷ್ಟಿಕರ್ತನೆಂದು ಮಾನವನಿಗೆ ನೆನಪು ಮಾಡಿಕೊಡುವ ಪ್ರಾಮುಖ್ಯ ದಿನವಾಗಿದೆ. ದೇವರಿಗೆ ದಣಿವೇ ಆಗುದಿಲ್ಲವಾದ್ದರಿಂದ, ಆತನು ಏಳನೇ ದಿನದಂದು ವಿಶ್ರಾಂತಿ ಪಡೆಯುವ ಅಗತ್ಯವಿಲ್ಲ ಎಂದು ಕೆಲವರು ಆಕ್ಷೇಪಿಸುತ್ತಾರೆ. ದೇವರು ಆಯಾಸದಿಂದ ವಿಶ್ರಮಿಸಲಿಲ್ಲ; ಆತನು ತನ್ನ ಸೃಷ್ಟಿ ಕೆಲಸವನ್ನು ಮುಗಿಸಿದ ಮೇಲೆ, ನಾವು ವಿಶ್ರಾಂತಿ ಪಡೆಯಲು ಪವಿತ್ರ ಸಮಯವನ್ನು ಗೊತ್ತುಮಾಡಿಕೊಟ್ಟನು.

ವಿಶ್ರಾಂತಿಯ ದಿನವು ಮಾನವಕುಲಕ್ಕೆ ಒಳ್ಳೇದೆಂದು ದೇವರು ನೋಡಿದನು. ಆತನು ಏಳನೆಯ ದಿನವನ್ನು ಸಬ್ಬತ್ ದಿನವೆಂದು ಸೃಷ್ಟಿಮಾಡಿದನು, ಇದರರ್ಥ ವಿರಾಮ ಅಥವಾ “ಪೌಜ್” (ನಿಲುಗಡೆ). ಹೀಗಾಗಿ, ಪ್ರತಿ ವಾರದ ಏಳನೇ ದಿನವು, “ಪೌಜ್” (ಕೆಲಸದಿಂದ ನಿಲುಗಡೆ) ಗುಂಡಿಯನ್ನು ಒತ್ತುವ ಒಂದು ವಿಶೇಷ ದಿನವಾಗಿದೆ. ನಾವು ಅತನನ್ನು ಸ್ಮರಿಸುವ ಮತ್ತು ಆರಾಧಿಸುವ ಸಲುವಾಗಿ, ಇಡೀ ದಿನದ ಕೆಲಸದಿಂದ ಮತ್ತು ಪವಿತ್ರವಲ್ಲದ ಚಟುವಟಿಕೆಗಳಿಂದ ವಿರಾಮ ತೆಗೆದುಕೊಳ್ಳಬೇಕು. 

ನಿಮ್ಮ ಬಾಸ್ ಅಥವಾ ನಿಮ್ಮ ಪ್ರೊಫೆಸರ್ ನಿಮಗೆ ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಆದೇಶಿಸಿದರೆ ಅದು ನಿಮಗೆ ಆಶ್ಚರ್ಯ ಎನಿಸುವದಿಲ್ಲವೇ? ಆದರೂ, ದೇವರು ನಿಖರವಾಗಿ ಆಜ್ಞಾಪಿಸಿದ್ದು ಇದನ್ನೇ! ದೇವರಿಗೆ ಸ್ತೋತ್ರವಾಗಲಿ! ಆತನು ನಿಜವಾಗಿಯೂ ಕರುಣಾಮಯಿ! 

ದೇವರ ದಿನವನ್ನು ಪವಿತ್ರವಾಗಿ ಇಟ್ಟುಕೊಳ್ಳುವುದು

ಸಬ್ಬತ್ ಪ್ರಪಂಚದ ಎಲ್ಲಾ ಜನರಿಗೆ ಒಂದು ಸಾರ್ವತ್ರಿಕ ಪವಿತ್ರ ದಿನವಾಗಿದೆ. ಯೆಹೂದಿಗಳು, ಕ್ರಿಶ್ಚಿಯನ್ನರು, ಮುಸ್ಲಿಮರು, ಬೌದ್ಧರು ಅಥವಾ ಹಿಂದೂಗಳು ಅಸ್ತಿತ್ವಕ್ಕೆ ಬರುವುದಕ್ಕಿಂತ ಬಹಳ ಮುಂಚೆ, ಅಂದರೆ ಪ್ರಾಚೀನ ಕಾಲದಲ್ಲಿಯೇ, ಏಕದೇವರನ್ನು ಆರಾಧಿಸುತ್ತಿದ್ದ ದೇವರ ಭಕ್ತರುಗಳು ಒಬ್ಬನೇ ಸೃಷ್ಟಿಕರ್ತನಾದ ದೇವರಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ನಿಜ ಹೇಳಬೇಕೆಂದರೆ, ಜಗತ್ತು ಸೃಷ್ಟಿಯಾದಾಗಲೇ ಎಲ್ಲಾ ಮಾನವಕುಲಕ್ಕೆ ಸಬ್ಬತ್ ಆಚರಣೆಯನ್ನು ಆಜ್ಞಾಪಿಸಲಾಯಿತು. ಆದಾಮ ಮತ್ತು ಹವ್ವಳು (ಹವ್ವಾ ಎಂದೂ ಸಹ ಕರೆಯಲ್ಪಟಿದ್ದಾಳೆ) ಸಬ್ಬತ್ತನ್ನು ಕೈಕೊಂಡು ನಡೆದರು, ಮತ್ತು ದೇವರು ನಮಗೆ ಜ್ಞಾಪಕದಲ್ಲಿಟ್ಟು ಕೊಳ್ಳುವಂತೆ ಹೇಳಿದ್ದನ್ನು ಮರೆತುಬಿಡಲು ಎಂದಿಗೂ ಅನುಮತಿ ಕೊಟ್ಟಿಲ್ಲ. 

ದೌರ್ಭಾಗ್ಯವೆಂದರೆ, ಸಬ್ಬತ್ ಆಚರಣೆಯನ್ನು ಜನ ಆಗಾಗ್ಗೆ ಮರೆತುಬಿಡುತ್ತಿದ್ದಾರೆ. ಪ್ರಾಚೀನ ಯೆಹೂದ್ಯರು ಸಬ್ಬತ್ ದಿನದ ಆಚರಣೆಯನ್ನು ಮರೆತರೆ, ದೇವರು ಅವರ ಮೇಲೆ ವಿನಾಶವನ್ನು ತರುವನು ಎಂದು ಪ್ರವಾದಿಗಳು ಎಚ್ಚರಿಸಿದ್ದರು. ಅವರು ಎಚ್ಚರಿಕೆಗೆ ಕಿವಿಗೊಡಲಿಲ್ಲ, ಆದುದರಿಂದ ಯೆರೂಸಲೇಮ್ ಪಟ್ಟಣವನ್ನು ನಾಶಮಾಡಲಾಯಿತು ಮತ್ತು ಅವರ ಕುಟುಂಬಗಳನ್ನು ಸೆರೆಯಾಳುಗಳಾಗಿ ಕರೆದೊಯ್ಯಲಾಯಿತು. ಕಾಲಾಂತರದಲ್ಲಿ ಕ್ರೈಸ್ತರು ಸಹ, ದೇವರ ಆಜ್ಞೆಗೆ ವಿರುದ್ಧವಾಗಿ, ತಮ್ಮ ಪವಿತ್ರ ದಿನವನ್ನು ಭಾನುವಾರಕ್ಕೆ ಬದಲಾಯಿಸುವ ಮೂಲಕ ಸಬ್ಬತ್ ದಿನವನ್ನು ಹೊಲೆಮಾಡಿದರು. ಮುಸ್ಲಿಮರು ಶುಕ್ರವಾರದಂದು ಪ್ರಾರ್ಥಿಸುತ್ತಾರೆ, ಆದರೆ ಸೃಷ್ಟಿಕರ್ತನಿಗೆ ಸಂಪೂರ್ಣ ವಿಧೇಯರಾಗಿ ನಡೆದುಕೊಳ್ಳುವ ಸಲುವಾಗಿ, ನಾವು ಏಳನೇ ದಿನದಂದು ವಿಶ್ರಾಂತಿ ಪಡೆಯಬೇಕು ಎಂಬುದನ್ನು ಮರೆತಿದ್ದಾರೆ. 

ನಮ್ಮ ಇಡೀ ಪ್ರಪಂಚವೇ, ಈ ಪ್ರಾಮುಖ್ಯವಾದ ದಿನವನ್ನು ಮರೆಯುತ್ತಿದೆ ಎಂದು ಏಕೆ ಅನ್ನಿಸುತ್ತದೆ? ಈ ವ್ಯಾಪಕವಾದ ಮರೆಗುಳಿತನಕ್ಕೆ ಇದಕ್ಕಿಂತ ಒಂದು ದೊಡ್ಡ ದುಷ್ಟ ಕಾರಣವಿರಲು ಸಾಧ್ಯವಿದೆಯೇ?

ನಮ್ಮ ಮನಸ್ಸನ್ನು ಸೃಷ್ಟಿಕರ್ತನಾದ ದೇವರ ಸನ್ನಿಧಿಯಿಂದ ದೂರ ಕೊಂಡೊಯ್ಯಲು, ಸೈತಾನನು, (ಶೈತಾನನು) ಮುಂಬರುವ ಒಂದು ವಿಶ್ವವ್ಯಾಪಕ ಶಕ್ತಿಯಾಗಿದ್ದನೆಂದು ಮೆಸ್ಸೀಯನಾದ ಯೇಸು (ಇಸಾ ಅಲ್-ಮಸಿಹ್ ಎಂದೂ ಸಹ ಆತನನ್ನು ಕರೆಯಲಾಗಿದೆ) ನಮ್ಮನ್ನು ಎಚ್ಚರಿಸಿದ್ದಾನೆ. ಸುಳ್ಳಾದ ಸಬ್ಬತ್ ದಿನದಲ್ಲಿ ದೇವರನ್ನು ಆರಾಧಿಸುವಂತೆ ಲಕ್ಷಾಂತರ ಜನರನ್ನು ಮೋಸಗೊಳಿಸಲಾಗುತ್ತಿದೆ. ಸೃಷ್ಟಿಕರ್ತನ ದಿನವನ್ನು ನಾವೆಲ್ಲರೂ ಮರೆಯುವಂತೆ ಸೈತಾನ ಮಾಡಿಬಿಟ್ಟರೆ, ಒಂದು ದಿನ, ನಾವೆಲ್ಲರೂ ಸೃಷ್ಟಿಕರ್ತನನ್ನೇ ಮರೆತುಬಿಡುತ್ತೇವೆಂದು ಸೈತಾನನು ಆಶಿಸುತ್ತಾನೆ. ಆದಾಗ್ಯೂ, ನಾವು ನಿಜವಾದ ಸಬ್ಬತ್ತನ್ನು ಕೈಕೊಂಡು ನಡೆಯುವಾಗ, ನಾವು ನಮ್ಮ ಸೃಷ್ಟಿಕರ್ತನಿಗೆ ನಮ್ಮ ನಿಷ್ಠೆಯನ್ನು ತೋರಿಸುತ್ತೇವೆ ಮತ್ತು ವಿಶ್ರಾಂತಿ, ಮನೋರಂಜನೆ ಮತ್ತು ಶಾಂತಿಯ ಕೊಡುಗೆಯನ್ನು ಆನಂದಿಸುತ್ತೇವೆ.

ದೇವರ ವಿಶ್ರಾಂತಿಗೆ ಪ್ರವೇಶಿಸುವುದು

ಪ್ರವಾದಿ ಮೋಶೆಯು ಹೀಗೆ ಬರೆದನು: “ಕರ್ತನು ಏಳನೆಯ ದಿನವನ್ನು ಆಶೀರ್ವದಿಸಿದನು” (ಆದಿಕಾಂಡ 2:3). ನೀವು ದಣಿದಿದ್ದೀರಾ ಮತ್ತು ನಿತ್ರಾಣರಾಗಿದ್ದಿರಾ? ಸಬ್ಬತ್ತಿನಲ್ಲಿ ಆಶೀರ್ವಾದಗಳಿವೆ! 

ಇಂಡೋನೇಷ್ಯಾದ ಕಾಪಿರೈಟರ್ ಮಿಟಾ ಡುರಾನ್ ಅತಿಯಾದ ಕೆಲಸಗಳನ್ನು ವಿಶ್ರಾಂತಿ ತೆಗೆದುಕೊಳ್ಳದೆ ಮಾಡಿದ್ದರಿಂದ ಸತ್ತಳು- ಆದರೆ ನೀವು ಹಾಗೆ ಮಾಡಬೇಕಾಗಿಲ್ಲ. ಪ್ರತಿ ವಾರವೂ ನಿಮ್ಮ ದುಡಿಮೆಯಿಂದ ವಿಶ್ರಮಿಸಲೂ ಮತ್ತು ಸಬ್ಬತ್ತಿನ ಆಶೀರ್ವಾದಗಳನ್ನು ಅನುಭವಿಸಲೂ ದೇವರು ನಿಮ್ಮನ್ನು ಆಹ್ವಾನಿಸುತ್ತಿದ್ದಾನೆ. 

ದೇವರು ನಮಗೆ ವಿಶ್ರಾಂತಿ, ಶಾಂತಿ ಮತ್ತು ಸ್ವಸ್ಥತೆಯನ್ನು ಹೇಗೆ ನೀಡುತ್ತಾನೆ ಎಂಬುದರ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್  ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, 2016.

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover