ಕರುಣೆಗಾಗಿ ಹಾತೊರೆಯುತ್ತಿದ್ದಾರೆ

ಕರುಣೆಗಾಗಿ ಹಾತೊರೆಯುತ್ತಿದ್ದಾರೆ

ಸಾರಾಂಶ

ದೇವರ ಕರುಣೆ ಯಾವ ರೀತಿಯಾಗಿ ಕಾಣುತ್ತದೆ? ಆತನು ಕೇವಲ "ನಾನು ನಿನ್ನನ್ನು ಕ್ಷಮಿಸುತ್ತೇನೆ" ಎಂದು ಹೇಳುವನೇ ಅಥವ ನಮ್ಮ ನಾಚಿಕೆಗೇಡಿ ತನದ ದಾಖಲೆಯನ್ನು ಶುದ್ಧೀಕರಿಸಲು ಆತನು ಪರ್ಯಾಯಮಾರ್ಗವನ್ನು ಒದಗಿಸುತ್ತಾನೆಯೇ? ಬದಲಿ ತ್ಯಾಗದ ಅಗತ್ಯ ಮತ್ತು ಅರ್ಥವನ್ನು ವಿವರಿಸುವುದಕ್ಕೆ ಸಹಾಯ ಮಾಡಲು, ಈ ಕರಪತ್ರವು ಸ್ಥಳೀಯ ಕಥೆಯನ್ನು ಹಂಚಿಕೊಳ್ಳುತ್ತದೆ. ಓದುಗರು, ತಮ್ಮ ಪಾಪವು ಕ್ಷಮಿಸಲ್ಪಟ್ಟು, ಅವಮಾನವು ತೆಗೆದುಹಾಕಲ್ಪಡಬಹುದು ಎಂದು ತಿಳಿದುಕೊಳ್ಳುವ ಭರವಸೆಯನ್ನು ಕಂಡುಕೊಳ್ಳುತ್ತಾರೆ.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

21 ಭಾಷೆಗಳು

ಪುಟಗಳು

6

ಡೌನ್ ಲೋಡ್

ಈದ್ ಅಲ್-ಅಧಾಗೆ ಫಾತಿಮಾ ಒಂಟಿಯಾಗಿದ್ದಳು, ಮತ್ತು ಆ ಒಂಟಿತನವನ್ನು ಅವಳಿಗೆ ಸಹಿಸಲಾಗುತ್ತಿಲ್ಲ ಎಂದು ಅನಿಸಿತ್ತು. ಅವಳ ಒಂಟಿತನವು ಅವಳ ತಪ್ಪಾಗಿತ್ತು, ಅಲ್ಲವೇ? 

ಫಾತಿಮಾ ಅಹಮದ್‌ನನ್ನು ಮದುವೆಯಾಗುವ ವಿಷಯದಲ್ಲಿ ತಾನೆಷ್ಟು ಕಠೋರವಾಗಿ ತನ್ನ ತಂದೆಯೊಂದಿಗೆ ವಾದಮಾಡಿದ್ದೆ ಎಂಬುದನ್ನು ನೆನಪಿಸಿಕೊಂಡಳು. ಅವಳು ಯೌವನಸ್ಥಳಾಗಿದ್ದಳು ಮತ್ತು ಪ್ರೀತಿಸುತ್ತಿದ್ದಳು. ಆಕೆಯ ತಂದೆ ಬೇಡ ಎಂದು ಹೇಳುವದಾದರೂ ಹೇಗೆ? ಅವಳು ಓಡಿಹೋಗಿ ಅಹ್ಮದ್‌ನನ್ನು ಮದುವೆಯಾದಾಗ, ಅವಳು ಮನೆಗೆ ಹಿಂತಿರುಗಬಾರದು ಎಂದು ತಂದೆ ಹೇಳಿದನು.

ಅಹಮದ್ ಮೇಲಿನ ಪ್ರೀತಿಗಾಗಿ ಅವಮಾನವನ್ನುಸಹಿಸಿಕೊ ಳ್ಳಬಹುದು ಎಂದು ಭಾವಿಸಿದ್ದಳು. ಆದರೆ ಶೀಘ್ರದಲ್ಲಿ, ಅವಳು ತನ್ನ ತಂದೆಯೇ ಸರಿ ಎಂದು ಒಪ್ಪಿಕೊಳ್ಳಬೇಕಾಯಿತು. ಅವಳು ಪ್ರೀತಿಸಿದ ಅಹಮದ್, ಅವಳು ಭಾವಿಸಿದ ಹಾಗೆ ಪ್ರೀತಿಯ ವ್ಯಕ್ತಿ ಆಗಿರಲಿಲ್ಲ. ಇನ್ನೊಂದು ಹೆಣ್ಣಿಗಾಗಿ ಅವನು ಆಕೆಯನ್ನು ಕೈ ಬಿಟ್ಟಿದ್ದನು.

ಫಾತಿಮಾಗೆ ಅವಳ ಬಗ್ಗೆಯೇ ನಾಚಿಕೆ ಉಂಟಾಯಿತು. ತಾನು ನ್ಯಾಯಯುತ ವಾಗಿದ್ದೇನೆ ಮತ್ತು ಅದಕ್ಕಾಗಿ ತಾನು ದಂಡ ತೆರುತ್ತಿದ್ದೇನೆ ಎಂದು ಆಕೆ ನಂಬಿದಳು. ಅವಳು ನಿಜ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಳು. ಓಹ್ ಆದರೂ, ಅವಳ ಹೃದಯವು ಕರುಣೆಗಾಗಿ ಹೇಗೆ ಹಾತೊರೆಯುತ್ತಿತ್ತು!

ಅತ್ಯಂತ ದಯಾಳು ಮತ್ತು ಅತ್ಯಂತ ಕರುಣಾಮಯಿ

ನಾವು ಪ್ರಾಮಾಣಿಕರಾಗಿದ್ದರೆ, ನಾವೆಲ್ಲರೂ ಮೂರ್ಖತನದಿಂದ ತಪ್ಪು ಮಾಡಿದ್ದೇವೆ ಮತ್ತು ವಿವೇಕದ ಧ್ವನಿಯನ್ನು ನಿರ್ಲಕ್ಷಿಸಿದ್ದೇವೆ. ನಾವು ಇತರರನ್ನು ನೋಯಿಸಿದ್ದೇವೆ. ಇತರರು ನಮ್ಮನ್ನು ನೋಯಿಸಿದ್ದಾರೆ. ತಪ್ಪುಗಳನ್ನು ಮಾಡುವ ಜನರಿಂದ ನಮ್ಮ ಸಮುದಾಯಗಳು ಮಾಡಲ್ಪಟ್ಟಿವೆ. ಒಬ್ಬರನ್ನೊಬ್ಬರು ಕ್ಷಮಿಸುವುದು ಮತ್ತು ನಮ್ಮನ್ನು ನಾವು ಕ್ಷಮಿಸಿಕೊಳ್ಳುವದು ಎಷ್ಟು ಕಷ್ಟ! 

ನಮ್ಮ ತಪ್ಪುಗಳಿಗೆ ಕರುಣೆ ಸಿಗುತ್ತದೆಯೇ?

“ಬಿಸ್ಮಿಲ್ಲಾ ಅಲ್ -ರಹಮಾನ್ ಅಲ್-ರಹಿಮ್”  “ದೇವರ ಹೆಸರಿನಲ್ಲಿ, ಅತ್ಯಂತ ಕರುಣಾಮಯಿ, ಅತ್ಯಂತ ದಯಾಳು.” ಎಂಬ ಸರಳ ನುಡಿಗಟ್ಟನ್ನು ನೀವು ಎಷ್ಟು ಬಾರಿ ಪುನರುಚ್ಚರಿಸಿದ್ದೀರಿ ಎಂದು ಯೋಚಿಸಿರಿ. ಕರುಣೆಯ ವಿಷಯದಲ್ಲಿ ಅಂಥಹ ವಿಶೇಷತೆ ಏನು?

ಪ್ರಾಯಶಃ ನಮ್ಮ ಸಮುದಾಯಗಳು ಮತ್ತು ನಮ್ಮ ಹೃದಯಗಳಿಗೆ ಇಷ್ಟೊಂದು ಕರುಣೆಯ ಅಗತ್ಯವಿದೆ ಎಂಬುದೇ ಇದಕ್ಕೆ ಕಾರಣವಿರಬಹುದು.

ಕರುಣೆ: ಉತ್ತಮ ಮಾರ್ಗ

ಕೆಲವು ವರ್ಷಗಳ ಹಿಂದೆ, ಅಬ್ದುಲ್-ರೆಹಮಾನ್ ಎಂಬ ಒಬ್ಬ ಮನುಷ್ಯನು ತನ್ನ ನೆರೆಯವನಾದ ಕರೀಮನೊಂದಿಗೆ ಹೊಡೆದಾಡಿದನು ಮತ್ತು ಕೊಂದನು. ಈಜಿಪ್ಟಿನ ಈ ಸಣ್ಣ ಹಳ್ಳಿಯಲ್ಲಿ ಎರಡೂ ಕುಟುಂಬಗಳ ಜೀವನ ಸ್ಥಗಿತಗೊಂಡಿತ್ತು. ಕರೀಮನ ಕುಟುಂಬವು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿದರೆ, ಅಬ್ದುಲ್-ರೆಹಮಾನ್ ಕುಟುಂಬವು ಅವನನ್ನು ರಕ್ಷಿಸಲು ಭಯದಿಂದ ಪ್ರಯತ್ನಿಸುತ್ತಿತ್ತು. ಸೇಡಿಗೆ ಸೇಡನ್ನು ಮುಂದುವರಿಸಿಕೊಂಡು ಹೋಗಲು ಅಬ್ದುಲ್-ರೆಹಮಾನ್ ಇಷ್ಟಪಡಲಿಲ್ಲ. ಅವನು ಹಳ್ಳಿಯ ನಾಯಕರಲ್ಲಿ ಸಲಹೆ ಕೇಳಿದಾಗ ಅವರು ಹೆಣದ ಹೊದಿಕೆಯ ಆಚರಣೆಯನ್ನು ಶಿಫಾರಸು ಮಾಡಿದರು.

ಅಬ್ದುಲ್-ರೆಹಮಾನ್ ಹೆಣದ ಮೇಲೆ ಹೊದಿಸುವ ಬಿಳಿ ಬಟ್ಟೆಯನ್ನು ಸ್ವತಃ ತಾನೇ ತಂದು ಅದರ ಮೇಲೆ ಚಾಕುವನ್ನು ಇಟ್ಟನು. ಇಡೀ ಹಳ್ಳಿ ನೋಡುತ್ತಿದ್ದಂತೆ, ಕರೀಮನ ಕುಟುಂಬವನ್ನು ಮಾರುಕಟ್ಟೆಯಲ್ಲಿ ಸಂಧಿಸಲು ಅವನು ನಡೆದುಕೊಂಡು ಹೊರಟನು. ಸಾವಿಗೀಡಾದ ವ್ಯಕ್ತಿಯ ಸಹೋದರ ಹಬಿಬ್ ನ ಮುಂದೆ ಅಬ್ದುಲ್-ರೆಹಮಾನ್ ಮಂಡಿಯೂರಿ, ಹೆಣದ ಮೇಲೆ ಹೊದಿಸುವ ಹೊದಿಕೆ ಮತ್ತು ಚಾಕುವನ್ನು ನೀಡಿದನು. ಅವನು ಕರುಣೆ ಮತ್ತು ಸಂಧಾನಕ್ಕಾಗಿ ಕೇಳಿಕೊಂಡನು.

ಹಬಿಬ್ ಚಾಕುವನ್ನು ಅಬ್ದುಲ್-ರೆಹಮಾನ್ ನ ಕುತ್ತಿಗೆಯ ಮೇಲಿಟ್ಟನು. ಹಳ್ಳಿಯ ನಾಯಕರು ಈಗ ಒಂದು ಕುರಿಯನ್ನು ಅಲ್ಲಿಗೆ ತಂದರು, ಹಬೀಬ್ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಬೇಕಿತ್ತು - ಕರುಣೆ ಅಥವಾ ಸೇಡು? ಅವನು ಅಬ್ದುಲ್-ರೆಹಮಾನ್‌ನ ಕತ್ತಿನ ಮೇಲೆ ಚಾಕು ಹಿಡಿದಾಗ, ಅವನ ಕಾರ್ಯಗಳು ಘೋಷಿಸಿದವು, “ಈಗ ನೀನು ನನ್ನ ಅಧಿಕಾರದಲ್ಲಿದ್ದೀಯಾ. ಎಲ್ಲರ ಕಣ್ಣುಗಳು ನೋಡುತ್ತಿವೆ; ನಿನನ್ನು ಕೊಲ್ಲುವ ಹಕ್ಕು ನನಗಿದೆ ಮತ್ತು ಹಾಗೆ ಮಾಡುವ ಸಾಮರ್ಥ್ಯವೂ ನನಗಿದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಾನು ಕರುಣೆ ಮತ್ತು ರಾಜಿಯನ್ನು ಆರಿಸಿಕೊಳ್ಳುತ್ತೇನೆ. ನಾನು ರಕ್ತ ಹರಿಸುವ ಈ ಹಗೆತನವನ್ನು ಇಂದು ಕೊನೆಗಾಣಿಸುತ್ತೇನೆ.”

ಅವನು ಅಬ್ದುಲ್-ರೆಹಮಾನ್ ನನ್ನು ಬಿಟ್ಟು, ಹಿಂತಿರುಗಿ ಹೋಗಿ ಕುರಿಯನ್ನು ಕತ್ತರಿಸಿದನು. ನೋವು, ಸಿಟ್ಟು ಮತ್ತು ಅನ್ಯಾಯವನ್ನು ಕುರಿಮರಿಯು ಅನುಭವಿಸುತ್ತಿದ್ದಂತೆ, ಹಬೀಬ್ ಹೋಗಿ-ರೆಹಮಾನ್ ನನ್ನು ಅಪ್ಪಿಕೊಂಡನು. ಎರಡು ಕುಟುಂಬಗಳ ನಡುವೆ ಪುನಃ ಶಾಂತಿಯನ್ನು ಸ್ಥಾಪಿಸಲಾಯಿತು. 

ಮಾನವರು ನ್ಯಾಯವನ್ನು ಕರುಣೆಯೊಂದಿಗೆ ಹೊಂದಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬಹುದಾದರೆ, ಖಂಡಿತವಾಗಿ ದೇವರು ಸಹ ಹಾಗೇ ಮಾಡಬಲ್ಲನು! 

ಯೇಸುವೇ ಮೆಸ್ಸೀಯನು: ಆತನೇ ದೇವರ ದಯೆ

ದೇವರ ಕರುಣೆಯನ್ನು ಕುರಿತು ನಾವು ಎಲ್ಲಿ ಕಲಿಯಬಹುದು? ಇದು ಬಹಳ ಸುಲಭ. ಬಹುಶಃ ಮೆಸ್ಸೀಯನಾದ ಯೇಸು (ಇಸ್ಲಾಮ್ ಧರ್ಮದಲ್ಲಿ ಯೇಸುವನ್ನು ಇಸಾ ಅಲ್-ಮಾಸಿಹ್ ಎಂದು ಕರೆಯುತ್ತಾರೆ) - ದೇವರಿಂದ ಬಂದ “ದಯೆ” ಎಂದು ನೀವು ಕೇಳಿಸಿಕೊಂಡಿರಬಹುದು. ಇದರರ್ಥ ಅವನು ಕರುಣೆಯನ್ನು ಸಂಪೂರ್ಣವಾಗಿ ಒಟ್ಟುಗೂಡಿಸುತ್ತಾನೆ. ಆತನ ಮಾರ್ಗಸುವಾರ್ತೆಗಳಲ್ಲಿನ ಆತನ ಬೋಧನೆಗಳೇ. ಅವುಗಳನ್ನು ಇಂಜಿಲ್ ಎಂದು ಕರೆಯಲಾಗಿದೆಇವೇ ಕ್ಷಮೆ ಮತ್ತು ಸಂಧಾನದ ಮಾರ್ಗ. 

ಮೆಸ್ಸೀಯನಾದ ಯೇಸುವು ಅಂತಹ ಒಂದು ಅದ್ಭುತವಾದ ಪಾತ್ರವನ್ನು ನೆರವೇರಿಸಬಲ್ಲನು, ಏಕೆಂದರೆ ದೇವರಿಂದ ಕಳುಹಿಸಲ್ಪಟ್ಟ ಈತನೊಬ್ಬನೆ ಸಂಪೂರ್ಣವಾಗಿ ಪಾಪರಹಿತನಾಗಿದ್ದಾನೆ. ಪ್ರತಿಯೊಬ್ಬ ಪ್ರವಾದಿ ಮತ್ತು ಪವಿತ್ರ ದೇವದೂತರು ತಮ್ಮ ತಪ್ಪುಗಳಿಗಾಗಿ ಕ್ಷಮೆಪಡೆದುಕೊಳ್ಳಬೇಕಾದ ಅಗತ್ಯವಿದೆ, ಆದರೆ ಯೇಸು ಮೆಸ್ಸಿಯನು, ಆತನಿಗೆ ಅದರ ಅಗತ್ಯವಿಲ್ಲ. ನ್ಯಾಯತೀರ್ಪಿನ ದಿನಕ್ಕಾಗಿ ಕಾಯುವ ಬದಲು ಆತನನ್ನು ನೇರವಾಗಿ ಪರಲೋಕಕ್ಕೆ ಕೊಂಡೊಯ್ಯಲಾಯಿತು, ಯಾಕೆಂದರೆ ಆತನು ಎಂದೂ ಪಾಪ ಮಾಡಲಿಲ್ಲ- ಸಣ್ಣ ಪಾಪ ಕೂಡ ಮಾಡಿದವನಲ್ಲ.

ಈ ಕಾರಣಕ್ಕಾಗಿ ಆತನನ್ನು ದೇವರ ದಯೆ ಎಂದು ಕರೆಯಲಾಗಿದೆ. ಆತನು ನಮಗೆ ಪರಿಶುದ್ಧ ಕರುಣೆಯ ಒಂದು ಉದಾಹರಣೆಯನ್ನು ಕೊಟ್ಟನು ಮತ್ತು ದೇವರ ದಯೆ ಹೇಗೆ ಪಡೆಯಬೇಕೆಂದು ಕಲಿಸಿದನು.

ಮೆಸ್ಸೀಯನಾದ ಯೇಸು ನನಗೆ ಹೇಗೆ ಸಹಾಯಮಾಡಬಲ್ಲನು?

ಸ್ನಾನಿಕನಾದ ಯೋಹಾನನು (ಯಾಹ್ಯಾ ಎಂದೂ ಕರೆಯಲ್ಪಡುವವನು) ಒಂದು ಜನಸಮೂಹದ ಮಧ್ಯದಲ್ಲಿ ಮೆಸ್ಸೀಯನಾದ ಯೇಸುವನ್ನು ಕಂಡನು ಮತ್ತು ದೇವರಿಂದ ಪ್ರೇರಿತನಾಗಿ, ಅಗೋ! ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವನು!” (ಯೋಹಾನನ ಸುವಾರ್ತೆಗಳು 1:29). ಮೆಸ್ಸಿಯನಾದ ಯೇಸುವು ಕುರಿಯಂತೆ ಅಬ್ದುಲ್ ರೆಹಮಾನ್ ಗಾಗಿ ಸಂಧಾನ ಮಾರ್ಗವನ್ನು ಮಾಡಿದನು. 

ನಮ್ಮ ತಪ್ಪುಗಳಿಗಾಗಿ ನಮಗೆ ಶಿಕ್ಷೆಯಾದರೆ, ಅದು ನ್ಯಾಯವೇ ಸರಿ. ಆದರೆ ಸಂಪೂರ್ಣವಾಗಿ ಪಾಪರಹಿತನಾಗಿದ್ದ ಮೆಸ್ಸೀಯನಾದ ಯೇಸು, ನಮ್ಮ ತಪ್ಪುಗಳ ಜವಾಬ್ದಾರಿಯನ್ನು ತಾನೇ ಹೊರಲು ಮುಂದೆ ಬಂದನು. ಯಾರೂ ಆತನನ್ನು ಒತ್ತಾಯಪಡಿಸಲಿಲ್ಲ. ನ್ಯಾಯದ ಬೇಡಿಕೆಗೆ ಉತ್ತರಿಸಲು ಅವನು ಸ್ವಇಚ್ಛೆಯಿಂದ ಸಾವನ್ನು ತನ್ನ ಮೇಲೆ ಬರಮಾಡಿಕೊಂಡನು. ಈ ಭೂಮಿಯ ಮೇಲೆ ಬದುಕಿದ ಜನರಲ್ಲಿ ಈತನೊಬ್ಬನೇ ಏಕೈಕ ಪರಿಪೂರ್ಣ ಮುಗ್ಧ ವ್ಯಕ್ತಿಯಾಗಿದ್ದನು, ಹೀಗಿದ್ದರೂ ಸಹ ಅಬ್ದುಲ್-ರೆಹಮಾನ್ ನ ಕಥೆಯಲ್ಲಿ ಕುರಿಯ ರೀತಿಯಲ್ಲಿ ಸ್ವತಃ ತನ್ನನ್ನು ನಡೆಸಿಕೊಳ್ಳಲು ಅನುವುಮಾಡಿಕೊಟ್ಟನು. ಆದುದರಿಂದಲೇ, ಅವನು ನಮಗಾಗಿ ಸಂಕಟಪಟ್ಟು ಮರಣಿಸಿದ ನಂತರ, ದೇವರು ಆತನನ್ನು ಜೀವಂತವಾಗಿ ಎಬ್ಬಿಸಿ ಪರಲೋಕಕ್ಕೆ ಏರಿಹೋಗುವಂತೆ ಮಾಡಿದನು. 

ಬಹುಶಃ ನಿಮ್ಮ ಜೀವನದಲ್ಲಿಯೂ ಸಂಘರ್ಷ ಇರಬಹುದು. ಬಹುಶಃ ನೀವು ಫಾತಿಮಳಂತೆ ಇರಬಹುದು, ನೀವು ಪ್ರೀತಿ ಮಾಡಿದವರೇ ನಿಮ್ಮನ್ನು ದೂರತಳ್ಳಿದರು. ಬಹುಶಃ ನೀವು ಯಾರಿಂದಲಾದರೂ ಮನನೊಂದಿರಬಹುದು, ಅಥವಾ ನಿಮ್ಮ ಗೌರವಕ್ಕೆ ಅನ್ಯಾಯವಾಗಿ ಕುಂದುಬಂದಿರಬಹುದು. ಬಹುಶಃ ನೀವು ಸಹ ಅಬ್ದುಲ್-ರೆಹಮಾನ್ ಅವರಂತೆ, ಅಪರಾಧಿ ಮನೋಭಾವದಿಂದ ಮತ್ತು ಸೇಡು ತೀರಿಸಿಕೊಳ್ಳುವ ಭಯದಲ್ಲಿರಬಹುದು.

ಮೆಸ್ಸೀಯನಾದ ಯೇಸು ನಿಮಗೆ ಸಹಾಯಮಾಡಬಲ್ಲನು. ನೀವು ಸರಳವಾಗಿ ಈ ರೀತಿಯ ಒಂದು ಚಿಕ್ಕ ಪ್ರಾರ್ಥನೆಯನ್ನು ಮಾಡಬಹುದು:

ಓ ಕರ್ತನೇ, ನನ್ನ ಪಾಪಗಳನ್ನು ನಾನೇ ಎಂದಿಗೂ ಪರಿಹಾರಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಮೆಸ್ಸೀಯನಾದ ಯೇಸುವನ್ನು ನಮ್ಮ ಬಳಿಗೆ ನಿಮ್ಮ ಕರುಣೆಯಾಗಿ ಕಳುಹಿಸಿದ್ದೀರಿ ಎಂದು ನನಗೆ ತಿಳಿದಿದೆ. ಮಾನವಕುಲದ ರಕ್ಷಣೆಗಾಗಿ ಆತನು ಮಾಡಿದ ಸುಕೃತ್ಯದ ಆಧಾರದ ಮೇಲೆ ನನ್ನ ಪಾಪವನ್ನು ಕ್ಷಮಿಸಿ. ಮೆಸ್ಸೀಯನಾದ ಯೇಸುವಿನ ಮಾರ್ಗವನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯಮಾಡಿ, ಆಗ ನಾನು ನಿಮ್ಮ ಕರುಣೆಯನ್ನು ನನ್ನ ಜೀವನದಲ್ಲಿ ಅನುಭವಿಸಬಲ್ಲೆನು. ಆಮೆನ್.

ನೀವು ಸುವಾರ್ತೆಯ ಕರಪತ್ರಗಳನ್ನು ಪಡೆಯಲು ಬಯಸಿದರೆ, ದಯವಿಟ್ಟು ಈ ಪತ್ರದ ಹಿಂಭಾಗದಲ್ಲಿರುವ ಮಾಹಿತಿಯನ್ನು ಉಪಯೋಗಿಸಿಕೊಂಡು ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟಿಸ್: ಕನ್ನಡ ಜೆ. ವಿ. ಬೈಬಲ್ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, ೨೦೧೬

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover