ಅಂತಿಮ ವಿಮೋಚನೆ

ಅಂತಿಮ ವಿಮೋಚನೆ

ಸಾರಾಂಶ

ಸಂಕಟವು ಶಾಶ್ವತವಾಗಿ ಮುಂದುವರಿಯುವದು ಎಂದು ತೋರುತ್ತದೆ, ಆದರೆ ಕರ್ತನಾದ ಯೇಸು ಕ್ರಿಸ್ತನು ಅದು ಎಂದಾದರೂ ಒಂದು ದಿನ ಕೊನೆಗೊಳ್ಳುತ್ತದೆ ಎಂದು ಹೇಳಿದನು. "ಪರಲೋಕ ರಾಜ್ಯ" ಎಂಬ ಸ್ಥಳಕ್ಕೆ ತನ್ನ ಜನರನ್ನು ಕರೆದೊಯ್ಯಲು ಈ ಭೂಮಿಗೆ ಹಿಂತಿರುಗುವುದಾಗಿ ಆತನು ವಾಗ್ದಾನ ಮಾಡಿದ್ದಾನೆ. ಈ ಅದ್ಭುತ ಸ್ಥಳದಲ್ಲಿ, ಯಾವುದೇ ದುಃಖವಾಗಲಿ, ಮರಣವಾಗಲಿ ಮತ್ತು ಮರುಹುಟ್ಟು ಎಂಬ ಚಕ್ರಗಳಾಗಲಿ ಇರುವುದಿಲ್ಲ. ನಾವು ಸೃಷ್ಟಿಕರ್ತನಾದ ದೇವರೊಂದಿಗೆ ಸದಾಕಾಲವೂ ಇರುವೆವು! ಈ ಕರಪತ್ರವು ನಾವು ನಮ್ಮ ಅಂತಿಮ ವಿಮೋಚನೆಗೆ ಹೇಗೆ ಸಿದ್ಧರಾಗಬಹುದು ಎಂಬುದನ್ನು ತಿಳಿಸುವದು.

ಡೌನ್ ಲೋಡ್

ಗಂಗೆಯ ದಡದಲ್ಲಿ, ಅಂತ್ಯೇಷ್ಟಿ (ಶವ ಸಂಸ್ಕಾರ) ವಿಧಿಯ ಸಮಯದಲ್ಲಿ, ಒಬ್ಬ ಪುರೋಹಿತನು, ಮೃತ ಆತ್ಮವು ಒಂದು ದೇಹದಿಂದ ಇನ್ನೊಂದಕ್ಕೆ, ಮೋಕ್ಷ ಸಿಗುವವರೆಗೆ, ಸಾಗುವ ಪ್ರಯಾಣವನ್ನು ಕುರಿತು ವಿವರಿಸುತ್ತಿದ್ದಾನೆ. ಗುಂಪಿನಲ್ಲಿದ್ದ ಒಬ್ಬ ಪುಟ್ಟ ಹುಡುಗ, ತನ್ನ ಪಕ್ಕದಲ್ಲಿದ್ದವನ ಕಡೆಗೆ ತಿರುಗಿ, ಕುತೂಹಲದಿಂದ ಕೇಳುತ್ತಾನೆ“ಇದು ಯಾವಾಗ ಕೊನೆಗೊಳ್ಳುತ್ತದೆ?” 

ಅನೇಕ ಜನರು ಆಶ್ಚರ್ಯ ಪಡುವಂತಹ ಪ್ರಶ್ನೆಯನ್ನೇ ಆ ಹುಡುಗ ಕೇಳಿದ್ದನು. ನೋವಿನ ಚಕ್ರದಿಂದ ನಾವು ಪಾರಾಗಲು, ಎಷ್ಟು ಜನನಗಳು ಮತ್ತು ಪುನರ್ಜನ್ಮಗಳು ಬೇಕಾಗುತ್ತವೆ? ಈ ಪ್ರಶ್ನೆಯನ್ನು ಇತಿಹಾಸದುದ್ದಕ್ಕೂ ಲೆಕ್ಕಾವಿಲ್ಲದಷ್ಟು ಬಾರಿ ಕೇಳಲಾಗಿದೆಯಾದರೂ ನಿಖರವಾದ ಉತ್ತರವನ್ನು ನೀಡಲು ಸಾಧ್ಯವಾಗಿಲ್ಲ.

ಈ ಭೂಮಿಯ ಮೇಲೆ ಜನನ, ಸಾವು ಮತ್ತು ಯಾತನೆಯ ಚಕ್ರಗಳು ಸಾಮಾನ್ಯವಾಗಿವೆ. ಆದರೆ ಈ ಪ್ರಪಂಚದ ಆಚೆಗೆ, ದೇವರು ಅಸ್ತಿತ್ವದಲ್ಲಿರುವ ಸ್ಥಳದಲ್ಲಿ, ಯಾವುದೇ ನೋವಿನ ಚಕ್ರಗಳಿಲ್ಲ. ಅಲ್ಲಿ ಶಾಶ್ವತವಾದ ಮತ್ತು ಕೊನೆಯಿಲ್ಲದ ಸಂತೋಷ ಮಾತ್ರ ಇದೆ. ಅದೃಷ್ಟವಶಾತ್, ನೋವು ಮತ್ತು ಕಷ್ಟಗಳಿಂದ ವಿಮೋಚನೆಯನ್ನು ಪಡೆಯಲು ಲಕ್ಷಾಂತರ ಮರಣಗಳು ಮತ್ತು ಪುನರ್ಜನ್ಮಗಳ ಮೂಲಕ ಹಾದುಹೋಗುವ ಅಗತ್ಯವಿಲ್ಲ. ತುಂಬಾ ರೋಮಾಂಚನಕಾರಿಯಾದ ವಿಷಯದ ಬಗ್ಗೆ ನಾನು ನಿಮಗೆ ಹೇಳುತ್ತೇನೆ.

ಎಂದೆಂದಿಗೂ ಯಾತನೆಯಿಂದ ಪಾರಾಗು!

ಬಹಳ ವರ್ಷಗಳ ಹಿಂದೆ, ಕರ್ತನಾದ ಯೇಸು, ಈ ಲೋಕಕ್ಕೆ ಒಬ್ಬ ಮಾನವನ ರೂಪದಲ್ಲಿ ಬಂದನು. ಆತನು ರೋಗಿಗಳನ್ನು ಗುಣಪಡಿಸಿದನು ಮತ್ತು ಇತರ ಅನೇಕ ಅದ್ಭುತ ಕಾರ್ಯಗಳನ್ನು ಮಾಡಿದನು. “ಪರಲೋಕ ರಾಜ್ಯ” ಎಂದು ಕರೆಯಲ್ಪಡುವ ಒಂದು ವಿಶೇಷ ಸ್ಥಳದ ಬಗ್ಗೆಯೂ ಅವನು ಬೋಧಿಸಿದನು. ಆತನು ಹೀಗೆ ಹೇಳಿದನು, ಪರಲೋಕವು ಒಂದು ಸ್ಥಳ ಅಲ್ಲಿ ರೋಗವಿಲ್ಲ, ಸಂಕಟವಿಲ್ಲ, ಮತ್ತು ಪುನರ್ಜನ್ಮದ ಅಗತ್ಯವಿಲ್ಲ. ಆ ಸುಂದರವಾದ ಸ್ಥಳದಲ್ಲಿ ಪ್ರತಿಯೊಬ್ಬರೂ ಶಾಶ್ವತವಾಗಿ ವಾಸಿಸುತ್ತಾರೆ. 

ಕರ್ತನಾದ ಯೇಸು ತನ್ನ ಅದ್ಭುತ ರಾಜ್ಯದ ಕುರಿತು ಬೋಧಿಸಿದನು, ತದನಂತರ, ಆತನು ನಮ್ಮ ದುಷ್ಕೃತ್ಯಗಳ ಪರಿಣಾಮಗಳಿಂದ ನಮ್ಮನ್ನು ಮುಕ್ತಗೊಳಿಸಲು ಆತನು ತನ್ನ ಪ್ರಾಣವನ್ನು ತ್ಯಾಗ ಬಲಿಯಾಗಿ ಸಮರ್ಪಿಸಿದನು ಆದ್ದರಿಂದ ನಾವು ಬಯಸಿದರೆ ಅಲ್ಲಿಗೆ ಹೋಗಬಹುದು.

ತನ್ನ ತ್ಯಾಗದ ಸಾವಿನ ಮೂರು ದಿನಗಳ ನಂತರ, ಆತನು ಸಮಾದಿಯಿಂದ ಎದ್ದನು ಮತ್ತು ಪರಲೋಕ ರಾಜ್ಯಕ್ಕೆ ಆರೋಹಣನಾದನು. ಆತನು ತನ್ನ ಹಿಂಬಾಲಕರನ್ನು ಪರಲೋಕಕ್ಕೆ ಕರೆದೊಯ್ಯಲು ಯುಗದ ಸಮಾಪ್ತಿಯಲ್ಲಿ ಹಿಂತಿರುಗಿ ಬರುವುದಾಗಿ ಅವರಿಗೆ ವಾಗ್ದಾನ ಮಾಡಿದ್ದಾನೆ.

ಇದೊಂದು ಅದ್ಭುತ ಭವಿಷ್ಯ ಎಂದು ಅನ್ನಿಸುವುದಿಲ್ಲವೇ? ಸಂಕಟದಿಂದ ಪಾರಾಗಲುಪ್ರತಿಯೊಬ್ಬರೂ ರಕ್ಷಣೆಯನ್ನು ಪಡೆಯಬೇಕೆಂದು ಯೇಸು ಸ್ವಾಮಿ ಬಯಸುತ್ತಾನೆ. ಆದರೆ “ಇದು ಯಾವಾಗ ಕೊನೆಗೊಳ್ಳುತ್ತದೆ” ಎಂದು ಚಿಕ್ಕ ಹುಡುಗ ಕೇಳಿದಂತೆಯೇ, ನಾವು ವಿಮೋಚಿಸಲ್ಪಡುವ ಮುಂಚೆಯೇ ಇದು ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆಯೆಂದು ನಾವು ಸಹ ಆಶ್ಚರ್ಯಪಡುತ್ತೇವೆ. 

ಕರ್ತನಾದ ಯೇಸು ಕ್ರಿಸ್ತನ ಪುನರಾಗಮನ

ಆಸಕ್ತಿಕರವಾಗಿ, ಕರ್ತನಾದ ಯೇಸುಕ್ರಿಸ್ತನ ಶಿಷ್ಯರು ಅದೇ ಪ್ರಶ್ನೆಯನ್ನು ಕೇಳಿದರುಯುಗದ ಸಮಾಪ್ತಿ ಯಾವಾಗ? ಕರ್ತನಾದ ಯೇಸು, ಈ ಯುಗದ ಅಂತ್ಯ ಕಾಲವನ್ನು ತೀವ್ರವಾದ ಭೂಕಂಪಗಳು, ಯುದ್ಧಗಳು, ಹಸಿವು, ಪ್ಲೇಗುಗಳು ಮತ್ತು ಸಾಂಕ್ರಾಮಿಕ ರೋಗಗಳ ಕಾಲವೆಂದು ವರ್ಣಿಸಿದನು. ಮೇಲಿನ ತೊಂದರೆಗಳು ವೇಗವಾಗಿ ಹೆಚ್ಚುತ್ತಿರುವುದನ್ನು ನೋಡುವಾಗ ಜನರ ಹೃದಯವು ಭಯದಿಂದ ಅವರನ್ನು ಕದಲಿಸುತ್ತದೆ. ಇವೆಲ್ಲವೂ ಕರ್ತನಾದ ಯೇಸುವಿನ ಆಗಮನದ ಚಿಹ್ನೆಗಳಾಗಿವೆ. ಈ ಎಲ್ಲಾ ಸೂಚನೆಗಳು ನಮ್ಮ ಕಣ್ಮುಂದೆಯೇ ನಡೆಯುತ್ತಿರುವುದರಿಂದ, ನಾವು ಯುಗದ ಸಮಾಪ್ತಿಯಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಈಗ ನಾವು ಮನಗಾಣಬಹುದು.

ಶೀಘ್ರದಲ್ಲೇ, ಕರ್ತನಾದ ಯೇಸು ತಾನು ವಾಗ್ದಾನ ಮಾಡಿದಂತೆಯೇ ಈ ಭೂಮಿಗೆ ಹಿಂತಿರುಗಿ ಬರುವನು. ಸತ್ತವರು ಸಮಾದಿಯಿಂದ ಎಬ್ಬಿಸಲ್ಪಡುವರು ಮತ್ತು ಪರಿಪೂರ್ಣವಾದ ಹೊಸ ದೇಹಗಳನ್ನು ನೀಡಲಾಗುವುದು, ಸತ್ಯವೇದ ಹೀಗೆ ಹೇಳುತ್ತದೆ, “ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನದೂತನ ಶಬ್ಧದೊಡನೆಯು ದೇವದೂತರ ತುತೂರಿ ಧ್ವನಿಯೊಡೆನೆಯೂ ಇಳಿದುಬರುವನು; ಆಗ ಕ್ರಿಸ್ತನಲ್ಲಿರುವ ಸತ್ತವರು ಮೊದಲು ಎದ್ದು ಬರುವರು” (ಸತ್ಯವೇದ, 1 ಥೆಸಲೋನಿಕ 4:16). 

ಆ ಸಮಯದಲ್ಲಿ, ನಮಗೆ ತಿಳಿದಿರುವಂತೆ ಪ್ರಪಂಚವು ನಾಶವಾಗುತ್ತದೆ ಮತ್ತು ದುಷ್ಟತನವನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲಾಗುವದು. ನಾವು ಸಂತೋಷದ ಒಂದು ಸಾವಿರ ವರ್ಷಗಳನ್ನು ಕಳೆಯುವದಕ್ಕೆ ಪರಲೋಕಕ್ಕೆ ಹೋಗುತ್ತೇವೆ. ಆಮೇಲೆ, ಕರ್ತನಾದ ಯೇಸುವು, ಮರಣ, ನೋವು, ರೋಗ, ಖಿನ್ನತೆ ಮತ್ತು ಒಂಟಿತನಗಳಿಂದ ಮುಕ್ತವಾದ, ಸುಂದರವಾದ ಮತ್ತು ಪರಿಪೂರ್ಣವಾದ ನೂತನ ಲೋಕವನ್ನು ಪುನಃ ಸೃಷ್ಟಿಸುತ್ತಾನೆ. ಮತ್ತು ಆತನ ಮಾರ್ಗವನ್ನು ಅನುಸರಿಸುವ ಪ್ರತಿಯೊಬ್ಬರೂ ಖಂಡಿತವಾಗಿ ಅಲ್ಲಿ ಇರುತ್ತಾರೆಂಬ ವಾಗ್ದಾನವನ್ನು ಆತನು ಮಾಡಿದ್ದಾನೆ. ಇದು ಯೇಸುವಿನ ಮಾರ್ಗ.

ಅಂತಿಮ ವಿಮೋಚನೆ

ಯೇಸು ತನ್ನ ಪುನರಾಗಮನದ ನಿಖರವಾದ ದಿನ ಅಥವಾ ಗಂಟೆಯನ್ನು ಬಹಿರಂಗಪಡಿಸಲಿಲ್ಲ, ಆದರೆ ಅವನು ತನ್ನ ಅನುಯಾಯಿಗಳಿಗೆ ಅನೇಕ ನಿರ್ದಿಷ್ಟ ಚಿಹ್ನೆಗಳನ್ನು ಕೊಟ್ಟನು, ಹೀಗೆ ಆತನ ಬರುವಿಕೆಯು ಬಹಳ ಹತ್ತಿರದಲ್ಲಿದೆ ಎಂದು ನಮಗೆ ತಿಳಿದಿದೆಬಹುಶಃ ನಿಮ್ಮ ಮತ್ತು ನನ್ನ ಜೀವಿತಾವಧಿಯೊಳಗೆ. ಎಂಥಾ ಅದ್ಭುತ ಸುದ್ದಿ! ಕರ್ತನಾದ ಯೇಸುವಿನ ಆಗಮನದ ಸಮಯದಲ್ಲಿ, ನಾವು ನಮ್ಮ ದುಷ್ಕೃತ್ಯಗಳ ಪರಿಣಾಮಗಳಿಂದ ಬಿಡುಗಡೆ ಹೊಂದುವೆವು!

ಪರಲೋಕ ರಾಜ್ಯವನ್ನು ಪ್ರವೇಶಿಸುವವರಲ್ಲಿ ನೀವೂ ಒಬ್ಬರಾಗಲು ಇಚ್ಚಿಸುವುದಾದರೆ, ಯೇಸುವಿನ ಮಾರ್ಗವನ್ನು ಅನುಸರಿಸಲು ಮೂರು ಸರಳ ಹಂತಗಳಿವೆ:

1. ಕರ್ತನಾದ ಯೇಸುವನ್ನು ನಂಬು. ಯೇಸು ತನ್ನ ಜೀವವನ್ನು ಒಂದು ಬಲಿ ಯಜ್ಞವಾಗಿ ಸಮರ್ಪಿಸಿದಾಗ, ಆತನು, ಎಲ್ಲರ ದುಷ್ಕೃತ್ಯಗಳ ಪರಿಣಾಮಗಳನ್ನು ತನ್ನ ಮೇಲೆ ಹೊತ್ತುಕೊಂಡನು. ಆತನು ಇವುಗಳಿಂದ ನಮಗೆ ಮುಕ್ತಿಯನ್ನು ನೀಡಬೇಕೆಂದು ಆತನೇ ಸ್ವಇಚ್ಛೆಯಿಂದ ಇದನ್ನು ಮಾಡಿದನು. ನಿಮ್ಮ ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ ಮತ್ತು ಪೂರ್ಣ ಮನಸ್ಸಿನಿಂದಲೂ ಇದರಲ್ಲಿ ನಂಬಿಕೆ ಇಡುವ ಮೂಲಕ ನೀವು ಈ ಉಡುಗೊರೆಯನ್ನು ಸ್ವೀಕರಿಸಬಹುದು. 

2. ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಿ. ಕರ್ತನಾದ ಯೇಸುವು, ನಾವು, ಕೇವಲ ಧಾರ್ಮಿಕ ಕರ್ತವ್ಯಗಳ ಒಂದು ಪರಿಶೀಲನಾ ಪಟ್ಟಿಯನ್ನು ಅನುಸರಿಸಬೇಕೆಂದು ಬಯಸುವುದಿಲ್ಲ; ನಾವು ಆತನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳಬೇಕೆಂದು ಬಯಸುತ್ತಾನೆ. ನಾವು ಆಪ್ತ ಸ್ನೇಹಿತನೊಂದಿಗೆ ಮಾತನಾಡುವಂತೆ, ನಮ್ಮ ಹೃದಯವನ್ನು ತೆರೆಯುವುದು ಮತ್ತು ನಮ್ಮೆಲ್ಲಾ ರಹಸ್ಯಗಳನ್ನು ಹಂಚಿಕೊಳ್ಳಲು ನಾವು ಆತನಿಗೆ ಪ್ರಾರ್ಥಿಸಬಹುದು. ತನ್ನ ಪವಿತ್ರಾತ್ಮನ ಮೂಲಕ, ಪ್ರತಿದಿನವೂ, ನಮ್ಮೊಂದಿಗೆ ಇರುವುದಾಗಿ ಕರ್ತನಾದ ಯೇಸು ಕ್ರಿಸ್ತನು ವಾಗ್ದಾನ ಮಾಡಿದ್ದಾನೆ. ಆದುದರಿಂದ ನಾವು ಯಾವಾಗ ಬೇಕಾದರೂ ಆತನೊಂದಿಗೆ ಮಾತನಾಡಬಹುದು.

3. ಕರ್ತನಾದ ಯೇಸುವಿನ ಬೋಧನೆಗಳನ್ನು ಅನುಸರಿಸಿ ನಡೆಯಿರಿ. ನಾವು ಜಾಗರೂಕರಾಗಿರಬೇಕು ಮತ್ತು ಆತನ ಬರುವಿಕೆಗಾಗಿ ಸಿದ್ಧರಾಗಿರಬೇಕು ಎಂದು ಯೇಸು ಹೇಳಿದನು. ಕರ್ತನಾದ ಯೇಸುವಿಗೆ ಭಕ್ತಿಯ ಜೀವನ ನಡೆದುಕೊಳ್ಳುವದೆಂದರೆ: ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದು, ಆತನನ್ನು ನಮ್ಮ ಪೂರ್ಣ ಹೃದಯದಿಂದ ಪ್ರೀತಿ ಮಾಡುವದು, ಮತ್ತು ಆತನನ್ನು ಮೇಘಗಳಲ್ಲಿ ಸಂಧಿಸಲು ಯಾವಾಗಲೂ ಸಿದ್ಧರಾಗಿರುವದು ಎಂದರ್ಥ. ಕರ್ತನಾದ ಯೇಸುವಿನ ಹಿಂಬಾಲಕರಾಗಿರಲು ನಾವು ತಿಳಿದುಕೊಳ್ಳಬೇಕಾದ ಎಲ್ಲ ಸತ್ಯಗಳನ್ನು ಸತ್ಯವೇದದಲ್ಲಿ ನಾವು ಕಂಡುಕೊಳ್ಳುತ್ತೇವೆ. 

ಯೇಸುವಿನ ಆಗಮನಕ್ಕಾಗಿ ಆತನ ಮಾರ್ಗವನ್ನು ಹೇಗೆ ಅನುಸರಿಸಬೇಕುಎಂಬುದರ ಬಗ್ಗೆ, ನೀವು ಇನ್ನಷ್ಟು ಕಲಿಯಲು ಬಯಸುವುದಾದರೆ, ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ. 

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, 2016. ಅನುಮತಿಯಿಂದ ಬಳಸಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover