ದುರಾತ್ಮಗಳಿಂದ ರಕ್ಷಣೆ

ದುರಾತ್ಮಗಳಿಂದ ರಕ್ಷಣೆ

ಸಾರಾಂಶ

ದುರಾತ್ಮಗಳು ಶಕ್ತಿಶಾಲಿ ನಿಜ, ಆದರೆ ಮೆಸ್ಸಿಯನಾದ ಯೇಸುವಿನಷ್ಟು ಶಕ್ತಿಶಾಲಿಗಳಲ್ಲ. ಈ ಕರಪತ್ರವು, ದೆವ್ವದ ಕಾಟದಿಂದ ಸಂಕಟಪಡುತ್ತಿದ್ದ ಜನರಿಂದ ಯೇಸುಸ್ವಾಮಿ ದೆವ್ವಗಳನ್ನು ಹೊರ ಹಾಕಿ ಅವರನ್ನು ಹೇಗೆ ಸ್ವಸ್ಥಪಡಿಸಿದನು ಎಂಬುದನ್ನು ವಿವರಿಸುತ್ತದೆ. ಆತನು ಇಂದೂ ಸಹ ನಮನ್ನೂ ಅದೇ ರೀತಿ ಸ್ವಸ್ಥಪಡಿಸಬಲ್ಲನು. ದೆವ್ವದ ಕಿರುಕುಳ ಮತ್ತು ದಬ್ಬಾಳಿಕೆಯಿಂದ ಮುಕ್ತರಾಗಲು ನಾವು ತಿಳಿದುಕೊಳ್ಳಬೇಕಾದದ್ದೆಲ್ಲವನ್ನೂ ಆತನ ಪುಸ್ತಕ ನಮಗೆ ಕಲಿಸುತ್ತದೆ. ಕ್ರಿಸ್ತನಾಗಮನ ಪೂರ್ವದಲ್ಲೇ, ಆತನಂತೆ ವೇಷಧರಿಸಿ ಮೋಸಗೊಳಿಸುವ ದೆವ್ವಗಳಿಂದ ನಾವು ತಪ್ಪಿಸಿ ಕೊಳ್ಳುವದು ಹೇಗೆ ಎಂಬುದನ್ನೂ ಸಹ ಈ ಪುಸ್ತಕ ನಮಗೆ ಕಲಿಸುತ್ತದೆ.

ಡೌನ್ ಲೋಡ್

ಜಿನ್ (ದುರಾತ್ಮ) ಗಳು ಎಲ್ಲೆಲ್ಲಿಯೂ ಇವೆ. ನೀವು ಅವುಗಳನ್ನು - ದೆವ್ವಗಳು, ಪ್ರೇತಗಳು, ಪಿಶಾಚಿಗಳು ಅಥವಾ ಜಿನ್ ಗಳು ಎಂದು ಯಾವ ಹೆಸರಿನಲ್ಲಿ ಬೇಕಾದರೂ ಕರೆಯಿರಿ. ಅವು ಭಯಾನಕವಾಗಬಹುದು. ಮಾಂತ್ರಿಕರು, ಮಾಟಗಾತಿಯರು ಮತ್ತು ಮೋಡಿಮಾಡುವವರು ಜನಪ್ರಿಯರಾಗಿರಬಹುದು, ಆದರೆ ಅವರು ನಿಜವಾಗಿಯೂ ಆ ಮಾಂತ್ರಿಕ ಕ್ರಿಯೆಗಳಿಂದ ನಮ್ಮನ್ನು ರಕ್ಷಿಸುವರೇ?

ದುರಾತ್ಮಗಳಿಂದ ನಿಮ್ಮನ್ನು ರಕ್ಷಿಸಲು ಮೂರು ಸರಳ ಹಂತಗಳನ್ನು ಇಲ್ಲಿ ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಹಂತಗಳನ್ನು ನೀವು ಅನುಸರಿಸಿದರೆ ಅವುಗಳಿಗೆ ನೀವು ಭಯಪಡಬೇಕಾಗಿಲ್ಲ. 

ದುರಾತ್ಮಗಳಿಂದ ರಕ್ಷಣೆ

ಒಬ್ಬ ವ್ಯಕ್ತಿ ಬೆತ್ತಲೆಯಾಗಿದ್ದನು ಮತ್ತು ಭಯಂಕರವಾಗಿ ಕಿರುಚುತ್ತಿದ್ದನು. ಅವನನ್ನು ಅನೇಕ ಜಿನ್ (ದುರಾತ್ಮ) ಗಳು ವಶಪಡಿಸಿಕೊಂಡಿದ್ದವು ಮತ್ತು ಯಾರೂ ಅವನಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹಳ್ಳಿಯ ಜನರು ಅವನನ್ನು ಸರಪಣಿಗಳಿಂದ ಬಂಧಿಸಲು ಪ್ರಯತ್ನಿಸಿದ್ದರು, ಆದರೆ ಅವನು ಅವುಗಳನ್ನು ಅತಿಮಾನುಷ ಬಲದಿಂದ ಮುರಿದು, ಗೋರಿಗಳ ನಡುವೆ ವಾಸಿಸಲು ಓಡಿಹೋಗುತ್ತಿದ್ದನು. ಅವನು ಶೋಚನೀಯವಾಗಿ ಆಳುತ್ತಾ, ತನಗೆ ತಾನೇ ಕಲ್ಲಿನಿಂದ ಕತ್ತರಿಸಿಕೊಳ್ಳುತ್ತಾ ತನ್ನ ದಿನಗಳನ್ನು ಕಳೆಯುತ್ತಿದ್ದನು.

ಇಸಾ ಅಲ್-ಮಸಿಹ್ ಎಂದು ಕರೆಯಲ್ಪಡುವ ಯೇಸು ಕ್ರಿಸ್ತನ ಆಗಮನದವರೆಗೂ ಸಹ ಆತನ ಜೀವನ ಹೀಗೆ ಸಾಗಿತ್ತು.

ಆ ಮನುಷ್ಯನು ಎಷ್ಟು ಅಸಹಾಯಕನಾಗಿದ್ದನೆಂದರೆ, ಅವನು ಸಹಾಯಕ್ಕಾಗಿ ಕೇಳಲು ತನ್ನ ಬಾಯಿಯನ್ನು ತೆರೆದಾಗ, ಜಿನ್ (ದುರಾತ್ಮ), ಯೇಸು ಕ್ರಿಸ್ತನ ಹತ್ತಿರ - ಅವನನ್ನು ಅವನ ಪಾಡಿಗೆ ಬಿಡುವಂತೆ ಬೇಡಿಕೊಳ್ಳುತ್ತಿತ್ತು. ಆದರೆ ಯೇಸು ದುರಾತ್ಮನ ಬೇಡಿಕೆಯನ್ನು ಈಡೇರಿಸಲಿಲ್ಲ. ಅಲ್ಲಿ ಏನು ನಡೆಯುತ್ತಿದೆಯೆಂದು ಯೇಸುಸ್ವಾಮಿಗೆ ತಿಳಿದಿತ್ತು. ದುರಾತ್ಮಕ್ಕೆ ಹೆದರದೆ, ಕ್ರಿಸ್ತನು, ಜಿನ್ ಗೆ (ದುರಾತ್ಮಕ್ಕೆ) ಆ ಮನುಷ್ಯನನ್ನು ಬಿಟ್ಟುಹೋಗುವಂತೆ ಆಜ್ಞಾಪಿಸಿದನು.

ಆಗ - “ನಮ್ಮನ್ನು ಪ್ರಪಾತಕ್ಕೆ ಕಳುಹಿಸಬೇಡ!” ಎಂದು ಜಿನ್ (ದುರಾತ್ಮ) ಬೇಡಿಕೊಂಡಿತ್ತು. ಅವುಗಳು ಹತ್ತಿರದ ಹಂದಿಗಳ ಹಿಂಡಿಗೆ ಹೋಗಿ ಸೇರಿಕೊಳ್ಳಲು ಆತನನ್ನು ಬೇಡಿಕೊಂಡವು. ಯೇಸು ಆ ಮನುಷ್ಯನನ್ನು ಬಿಟ್ಟು, ಅಶುದ್ಧ ಪ್ರಾಣಿಗಳ ಬಳಿಗೆ ಹೋಗಿ ಸೇರಿಕೊಳ್ಳುವಂತೆ ಆ ದುರಾತ್ಮಗಳಿಗೆ ಆಜ್ಞಾಪಿಸಿದನು. ತಕ್ಷಣವೇ, ದುರಾತ್ಮಗಳು ಹಂದಿಗಳ ಹಿಂಡನ್ನು ಪ್ರವೇಶಿಸಿದವು. ಆ ಮನುಷ್ಯನ ವಿವೇಕವು ಮರಳಿತು ಮತ್ತು ಹಂದಿಗಳ ಇಡೀ ಹಿಂಡು ಕಡಿದಾದ ಸ್ಥಳದಿಂದ ಸಮುದ್ರಕ್ಕೆ ಬಿದ್ದವು.

ಅಂತಿಮವಾಗಿ, ಮನುಷ್ಯನು ದುರಾತ್ಮಗಳಿಂದ ಬಿಡುಗಡೆಗೊಂಡನು. ಅವನು ಯೇಸುಸ್ವಾಮಿಗೆ ತುಂಬಾ ಕೃತಜ್ಞತೆಯನ್ನು ಸಲ್ಲಿಸಿದನು! ಆದರೆ ಇದೊಂದೇ ಕಥೆಯಲ್ಲ. ಯೇಸು ಕ್ರಿಸ್ತನಿಗೆ ದುಷ್ಟಶಕ್ತಿಗಳ ಮೇಲೆ ಅಗಾಧವಾದ ಅಧಿಕಾರವಿದೆ. ಆತನು ಹೋದಲ್ಲೆಲ್ಲಾ, ಜಿನ್ ನ (ದುರಾತ್ಮದ) ವಶಕ್ಕೆ ಒಳಗಾದ ಜನರನ್ನು ಅವುಗಳ ವಶದಿಂದ ಬಿಡುಗಡೆ ಮಾಡುತ್ತಿದ್ದನು. ಅವನು ತನ್ನ ಶಿಷ್ಯರಿಗೂ ಸಹ ದೆವ್ವಗಳ ಮೇಲೆ ಅಧಿಕಾರವನ್ನು ಕೊಟ್ಟನು:

ನೋಡಿರಿ, ಹಾವುಗಳನ್ನೂ ಚೇಳುಗಳನ್ನೂ ವೈರಿಯ ಸಮಸ್ತ ಬಲವನ್ನೂ ತುಳಿಯುವದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವದೂ ನಿಮಗೆ ಕೇಡು ಮಾಡುವದೇ ಇಲ್ಲ. ಆದರೂ ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ ಎಂಬುದಾಗಿ ಹೇಳಿದನು (ಇಂಜೀಲ್ ಎಂದು ಕರೆಯಲ್ಪಡುವ ಸುವಾರ್ತೆಯ ಪುಸ್ತಕ ಲೂಕ 10:1920 ನ್ನು ನೋಡಿರಿ).

ನಾವು ಯೇಸು ಕ್ರಿಸ್ತನನ್ನು ಹಿಂಬಾಲಿಸುವಾಗ, ಈ ಜೀವನದಲ್ಲಿ ಸುರಕ್ಷತೆಯನ್ನು ಹೊಂದಲು ಸಾಧ್ಯವಿದೆ ಮತ್ತು ಮುಂದೆ ಬರಲಿರುವ ಜೀವನದಲ್ಲಿ ಸುರಕ್ಷತೆ ಹೊಂದಲೂ ಭರವಸೆಯಿದೆ! ದುರಾತ್ಮ ಗಳಿಂದ ಬಿಡುಗಡೆ ಪಡೆಯಲು ಈಗ ಮೂರು ಹಂತಗಳನ್ನು ನೋಡೋಣ.

ಹಂತ 1: ಯೇಸು ಕ್ರಿಸ್ತನ ನಾಮದ ಶಕ್ತಿಯನ್ನು ಹಕ್ಕಿನಿಂದ ಕೇಳಿಕೊಳ್ಳಿ

ಯೇಸು ಕ್ರಿಸ್ತನ ಹೆಸರಿನಲ್ಲಿ ದೇವರ ರಕ್ಷಣೆಯನ್ನು ಪಡೆಯುವುದು ಮೊದಲ ಹೆಜ್ಜೆಯಾಗಿದೆ. ನಮ್ಮಷ್ಟಕ್ಕೆ ನಾವೇ ದುರಾತ್ಮಗಳನ್ನು ಎದುರಿಸಲು ನಾವು ಶಕ್ತಿಹೀನರು. ಆದರೆ ನಾವು ಯೇಸು ಕ್ರಿಸ್ತನ ನಾಮವನ್ನು ನಮ್ಮ ಜೀವಿತದಲ್ಲಿ ಘೋಷಿಸಿದಾಗ, ದುರಾತ್ಮಗಳು ಶಕ್ತಿಹೀನವಾಗುತ್ತವೆ! ಯೇಸು ತನ್ನ ಶಿಷ್ಯರ ಬಗ್ಗೆ ಹೇಳಿದ್ದು - “ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು.” (ಸುವಾರ್ತೆಗಳು, ಮಾರ್ಕ 16:17).

ನೀವು ಪೂರ್ಣ ಹೃದಯದಿಂದ ಆತನನ್ನು ನಂಬಿದರೆ ಆತನು ನಿಮ್ಮನ್ನು ದುರಾತ್ಮಗಳಿಂದ ಖಂಡಿತ ಬಿಡುಗಡೆ ಮಾಡುವನು! ನೀವು ಸರಳವಾದ ಈ ಪ್ರಾರ್ಥನೆಯನ್ನು ಮಾಡಿರಿ: “ದೇವರೇ, ನೀನು ಯಾರನ್ನು ಕಳುಹಿಸಿರುವೆಯೋ ಆತನ ಹೆಸರಿನಲ್ಲಿ ದಯವಿಟ್ಟು ನನ್ನನ್ನು ದುರಾತ್ಮಗಳಿಂದ ಬಿಡುಗಡೆ ಮಾಡು!” 

ಹಂತ 2: ಆಂತರಿಕ ಮತ್ತು ಬಾಹ್ಯ ಶುದ್ಧೀಕರಣವನ್ನು ಹುಡುಕಿರಿ

ನಾವು ಪಿಶಾಚನಿಗೆ ಯಾವುದೇ ನೆಲೆಯನ್ನು ಕೊಡಬಾರದು ಎಂದು ಯೇಸು ಕ್ರಿಸ್ತನು ಬೋಧಿಸಿದನು. ಆತನು ಹೀಗೆ ಹೇಳಿದನು: “ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವದೊಂದು ನನ್ನಲ್ಲಿಲ್ಲ” (ಸುವಾರ್ತೆಗಳು, ಯೋಹಾನ 14:30). ನಾವು ಕೂಡಾ ನಮ್ಮ ಜೀವನವನ್ನು ಎಲ್ಲಾ ದುರಾತ್ಮ ಪ್ರಭಾವಗಳಿಂದ ಶುದ್ಧೀಕರಿಸಿಕೊಳ್ಳಬೇಕು. 

ದೆವ್ವವು ಹೊಂದಿದೆ “ನಮ್ಮಲ್ಲಿ ಏನೂ ಇಲ್ಲ” ಎಂಬುದರ ಅರ್ಥವೇನು? ಇದರರ್ಥ: ನಮ್ಮ ಹೃದಯಗಳಲ್ಲಿ ಅಥವಾ ಮನೆಗಳಲ್ಲಿ ದುರಾತ್ಮ ನಡೆಸಬೇಕಾದ ಕಾರ್ಯಗಳೇನೂ ಇಲ್ಲ. ನಾವು ಮೂಢನಂಬಿಕೆಯ ಮಾಟಗಳು, ಮತ್ತು ತಾಯತಗಳನ್ನು ಕಿತ್ತು ದೂರ ಎಸೆಯಬೇಕು. ಅಶ್ಲೀಲತೆ, ಮಾದಕವಸ್ತುಗಳು ಮತ್ತು ಮದ್ಯದಂಥಹ ಪಾಪದ ದುಶ್ಚಟಗಳಿಂದ ನಾವು ದೂರವಿರಬೇಕು. ಸತ್ತವರೊಂದಿಗೆ ಮಾತನಾಡುವ ಅಥವಾ ಶಾಪಗಳನ್ನು ಹಾಕುವ ಆಚರಣೆಗಳಲ್ಲಿ ನಾವು ತೊಡಗಿಸಿಕೊಂಡಿದ್ದರೆ, ನಾವು ಈ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಹೀಗೆ ಮಾಡುವ ಮೂಲಕ, ನಾವು ನಮ್ಮ ಹೊರಗಿನ ಪರಿಸರವನ್ನು ದುರಾತ್ಮಗಳ ಪ್ರಭಾವಗಳಿಂದ ಸ್ವಚ್ಛಗೊಳಿಸುತ್ತೇವೆ. ಹೀಗೆ ಮಾಡಿದ ನಂತರ, ನಾವು ನಮ್ಮನ್ನು ಕ್ಷಮಿಸಲು ಮತ್ತು ಒಳಗಿನಿಂದ ನಮ್ಮನ್ನು ಶುದ್ಧೀಕರಿಸಲು ದೇವರನ್ನು ಪ್ರಾರ್ಥಿಸಬೇಕು.

ಹಂತ 3: ನಿಮ್ಮ ಜೀವನವನ್ನು ಬೆಳಕಿನಿಂದ ತುಂಬಿಸಿ

ಯೇಸು ಕ್ರಿಸ್ತನು ನಿಮ್ಮನ್ನು ಜಿನ್ (ದುರಾತ್ಮ) ನ ಕಾಟದಿಂದ ಬಿಡುಗಡೆಗೊಳಿಸಿದ ನಂತರ, ನಿಮ್ಮ ಜೀವನದ ಉಸ್ತುವಾರಿಯನ್ನು ವಹಿಸಿಕೊಳ್ಳಲು ಆತನನ್ನು ಆಹ್ವಾನಿಸಿರಿ. ನಿಮ್ಮ ಹೃದಯವನ್ನು ಖಾಲಿಯಾಗಿ ಬಿಡಬೇಡಿ. ಯೇಸು ಕ್ರಿಸ್ತನು ಹೇಳಿದನು,

ದುರಾತ್ಮವು ಮನುಷ್ಯನನ್ನು ಬಿಟ್ಟುಹೋದ ಮೇಲೆ ವಿಶ್ರಾಂತಿಯನ್ನು ಹುಡುಕುತ್ತಾ ನೀರಿಲ್ಲದ ಸ್ಥಳಗಳಲ್ಲಿ ತಿರುಗಾಡುತ್ತದೆ, ವಿಶ್ರಾಂತಿ ಸಿಕ್ಕದ ಕಾರಣ ಅದು, “ನಾನು ಬಿಟ್ಟು ಬಂದ ನನ್ನ ಮನೆಗೆ ತಿರುಗಿ ಹೋಗುತ್ತೇನೆ” ಅಂದುಕೊಂಡು ಬಂದು ಆ ಮನೆ ಒಕ್ಕಲಿಲ್ಲದ್ದೂ ಗುಡಿಸಿ ಅಲಂಕರಿಸಿದ್ದೂ ಆಗಿರುವದನ್ನು ಕಂಡು ಹೊರಟುಹೋಗಿ ತನಗಿಂತ ಕೆಟ್ಟವುಗಳಾದ ಬೇರೆ ಏಳು ದೆವ್ವಗಳನ್ನು ತನ್ನೊಂದಿಗೆ ಕರಕೊಂಡು ಬರುವದು. ಅವು ಒಳಹೊಕ್ಕು ಅಲ್ಲಿ ವಾಸಮಾಡುವವು. ಆಗ ಆ ಮನುಷ್ಯನ ಅಂತ್ಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗುವದು. ಇದರಂತೆಯೇ ಈ ಕೆಟ್ಟ ಸಂತತಿಗೆ ಆಗುವದು ಅಂದನು. (ಮತ್ತಾಯ 12:43–45).

ನೀವು ಜಿನ್ (ದುರಾತ್ಮ) ನಿಂದ ಬಿಡುಗಡೆ ಪಡೆದ ನಂತರ ಯೇಸು ಕ್ರಿಸ್ತನ ಬೆಳಕಿನ ಪುಸ್ತಕವಾದ ಬೈಬಲ್ ನ (ಸತ್ಯವೇದದ) ಬೆಳಕಿನಿಂದ ನಿಮ್ಮ ಜೀವನವನ್ನು ತುಂಬಿಸಿಕೊಳ್ಳಿರಿ. ಯೇಸು ಕ್ರಿಸ್ತನು “ನನ್ನನ್ನು ನಂಬುವ ಒಬ್ಬನಾದರೂ ಕತ್ತಲಲ್ಲಿ ಇರಬಾರದೆಂದು ನಾನು ಬೆಳಕಾಗಿ ಲೋಕಕ್ಕೆ ಬಂದಿದ್ದೇನೆ” (ಸುವಾರ್ತೆಗಳು, ಯೋಹಾನ 12:46) ಎಂದು ಹೇಳಿದ್ದಾನೆ. ಯೇಸುವಿನ ಪುಸ್ತಕದ ಒಂದು ಪ್ರತಿಯನ್ನು ಪಡೆದುಕೊಂಡು, ಆತನ ಬೆಳಕು ನಿಮ್ಮ ಹೃದಯದ ಅಂಧಕಾರವನ್ನು ಹೊರಹಾಕುವಂತೆ ಪ್ರತಿದಿನವೂ ಅದನ್ನು ಓದಿರಿ.

ಭವಿಷ್ಯಕ್ಕಾಗಿ ಸುರಕ್ಷತೆ

ದುರಾತ್ಮಗಳು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿರುವ ಅಂತ್ಯ ಕಾಲದ ಕಡೆಗಳಿಗೆಯಲ್ಲಿ ನಾವು ವಾಸಿಸುತ್ತಿದ್ದೇವೆ. ಯೇಸು ಕ್ರಿಸ್ತನು ತಾನು ಹಿಂದಿರುಗುವ ಮುನ್ನ, ದುರಾತ್ಮಗಳು ವಿಶ್ವಾಸಿಗಳನ್ನೂ ಸಹ ಮೋಸಗೊಳಿಸುವ ಸಲುವಾಗಿ ಅನೇಕ ಸುಳ್ಳಾದ ಅದ್ಬುತ ಕಾರ್ಯಗಳನ್ನು ಮಾಡುವವು ಎಂದು ಭವಿಷ್ಯ ನುಡಿದಿದ್ದಾನೆ. ಕೆಲವರಿಗೆ, ಜಿನ್ ಗಳು (ದುರಾತ್ಮಗಳು) ಭಯಾನಕ ರೂಪಗಳಲ್ಲಿ ದೆವ್ವಗಳಂತೆ ಕಾಣಿಸಿಕೊಳ್ಳುತ್ತವೆ; ಇನ್ನೂ ಕೆಲವರಿಗೆ, ಅವರು ದೇವದೂತರಾಗಿ ಅಥವಾ ಸತ್ತ ಪ್ರೀತಿಪಾತ್ರರಂತೆ ಕಾಣಿಸಿಕೊಳ್ಳುತ್ತವೆ. ಸ್ವತಃ ಪಿಶಾಚನೇ (ಸೈತಾನನೇ) ಯೇಸು ಕ್ರಿಸ್ತನಂತೆ ನಟಿಸುವನು!

ಆದರೆ ನೀವು ಸುಳ್ಳುಗಳಿಂದ ಮೋಸಹೋಗುವ ಅಗತ್ಯವಿಲ್ಲ. ನೀವು ಯೇಸು ಕ್ರಿಸ್ತನನ್ನು ಅನುಸರಿಸುವುದಾದರೆ, ಪಿಶಾಚನನ್ನು ಪ್ರತಿರೋಧಿಸುವ ಶಕ್ತಿಯನ್ನು ಆತನು ನಿಮಗೆ ಕೊಡುವನು. ಪ್ರಿಯ ಸ್ನೇಹಿತರೇ, ಇಂದು ನಿಮ್ಮ ಹೋರಾಟಗಳು ಏನೇ ಇರಲಿ, ಯೇಸು ಕ್ರಿಸ್ತನು ನಿಮ್ಮನ್ನು ಅವುಗಳಿಂದ ಬಿಡುಗಡೆಗೊಳಿಸುವನು!

ಯೇಸು ಕ್ರಿಸ್ತನ ಹಿಂಬಾಲಕನೊಬ್ಬನು ನಿಮ್ಮನ್ನು ದುರಾತ್ಮಗಳಿಂದ ಬಿಡುಗಡೆಗೊಳಿಸುವುದಕ್ಕಾಗಿ ಪ್ರಾರ್ಥಿಸಲು ನೀವು ಬಯಸಿದರೆ, ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯನ್ನು ಉಪಯೋಗಿಸಿ ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟಿಸ್: ಕನ್ನಡ ಜೆ. ವಿ. ಬೈಬಲ್  ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, ೨೦೧೬

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover