
ಒಂದು ವಲಸೆಯ ಆಹ್ವಾನ
ಸಾರಾಂಶ
ನೀವು ಉತ್ತಮ ಸ್ಥಳಕ್ಕಾಗಿ ಹಾತೊರೆಯುತಿದ್ದಿರಾ? ಅದು ಸುರಕ್ಷತೆ, ಸಂತೋಷ ಮತ್ತು ವಿಶ್ರಾಂತಿ ಕೊಡುವ ಸ್ಥಳವೇ? ನಮ್ಮಲ್ಲಿ ಪ್ರತಿಯೊಬ್ಬರೂ ಪರಲೋಕ್ಕೆ ಸೃಷ್ಟಿಸಲ್ಪಟ್ಟಿರುವದರಿಂದ, ಈ ಲೋಕ ಒದಗಿಸದ ಪರಲೋಕಕ್ಕಾಗಿ ನಾವು ಹಂಬಲಿಸುತ್ತಿದ್ದೇವೆ. ಮೆಸ್ಸಿಯನಾದ ಯೇಸು ಈಗಾಗಲೇ ಅಲ್ಲಿಗೆ ಹೋಗಿದ್ದಾನೆ. ಆತನಿಗೆ ಮಾರ್ಗ ತಿಳಿದಿದೆ, ಮತ್ತು ವಾಸ್ತವವಾಗಿ, ಆತನು ತನ್ನನ್ನೇ ಆ "ಮಾರ್ಗ" ವೆಂದು ಕರೆದಿದ್ದಾನೆ. ಈ ಕರಪತ್ರವು ಯೇಸುವಿನ ಬಗ್ಗೆ ಪ್ರಮುಖ ಸತ್ಯಗಳನ್ನು ವಿವರಿಸುತ್ತದೆ. ಆ ಸತ್ಯ ನಮಗೆ ಪರಲೋಕದಲ್ಲಿ ಪೌರತ್ವ ಪಡೆಯಲು ಸಿದ್ಧವಾಗುವದಕ್ಕೆ ಸಹಾಯ ಮಾಡುತ್ತದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
21 ಭಾಷೆಗಳು
ಪುಟಗಳು
6
ಅಬ್ದುಲ್-ಮಲೆಕ್ ದಣಿದ ಮುದುಕನಾಗಿದ್ದನು. ತನ್ನ ಪತ್ನಿ ಮತ್ತು ಮಕ್ಕಳನ್ನು ಕಳೆದುಕೊಂಡ ನಂತರ, ಐಸಿಸ್ ನಿಂದ ತಪ್ಪಿಸಿಕೊಳ್ಳಲು ಅವನು ಇರಾಕ್ ನಿಂದ ಪಲಾಯನ ಮಾಡಿದ್ದನು. ಈಗ ಅವನು ಯೋರ್ದಾನ್ ನಲ್ಲಿ ನಿರಾಶ್ರಿತನಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದನು.
ಆದರೆ ಭರವಸೆಯ ಹೊಳಪು ಅವನಲ್ಲಿತ್ತು. ಅವನಿಗೆ ಕೆನಡಾದಲ್ಲಿ ವಾಸಿಸುತ್ತಿದ್ದ ಒಬ್ಬ ಸೋದರಸಂಬಂಧಿ ಇದ್ದನು. ಅವನು ಮಲೆಕ್ ಗೆ ಉದ್ಯೋಗ ಪಡೆಯಲು ಸಹಾಯ ಮಾಡಲು ಮುಂದೆ ಬಂದನು. ರೋಮಾಂಚನಗೊಂಡ ಮಲೆಕ್ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದನು ಮತ್ತು ಒಂದು ಸುಲಭವಾದ ಜೀವನದ ಕನಸು ಕಾಣಲು ಪ್ರಾರಂಭಿಸಿದನು. ಅಂತಿಮವಾಗಿ, ಹಲವಾರು ವರ್ಷಗಳ ಕಾಯುವಿಕೆಯ ನಂತರ, ಅವನಿಗೆ ಕೆನಡಾಕ್ಕೆ ಪ್ರವೇಶವನ್ನು ನೀಡಲಾಯಿತು. ಅಬ್ದುಲ್-ಮಲೆಕ್ ಭಾವಪರವಶನಾಗಿದ್ದನು!
ಆದರೆ ಅವನ ಸಂತೋಷವು ಅಲ್ಪಾವಧಿಯದ್ದಾಗಿತ್ತು. ಕೆನಡಾಕ್ಕೆ ಬಂದ ನಂತರ, ವಲಸೆಯ ನಂತರದ ಜೀವನವು ಸುಲಭವಲ್ಲ ಎಂಬುದನ್ನು ಅವನು ಮನಗಂಡಿದ್ದನು. ದಿನವಿಡೀ ಅವನು ಕೆಲಸ ಮಾಡಬೇಕಾಗಿತ್ತು. ಅವನ ನೆರೆಹೊರೆಯವರು ಜೋರಾಗಿದ್ದರು. ಸಾರ್ವಜನಿಕ ಸಾರಿಗೆಯನ್ನುಅರ್ಥಮಾಡಿಕೊಳ್ಳುವುದೂ ಸುಲಭವಾಗಿರಲಿಲ್ಲ ಮತ್ತು ಅಲ್ಲಿನ ಇಂಗ್ಲೀಷ್ ಭಾಷೆಯೂ ಅಷ್ಟು ಸುಲಭವಾಗಿ ಅರ್ಥವಾಗುತ್ತಿರಲಿಲ್ಲ!
ಹೀಗಾಗಿ ಅಬ್ದುಲ್-ಮಲೆಕ್ ಯಾವಾಗಲೂ ಅದಕ್ಕಿಂತ ಉತ್ತಮ ಸ್ಥಳಕ್ಕೆ ಹೋಗಬೇಕೆಂದು ಕನಸು ಕಾಣುತ್ತಿದ್ದನು, ಆದರೆ ಅವನು ಇಲ್ಲಿಗೆ ಬಂದ ನಂತರವೂ, ಅವನ ಹೃದಯವು ಇನ್ನೂ ನೋಯುತ್ತಿರುವುದನ್ನು ಅವನು ಕಂಡುಕೊಂಡನು. ತನ್ನ ನೋವನ್ನು ನೀಗುವ ಯಾವ ತಾಣವಾದರೂ ಈ ಭೂಮಿಯ ಮೇಲೆ ಇರಬಹುದೇ ಎಂದು ಅವನು ಆಶ್ಚರ್ಯಪಡುತ್ತಿದ್ದನು. ಹಾಗಿಲ್ಲದಿದ್ದರೆ ತಾನು ಪರದೈಸಿ (ಪರಲೋಕ) ಸೇರುವವರೆಗೂ ಕಾಯಬೇಕಾಬಹುದೇನೋ ಎಂದು ಸಹ ಚಿಂತನೆ ನಡೆಸುತ್ತಿದ್ದನು!
ಪರದೈಸಿಗೆ (ಪರಲೋಕಕ್ಕೆ) ವಲಸೆ
ನೀವು ಎಂದಾದರೂ ಅಬ್ದುಲ್-ಮಾಲಿಕ್ ನಂತೆ ಚಿಂತನೆ ನಡೆಸಿದ್ದೀರಾ? ಒಂದು ಕ್ಷೇಮವಾದ ಸ್ಥಳದ ಬಯಕೆ ಎಲ್ಲ ಮಾನವರ ಹೃದಯದಲ್ಲಿ ಬೇರೂರಿರುವದು ನಿಜ ಮತ್ತು ನಮ್ಮ ಶಾಶ್ವತ ಮನೆಯಾದ ಪರದೈಸನ್ನು (ಪರಲೋಕವನ್ನು) ಪ್ರವೇಶಿಸುವ ಮೂಲಕ ಮಾತ್ರ ಆ ಬಯಕೆ ನೆರವೇರುವದು ಸಾಧ್ಯ. ಮತ್ತು ಒಂದು ಒಳ್ಳೇ ಸಿಹಿ ಸುದ್ದಿಯೇನೆಂದರೆ ಈ ಬಯಕೆ ಶೀಘ್ರದಲ್ಲೇ ನೆರವೇರಲಿದೆ! ನೆರವೇರುವ ಚಿಹ್ನೆಗಳು ನಮ್ಮ ಕಣ್ಮುಂದೆಯೇ ಸಂಭವಿಸುತ್ತಿವೆ, ಮತ್ತು ಈ ಜಗತ್ತು ಬೇಗನೆ ಅಂತ್ಯಗೊಳ್ಳಲಿದೆ.
ಶತಮಾನಗಳಿಂದ, ಯೆಹೂದ್ಯರು, ಕ್ರೈಸ್ತರು ಮತ್ತು ಮುಸ್ಲಿಮರ ಧಾರ್ಮಿಕ ಪುಸ್ತಕಗಳು ಭೂಮಿಯ ಅಂತ್ಯವನ್ನು (ಅಪೊಕ್ಯಾಲಿಪ್ಸ್) ಕುರಿತು ಮೊದಲೇ ಭವಿಷ್ಯವಾಣಿ ನುಡಿದಿವೆ, ಆ ಘಟನೆ ನಾವು ಈ ಲೋಕದಿಂದ ಮತ್ತೊಂದು ಲೋಕಕ್ಕೆ ಹೋಗುವ ಹೊಸ್ತಿಲಾಗಿರುತ್ತದೆ. ಈ ಮೂರೂ ನಂಬಿಕೆಗಳು, ಅಂತ್ಯಕಾಲದ ಘಟನೆಗಳ ಪರಾಕಾಷ್ಠೆಗೆ ಜವಾಬ್ದಾರನಾದ ಒಬ್ಬ ಮೆಸ್ಸೀಯನೆಂಬ ವ್ಯಕ್ತಿಯ ಕಡೆಗೆ ಕೈ ತೋರಿಸುತ್ತಿವೆ.
ಕ್ರೈಸ್ತ ಮತ್ತು ಇಸ್ಲಾಮ್ ಧರ್ಮಗಳು ಮಾತನಾಡುವ ಈ ಮೆಸ್ಸಿಯನೆಂಬ ವ್ಯಕ್ತಿ ಬೇರಾರೂ ಅಲ್ಲ, ಆತನೇ - ಯೇಸು ಕ್ರಿಸ್ತನು. ಇಸ್ಲಾಮ್ ಧರ್ಮದಲ್ಲಿ ಆತನನ್ನು ಇಸಾ ಅಲ್-ಮಸಿಹ್ ಎಂದು ಕರೆಯುತ್ತಾರೆ. ಅವನು ಪ್ಯಾಲೆಸ್ಟೈನ್ ನಲ್ಲಿ ವಾಸಿಸುತ್ತಿದ್ದಾಗ ಮೆಸ್ಸೀಯನಾಗಿದ್ದನು, ಆದರೆ ಈಗ ಅವನು ಕಳೆದ 2,000 ವರ್ಷಗಳಿಂದ ಪರದೈಸಿನಲ್ಲಿ (ಪರಲೋಕದಲ್ಲಿ) ವಾಸಿಸುತ್ತಿದ್ದಾನೆ. ಆತನು ಅಂತಿಮವಾಗಿ ನ್ಯಾಯತೀರ್ಪಿನ ದಿನದಂದು ಭೂಲೋಕಕ್ಕೆ ಎರಡನೇ ಸಲ ಹಿಂದಿರುಗುವನು.
ಯೇಸುಕ್ರಿಸ್ತನ ಬರೋಣ ಸತ್ಯವೇದದಲ್ಲಿ ಜನಪ್ರಿಯ ಉಲ್ಲೇಖವಾಗಿದೆ, ಆದರೆ ಮುಸ್ಲಿಮರೂ ಸಹ ಆತನ ಬರುವಿಕೆಯಲ್ಲಿ ನಂಬಿಕೆಯಿಟ್ಟಿದ್ದಾರೆ, ಯಾಕೆಂದರೆ ಅದನ್ನು ಕುರಿತು ಕುರಾನ್ ನಲ್ಲಿ ಬರೆಯಲಾಗಿದೆ: “ಮತ್ತು (ಯೇಸು) ಆ (ನ್ಯಾಯತೀರ್ಪಿನ) ಘಳಿಗೆಯ ಗುರುತಾಗಿದ್ದಾನೆ: ಆದ್ದರಿಂದ ಆ ಘಳಿಗೆಯ ಬಗ್ಗೆ ಯಾವ ಸಂದೇಹವೂ ಇಲ್ಲ, ಆದರೆ ನೀವು ನನ್ನನ್ನು ಹಿಂಬಾಲಿಸಿ: ಇದೇ ನೇರವಾದ ದಾರಿ” (ಅಜ್ - ಜುಖ್ರುಫ್ 43:61).
ಒಬ್ಬ ವಲಸೆ ಅಧಿಕಾರಿಯು ವೀಸಾವನ್ನು ಪಡೆಯುವುದು ಹೇಗೆ ಎಂಬುನ್ನು ಕುರಿತು ಬಹುಮುಖ್ಯವಾದ ಮಾರ್ಗದರ್ಶನಗಳನ್ನು ಕೊಡುವಂತೆ, ಯೇಸು ಕ್ರಿಸ್ತನು ಸಹ ತನ್ನ ಹಿಂದಿರುಗುವಿಕೆಗೆ ಸತ್ಯವೇದದಲ್ಲಿ ಕೊಟ್ಟಿರುವ ಚಿಹ್ನೆಗಳ ಕಡೆಗೆ ಗಮನಕೊಡುವಂತೆ ನಮ್ಮನ್ನು ಸ್ವಾಗತಿಸುತ್ತಿದ್ದಾನೆ, ಆಗ ನಾವು ಪರದೈಸಿಗೆ (ಪರಲೋಕಕ್ಕೆ) ಸೇರುವ ನೇರವಾದ ಮಾರ್ಗವನ್ನು ತಿಳುಕೊಳ್ಳುವೆವು.
ಪರದೈಸು (ಪರಲೋಕವು) ಹೇಗಿರುವದೆಂದು ಯೇಸು ಹೇಳಿದನು?
ಇಂಜೆಲ್ ಎಂದೂ ಕರೆಯಲ್ಪಡುವ ಸುವಾರ್ತೆಗಳು, ಯೇಸು ಕ್ರಿಸ್ತನು ಹೇಳಿದ್ದನ್ನು ಹೀಗೆ ದಾಖಲಿಸುತ್ತವೆ - “ನಿಮಗೆ ಸ್ಥಳವನ್ನು ಸಿದ್ದಮಾಡುವದಕ್ಕೆ ಹೋಗುತ್ತೇನಲ್ಲಾ ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ದಮಾಡಿದ ಮೇಲೆ ತಿರುಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕೆಂದರೆ ನಾನಿರುವ ಸ್ಥಳದಲ್ಲಿ ನೀವು ಇರಬೇಕು. ಮತ್ತು ನಾನು ಹೋಗುವ ಸ್ಥಳದ ಮಾರ್ಗವು ನಿಮಗೆ ತಿಳಿದದೆ ಅಂದನು.” (ಸುವಾರ್ತೆಗಳು, ಯೋಹಾನ 14:23). ಯೇಸು ಕ್ರಿಸ್ತನು ನಮ್ಮನ್ನು ಪರದೈಸಿಗೆ (ಪರಲೋಕಕ್ಕೆ) ಕರೆದೊಯ್ಯುವದಾಗಿ ಹೇಳುತ್ತಾನೆ!
ಆತನು ಪರಲೋಕದ ಕೆಲವು ಸುಂದರ ಮಿನುಗು ನೋಟಗಳನ್ನು ಹೀಗೆ ಬಹಿರಂಗಪಡಿಸಿದನು. ಆತನು ಹೇಳಿದನು
ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ (ಪ್ರಕಟನೆ 21:4).
ನನ್ನ ತಂದೆಯ ಮನೆಯಲ್ಲಿ ಬಹಳ ಬಿಡಾರಗಳು (ಸುಂದರವಾದ ಮನೆಗಳು) ಅವೆ (ಯೋಹಾನ 14:2).
ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ, ಆಳು ಒಡೆಯ ಎಂದೂ, ಗಂಡು ಹೆಣ್ಣು ಎಂದೂ ಬೇಧವಿಲ್ಲ (ಗಲಾತ್ಯ 3:28).
ಪರಲೋಕ - ಬೆಳಕು, ನೀತಿ ಮತ್ತು ಸಂತೋಷದಿಂದ ತುಂಬಿದೆ (ಪ್ರಕಟನೆ 21:2125).
ನಿಜವಾಗಿಯೂ, ನಮ್ಮ ಹೃದಯಗಳು ಹಂಬಲಿಸುವ ಸ್ಥಳ ಪರಲೊಕವೇ ಆಗಿದೆ!
ಯೇಸು ಕ್ರಿಸ್ತನು ಎರಡನೇ ಬಾರಿಗೆ ಬರುವದು ಏಕೆ
ದೇವರು ಹೀಗಾಗಲೇ ಅನೇಕ ಪ್ರವಾದಿಗಳನ್ನೂ ಮತ್ತು ಪವಿತ್ರ ದೂತರನ್ನೂ ಕಳುಹಿಸಿದ್ದಾನೆ. ಯೇಸು ಕ್ರಿಸ್ತನು ಎರಡನೆಯ ಬಾರಿಗೆ ಹಿಂತಿರುಗಿ ಬರಲು ಏಕೆ ಆಯ್ಕೆಮಾಡಿಕೊಂಡನು? ಈ ಪ್ರಶ್ನೆಗಳಿಗೆ ಅದೇ ವಲಸೆ ದೃಷ್ಟಾಂತದೊಂದಿಗೆ ಉತ್ತರಿಸುವುದು ಸುಲಭ. ವೀಸಾ ಪಡೆಯುವುದು ಸುಲಭವಲ್ಲದ ಕಾರಣ, ಅನೇಕ ಜನರು ವಲಸೆ ಹೋಗಲು ಸಹಾಯ ಮಾಡುವ ವಕೀಲರನ್ನು ನೇಮಿಸಿಕೊಳ್ಳುತ್ತಾರೆ. ಆ ವಕೀಲರಿಗೆ ವೀಸಾ ಪಡೆಯುವ ದಾರಿ ತಿಳಿದಿರುತ್ತದೆ. ನಮಗೆ ಮಾರ್ಗದರ್ಶಕನೊಬ್ಬನಿದ್ದರೆ ಅವನು ನಮಗೆ ಸಹಾಯ ಮಾಡುವನೆಂದು ಭರವಸೆಯಿಡಬಹುದು.
ಅಂತೆಯೇ, ಎರಡನೇ ಬಾರಿಗೆ ಬರಲಿರುವ ಯೇಸು ಕ್ರಿಸ್ತನಿಗೆ ಮಾತ್ರ ಪರದೈಸಿಗೆ (ಪರಲೋಕಕ್ಕೆ) ಹೋಗುವ ಮಾರ್ಗ ತಿಳಿದಿರುವುದರಿಂದ, ಆತನು ಮಾತ್ರ ನಮ್ಮನ್ನು ಅಲ್ಲಿಗೆ ಕರೆದೊಯ್ಯುಬಲ್ಲನು. “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” ಎಂದು ಆತನು ತಾನೇ ಹಕ್ಕಿನಿಂದ ನುಡಿದಿದ್ದಾನೆ. (ಯೋಹಾನ 14:6).
ದೇವರಿಂದ ಕಳುಹಿಸಲ್ಪಟ್ಟ ಪ್ರತಿಯೊಬ್ಬ ಪ್ರವಾದಿ ಮತ್ತು ಸಂದೇಶವಾಹಕರು ತಪ್ಪುಗಳನ್ನು ಮಾಡಿದ್ದಾರೆ ಮತ್ತು ಕ್ಷಮೆಯನ್ನು ಯಾಚಿಸಿದ್ದಾರೆ. ಆದರೆ ಯೇಸು ಕ್ರಿಸ್ತ ಎಂದೂ ತಪ್ಪು ಮಾಡಿದವನಲ್ಲ. ಆತನು ಭೂಮಿಯ ಮೇಲೆ ಜೀವಿಸಿದ 33 ವರ್ಷಗಳ ಪರ್ಯಂತರವೂ ಪಾಪರಹಿತ ಜೇವನ ಸಾಗಿಸಿದ್ದನು. ಆದುದರಿಂದಲೇ ಆತನನ್ನು ತಕ್ಷಣವೇ ಪರದೈಸಿಗೆ (ಪರಲೋಕಕ್ಕೆ) ಕರೆದೊಯ್ಯಲಾಯಿತು.
ಪರದೈಸಿನ (ಪರಲೋಕದ) ಪ್ರವೇಶಕ್ಕೆ ಇರಬೇಕಾದ ಅರ್ಹತೆಗಳೇನು ಎಂಬುದನ್ನು ಪಾಪರಹಿತ ಜೀವನ ಸಾಗಿಸಿದ ಒಬ್ಬನೇ ಮಾನವನಾದ ಯೇಸು ಕ್ರಿಸ್ತನಿಂದ ಕಲಿಯಬೇಕು. ಪರಲೋಕದ ಪ್ರವೇಶಕ್ಕೆ ಸಕಾರಾತ್ಮಕ ಭಾವನೆ ಬೆಳೆಯಿಸಿಕೊಳ್ಳುವ ಮಾರ್ಗ ಇದೊಂದೇ. ಕೃತಜ್ಞತಾ ಮನೋಭಾವದಿಂದ, ಆತನ ಪುಸ್ತಕವಾದ ಬೈಬಲ್ (ಸತ್ಯವೇದ) ನಲ್ಲಿ ಪರಲೋಕ ಕುರಿತು ಕಲಿಯಬಹುದು.
ಯೇಸು ಕ್ರಿಸ್ತನ ಬರೋಣಕ್ಕೆ ಸಿದ್ಧರಾಗುವುದು
ಉತ್ತಮವಾದ ಸ್ಥಳಕ್ಕೆ ಹೋಗುವ ನಿಮ್ಮ ವಲಸೆ ಬಗ್ಗೆ ನೀವು ಖಚಿತವಾಗಿರ ಬಹುದೆಂಬುದು, ನಿಮಗೆ ರೋಮಾಂಚನವನ್ನುಂಟು ಮಾಡಿದೆಯಲ್ಲವೇ? ಪರದೈಸಿಯ (ಪರಲೋಕದ) ಲ್ಲಿರುವ ದೇವರ ಮಹಿಮೆಯುಳ್ಳ ರಾಜ್ಯದ ಪ್ರಜೆಯಾಗಲು ನಿಮಗೆ ಆಮಂತ್ರಣ ನೀಡಲಾಗಿದೆ! ಶೀಘ್ರದಲ್ಲೇ ಯೇಸು ಕ್ರಿಸ್ತನು ನಮ್ಮೆಲ್ಲರನ್ನೂ ಆ ಸುಂದರವಾದ ಸ್ಥಳಕ್ಕೆ ಕರೆದುಕೊಂಡು ಹೋಗಲು ಬರುವನು.
ಆ ನ್ಯಾಯತೀರ್ಪಿನ ದಿನದಂದು ಅವರಿಗೆ ಏನಾಗುತ್ತದೆಯೆಂದು ಸ್ವತಃ ತಿಳಿಯದ ಮಾನವ ಜೀವಿಗಳನ್ನು ನೀವು ಹಿಂಬಾಲಿಸುತ್ತಿರುವ ಸಾಧ್ಯತೆ ಇದೆಯೇ? ಯೇಸು ಕ್ರಿಸ್ತನು ನಿಮ್ಮೊಂದಿಗೆ ಇರುವಾಗ, ನಿಮಗೆ ಆ ಸಂದೇಹವೇ ಬೇಡ. ಯೇಸು ಕ್ರಿಸ್ತನು ನಡೆದ ನೇರ ಮಾರ್ಗದಲ್ಲಿ ನಿಮ್ಮನ್ನು ಮುನ್ನಡೆಸುವಂತೆ ದೇವರಲ್ಲಿ ಬೇಡಿಕೊಳ್ಳಿ. ನೀವು ಈ ರೀತಿಯಾಗಿ ಸಹ ದೇವರಲ್ಲಿ ವಿನಂತಿಸಿಕೊಳ್ಳಬಹುದು:
ದೇವರೇ, ನನ್ನ ಹೃದಯವು ಪರಲೋಕಕ್ಕಾಗಿ ಹಾತೊರೆಯುತ್ತಿದೆ. ದಯವಿಟ್ಟು ನನ್ನನ್ನು ಮತ್ತು ನನ್ನ ಪ್ರೀತಿಪಾತ್ರರನ್ನು ಈ ಪ್ರಪಂಚದ ಕಷ್ಟ ಸಂಕಟಗಳಿಂದ ಮುಕ್ತಗೊಳಿಸಿ. ಸಮಯವು ಬಹಳ ಕಡಿಮೆಯಿದೆ ಎಂದು ನಾನು ನಂಬುತ್ತೇನೆ. ದಯವಿಟ್ಟು ನನಗೆ ಮಾರ್ಗದರ್ಶನ ಮಾಡಿರಿ. ನಿಮ್ಮ ಮಾರ್ಗದರ್ಶನದಲ್ಲಿ ನೀವು ನನಗಾಗಿ ಸಿದ್ಧಪಡಿಸಿದ ಆ ಅತ್ಯಂತ ಸುಂದರ ಸ್ಥಳವಾದ ಪರಲೋಕವನ್ನು ನಾನು ಪ್ರವೇಶಿಸಬಹುದು. ಆಮೆನ್.
ನೀವು ಸುವಾರ್ತೆಗಳ ಅಧಿಕೃತ ಪ್ರತಿಯನ್ನು ಪಡೆಯಲು ಬಯಸಿದರೆ, ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.
Copyright © 2023 by Sharing Hope Publications. ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್ ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, ೨೦೧೬. ಶ್ರೀಮಹಮ್ಮದ್ಯೂಸುಫ್ಅವರಿಂದಕನ್ನಡದಖುರಾನ್ಅನುವಾದವಾಗಿದೆ. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications