ನನ್ನ ನೋವಿಗೆ ನ್ಯಾಯ

ನನ್ನ ನೋವಿಗೆ ನ್ಯಾಯ

ಸಾರಾಂಶ

ವೇದನೆಯು ಎಲ್ಲಾ ಕಾಲದಲ್ಲಿಯೂ ಇರುವುದಿಲ್ಲ. ದುಷ್ಟರ ಮೇಲೆ ಸೃಷ್ಟಿಕರ್ತನಾದ ದೇವರು ತರುವ ಅಂತಿಮ ನ್ಯಾಯವನ್ನು ಸಭೆ ಆಲೋಚಿಸುತ್ತಿರು ವಾಗ ಈ ಕರಪತ್ರವು ಬಳಲುತ್ತಿರುವ ಆತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಬಗ್ಗೆ ಮಾತನಾಡುತ್ತದೆ. ಯೇಸು ಕಪಟ ನಾಯಕರನ್ನು ಹೇಗೆ ಖಂಡಿಸಿದನು ಎಂಬುದನ್ನೂ ಮತ್ತು ಸಂಕಷ್ಟಕ್ಕೊಳಗಾದವರ ಪರವಾಗಿ ತೀರ್ಪು ನೀಡುವ ಆತನ ಭರವಸೆಯನ್ನೂ ಇದು ವಿವರಿಸುತ್ತದೆ. ಆದರೆ ಸ್ವತಃ ನಾವೇ ಏನಾದರೂ ತಪ್ಪು ಮಾಡಿದ್ದರೆ, ಕರ್ತನಾದ ಯೇಸು ಕ್ರಿಸ್ತನು ನಮಗಾಗಿ ಅನುಭವಿಸಿದ ಸಂಕಟದ ಮೂಲಕ ನಮಗೆ ಕ್ಷಮೆ ಸಿಗುವ ಒಂದು ಮಾರ್ಗ ಸಹ ಇದೆ.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

8 ಭಾಷೆಗಳು

ಪುಟಗಳು

6

ಡೌನ್ ಲೋಡ್

ಮಲಗಿದ್ದ ವಿಮಲ, ದಿಢೀರನೆ ಎದ್ದು ನೇರವಾಗಿ ಹಾಸಿಗೆಯ ಮೇಲೆ ಕುಳಿತಳು. ಅವಳ ಹೃದಯ ಬಡಿದುಕೊಳ್ಳುತ್ತಿತ್ತು. ಮತ್ತೊಂದು ಕೆಟ್ಟ ಕನಸು! ಅವಳು 12 ವರ್ಷದವಳಾಗಿದ್ದಾಗ ಕೆಟ್ಟ ವ್ಯಕ್ತಿಯೊಬ್ಬ ಅವಳ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡಿದ್ದ, ಆ ವ್ಯಕ್ತಿಯ ಕೆಟ್ಟ ನೆನಪುಗಳು ಭೀಕರ ಕನಸಾಗಿ ಪ್ರತಿ ಕೆಲವು ದಿನಗಳಿಗೊಮ್ಮೆ ಅವಳನ್ನು ಕಾಡುತ್ತಿದ್ದವು.

ವಿಮಲಾಗೆ ಆ ದಿನವನ್ನು ಮರೆಯಲು ಸಾಧ್ಯವಾಗಲಿಲ್ಲ. ಆಕೆಗೆ ನಾಚಿಕೆಯಾಗುತ್ತಿತ್ತು ಮತ್ತು ತಾನು ಅಶುದ್ಧಳು ಎಂದು ಅನಿಸುತಿತ್ತು. ಅವಳು ಹೊರುತ್ತಿದ್ದ ನೋವಿನ ಬಗ್ಗೆ ಯಾರ ಬಳಿಯೂ ಬಾಯಿಬಿಟ್ಟಿರಲಿಲ್ಲ. ವಿಮಲ ಈಗ ವಿಶ್ವವಿದ್ಯಾಲಯದಲ್ಲಿ ಪ್ರವೇಶಿಸಿದಳು, ಆದರೆ ಆ ಕೆಟ್ಟ ಕನಸುಗಳು ಈಗಲೂ ಆಕೆಯನ್ನು ಕಾಡುತಲಿವೆ. ಅವಳು ಆ ಮನುಷ್ಯನನ್ನು ದ್ವೇಷಿಸುತ್ತಾಳೆ ಮತ್ತು ಅವನಿಗೆ ಆಗಬೇಕಾದ ಶಿಕ್ಷೆ ಆಗಿಯೇ ಆಗುವದು ಎಂದು ನಂಬಿದ್ದಾಳೆ.

ಕಠಿಣ ಪ್ರಶ್ನೆಗಳು

ವಿಮಾಲಳ ಮನಸ್ಸು ಪ್ರಶ್ನೆಗಳಿಂದ ಬಾಧಿಸಲ್ಪಟ್ಟಿತ್ತು. ಅವಳನ್ನು ಅತ್ಯಾಚಾರ ಮಾಡಿದವನಿಗೆ ಕರ್ಮದ ಮೂಲಕ ನ್ಯಾಯ ಸಿಗುತ್ತದೆಯೇ? ಅವನು ಅವಳುವಾಸಿಸಿದ್ದ ನಗರದಲ್ಲಿ ಪ್ರಸಿದ್ಧ, ಪವಿತ್ರ ವ್ಯಕ್ತಿಯಾಗಿದ್ದನು. ಅವನು ಜನರಿಗಾಗಿ ಅನೇಕ ಸತ್ಕಾರ್ಯಗಳನ್ನು ಮಾಡಿದ್ದನು. ಆಗಾಗ್ಗೆ ಉಪವಾಸ ಮಾಡುತ್ತಿದ್ದನು ಮತ್ತು ಅಪಾರ ಭಕ್ತಿಯಿಂದ ದೇವತೆಗಳನ್ನು ಆರಾಧಿಸುತ್ತಿದ್ದನು. ಅವನ ಎಲ್ಲಾ ಸತ್ಕಾರ್ಯಗಳ ವಿರುದ್ಧ, ಅವನು ಎಂದೋ ಎಸಗಿದ ಒಂದು ಕೆಟ್ಟ ಕಾರ್ಯವನ್ನು ತೂಗಿದಾಗ ಅದು ಏನಾದರೂ ವ್ಯತ್ಯಾಸವನ್ನುಂಟುಮಾಡುವದೇ? ಕರ್ಮದ ನಿಯಮಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಅವಳಿಗೆ ತಿಳಿದಿರಲಿಲ್ಲ, ಆದರೆ ಅವನ ಕೆಟ್ಟ ಕಾರ್ಯವು ಅವಳಲ್ಲಿವ್ಯತ್ಯಾಸವನ್ನುಂಟು ಮಾಡಿದೆ ಎಂದು ಅವಳಿಗೆ ತಿಳಿದಿತ್ತು. ವಿಮಲಾಗೆ ತನ್ನಮನಸ್ಸಿನ ಮೇಲಾದ ನೋವನ್ನು ಮರೆಯಲು ಸಾಧ್ಯವಾಗಲಿಲ್ಲ. 

ನ್ಯಾಯವನ್ನು ಕಂಡುಕೊಳ್ಳುವುದು

ವಿಮಲಾಳ ಸಹಪಾಠಿಗಳಲ್ಲಿ ಒಬ್ಬಳಾದ, ಸೈರಾ, ಅಗತ್ಯದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುವ ಸಂಸ್ಥೆಯಲ್ಲಿ ಇಂಟರ್ನ್ಷಿಪ್ ಹೊಂದಿದ್ದಳು (ಸಹಾಯಕಿಯಾಗಿಯೂ ಸೇವೆ ಸಲ್ಲಿಸುತಿದ್ದಳು). ಒಂದು ದಿನ ಸೈರಾ, ವಿಮಲಾಳನ್ನು, ವಿಧವೆಯರು, ಜಜ್ಜಿಹೋದ ಮಹಿಳೆಯರು ಮತ್ತು ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಸಹಾಯ ಮಾಡುವ ಕೇಂದ್ರಕ್ಕೆ ಭೇಟಿ ನೀಡಲು ಆಹ್ವಾನಿಸಿದಳು. ವಿಮಲಾಗೆ ಹೆದರಿಕೆಯಾಯಿತು ಮತ್ತು ಅವಳ ಭಯಾನಕ ರಹಸ್ಯ ಯಾರಿಗಾದರೂ ತಿಳಿಯಿತೆ ಎಂದು ಆಶ್ಚರ್ಯಪಟ್ಟಳು. ಆದರೆ ಸೈರಾ ತುಂಬಾ ಕರುಣೆ ಯುಳ್ಳವಳಂತೆ ಕಾಣುತ್ತಿದ್ದರಿಂದ ವಿಮಲ ಅವಳ ಜೊತೆ ಹೋಗಲು ನಿರ್ಧರಿಸಿದಳು. ಅವರು ಹೋಗುತ್ತಿರುವಾಗ, ಸೈರಾ, ಕಳೆದ ಕೆಲವು ದಿನಗಳಲ್ಲಿ ತಾನು ನೋಡಿದ ಕೆಲವು ಮನನೊಂದಮಹಿಳೆಯರ ಬಗ್ಗೆ ಹೇಳಿದಳು.

“ಗುರುಗಳಿಂದ ದುರುಪಯೋಗಗೊಂಡ ಮಹಿಳೆಯರನ್ನು ನೀನು ಎಂದಾದರೂ ಕಂಡಿದ್ದೀಯಾ?” ವಿಮಲ ಸಂಕೋಚದಿಂದ ಸೈರಾಳನ್ನು ಕೇಳಿದಳು.

“ಹೌದು, ಒಮ್ಮೊಮ್ಮೆ ಕೇಳಿರುವದುಂಟು” ಸೈರಾ ಉತ್ತರಿಸಿದಳು. “ಇದು ತುಂಬಾ ದುಃಖಕರವಾಗಿದೆ. ಧಾರ್ಮಿಕನೆಂದು ಹೇಳಿಕೊಂಡ ಮಾತ್ರಕ್ಕೆ ಯಾರೋ ಒಬ್ಬನು ದೇವರೊಂದಿಗೆ ಸಂಪರ್ಕ ಹೊಂದಿದ್ದಾನೆಂದು ಅರ್ಥವಲ್ಲ.”

“ಅದು ನಿಜ...”

“ನನ್ನ ಗುರು, ಮಹಾಗುರುಗಳು, ನಮ್ಮ ಕಾಲದಲ್ಲಿ ಧಾರ್ಮಿಕ ಜಗತ್ತು ತುಂಬಾ ಭ್ರಷ್ಟವಾಗುತ್ತದೆ ಎಂದು ಹೇಳಿದ್ದಾರೆ. ನಾವು ಭ್ರಷ್ಟ ಧರ್ಮದಿಂದ ದೂರಬರಬೇಕು ಮತ್ತು ಸೃಷ್ಟಿಕರ್ತನಾದ ದೇವರೊಂದಿಗೆ ಸಂಪರ್ಕ ಹೊಂದಿರಬೇಕು. ಆತನು ನಮಗೆ ಶುದ್ಧ ಹೃದಯಗಳನ್ನು ನೀಡುವನು ಮತ್ತು ನಾವು ಎಸಗಿದ ಕೆಟ್ಟ ಕಾರ್ಯಗಳಿಂದ ನಮ್ಮನ್ನು ಕ್ಷಮಿಸುವನು. ಆಗ ದೇವರು, ಈ ಗ್ರಹವನ್ನು ಇನ್ನು ಮುಂದೆ ದುಷ್ಟ ಜನರಿಲ್ಲದ ಪರಿಪೂರ್ಣ ಸ್ಥಳವಾಗಿ ಮರುಸೃಷ್ಟಿಸುವುದನ್ನು ನೋಡುವವರಲ್ಲಿ ನಾವೂ ಒಬ್ಬರಾಗುವೆವು.”

“ಈ ವಿಷಯ ತುಂಬಾ ಆಸಕ್ತಿಯನ್ನುಂಟುಮಾಡುತ್ತಿದೆ. ನಿಮ್ಮ ಗುರು ಯಾರು?”

“ನಾನು ಕರ್ತನಾದ ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ. ಆತನು ಮಹಾನ್ ಗುರು ಮಾತ್ರವಲ್ಲದೆ, ಆತನು ಮನುಷ್ಯವತಾರವೆತ್ತಿದ ದೇವರು ಸಹ ಹೌದು. ಆತನ ಬಗ್ಗೆ ನಿನಗೆಏನಾದರೂ ತಿಳಿದಿದೆಯೇ?”

“ನಾನು ಆತನ ಕೆಲವು ಚಿತ್ರಗಳನ್ನು ಮಾರುಕಟ್ಟೆಯಲ್ಲಿ ನೋಡಿದ್ದೇನೆ ಎಂದು ನಾನು ಭಾವಿಸುತ್ತೇನೆ, ಆದರೆ ಆತನ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಆತನು ಮತ್ತೇ ಇನ್ನೇನನ್ನು ಹೇಳಿದನು?”

ಬಸ್ಸು ಫುಟ್ ಪಾತ್ಹತ್ತಿರ ಬಂದು ನಿಂತಿತ್ತು. “ಒಳಗೆ ಹೋಗೋಣ ಬಾ, ಆಮೇಲೆ ನಾನು, ಇನ್ನೂ ಹೆಚ್ಚಿಗೆ ಹೇಳುತ್ತೇನೆ” ಎಂದು ಸೈರಾ ಹೇಳಿದಳು.

ಆಧ್ಯಾತ್ಮಿಕ ಬೂಟಾಟಿಕೆ

ವಿಮಲ ಮತ್ತು ಸೈರಾ ಬಸ್ಸನ್ನು ಹತ್ತಿದರು ಮತ್ತು ಒಟ್ಟಿಗೆ ಕುಳಿತುಕೊಂಡರು.

“ಧಾರ್ಮಿಕ ಬೂಟಾಟಿಕೆ ಹುಟ್ಟುಹಾಕುವ ಹಾನಿಕಾರಕ ಪರಿಣಾಮಗಳ ಕುರಿತು ಯೇಸು ಸಾಕಷ್ಟು ಮಾತನಾಡಿದ್ದಾನೆ” ಎಂದು ಸೈರಾ ಹೇಳಿದಳು. ಅವಳು ತನ್ನ ಪರ್ಸ್ ನಿಂದ ಯೇಸು ಕ್ರಿಸ್ತನ ಕುರಿತ ಸಣ್ಣ ಪುಸ್ತಕವನ್ನು ಹೊರತೆಗೆದು, ಅದನ್ನು ತೆರೆದಳು. “ಇಲ್ಲಿ ಏನು ಹೇಳುತ್ತದೆ ಓದಿನೋಡು” ಎಂದು ತೋರಿಸಿದಳು. ವಿಮಲ ಓದಿದಳು,

ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ, ಮತ್ತು ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ. ಆದದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ (ಸತ್ಯವೇದ, ಮತ್ತಾಯ 23:14).

“ಶಾಸ್ತ್ರಿಗಳು ಮತ್ತು ಫರಿಸಾಯರು ಎಂದರೆ ಯಾರು?” ಎಂದು ಅವಳು ಕೇಳಿದಳು.

“ಅವರು ಯೇಸುವಿನ ಕಾಲದಲ್ಲಿ ಧರ್ಮ ಗುರುಗಳಂತಿದ್ದಂತೆ, ಆದರೆ ಅವರು ತುಂಬಾ ಭ್ರಷ್ಟರಾಗಿದ್ದರು” ಎಂದು ಸೈರಾ ವಿವರಿಸಿದಳು. ವಿಮಲ ತಲೆಯಾಡಿಸಿದಳು ಮತ್ತು ಓದುವದನ್ನು ಮುಂದುವರಿಸಿದಳು.

ಅಯ್ಯೋ! ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರ ಭಾಗವನ್ನು ಶುಚಿಮಾಡುತ್ತೀರಿ; ಆದರೆ ಅವು ಒಳಗೆ ಸುಲುಕೊಂಡವುಗಳಿಂದಲೂ ಇಹಭೋಗ ಪದಾರ್ಥಗಳಿಂದಲೂ ತುಂಬಿರುತ್ತವೆ. ಕುರುಡನಾದ ಫರಿಸಾಯನೇ, ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು, ಆಗ ಅವುಗಳ ಹೊರಭಾಗವೂ ಶುಚಿಯಾಗುವದು (ಮತ್ತಾಯ 23:25, 26).

ಶಾಶ್ವತ ತೀರ್ಪು

“ಆದ್ಯಾತ್ಮಿಕ ಬೂಟಾಟಿಕೆಯು ಇಂದಿಗೂ ನಮ್ಮ ನಡುವೆಯೇ ಇರುವುದರಿಂದ ಎಚ್ಚರದಿಂದಿರುವಂತೆ ಸೃಷ್ಟಿಕರ್ತನಾದ ದೇವರು ನಮಗೆ ಹೇಳುತ್ತಾನೆ” ಎಂದು ಸೈರಾ ಹೇಳಿದಳು. “ಲೋಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಸಹ ನಮ್ಮ ದಿನಗಳಲ್ಲಿಯೂ ಬಹಳ ಭ್ರಷ್ಟವಾಗಿರುತ್ತವೆ ಎಂದುಕರ್ತನಾದ ಯೇಸುವಿನ ಪುಸ್ತಕ ಹೇಳುತ್ತದೆ. ಆದರೆ ದೇವರು ಈ ಲೋಕವನ್ನು ಮರುಸೃಷ್ಟಿಸುವಾಗ ದುಷ್ಟರಿಗೆ ನ್ಯಾಯತೀರಿಸುವನು.”

“ಆತನು ಹೇಗೆ ನ್ಯಾಯತೀರಿಸುತ್ತಾನೆ ಎಂದು ನಿನಗೆ ಅನ್ನಿಸುತ್ತದೆ?” ಎಂದು ವಿಮಲ ಪ್ರಶ್ನಿಸಿದಳು. 

“ದೇವರು ಪ್ರತಿಯೊಬ್ಬರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಒಂದು ಪುಸ್ತಕದಲ್ಲಿ ದಾಖಲಿಸುತ್ತಾನೆಂದು ಕರ್ತನಾದ ಯೇಸುವಿನ ಪುಸ್ತಕ ಹೇಳುತ್ತದೆ.” ಎಂದು ಸೈರಾ ವಿವರಿಸಿದಳು. “ಯುಗದ ಸಮಾಪ್ತಿಯಲ್ಲಿ, ಕರ್ತನಾದ ಯೇಸು ಕ್ರಿಸ್ತನು ಮೇಘಗಳಲ್ಲಿ ಬರಲಿದ್ದಾನೆ. ಎಲ್ಲರೂ ಅವನನ್ನು ಕಾಣುವರು. ಆತನ ಪುಸ್ತಕದಲ್ಲಿ ಏನು ಬರೆಯಲಾಗಿದೆಯೋ ಅದಕ್ಕೆ ಅನುಗುಣವಾಗಿ ಆತನುನಮ್ಮೆಲ್ಲರಿಗೆ ನ್ಯಾಯ ನಿರ್ಣಯಿಸುವನು.” 

ವಿಮಲಗೆ ಕುತೂಹಲ ಮೂಡಿತು. “ಆದರೆ ನಮ್ಮ ದುಷ್ಕೃತ್ಯಗಳ ಬಗ್ಗೆ ನಾವು ಏನು ಮಾಡಬೇಕು?” ಎಂದು ಕೇಳಿದಳು.

ಅವರು ತಮ್ಮ ನಿಲ್ದಾಣವನ್ನು ತಲುಪಿದಾಗ ಮತ್ತು ಬಸ್ಸಿನಿಂದ ಹೊರಬಂದಾಗ ಸೈರಾ ಮುಗುಳ್ನಕ್ಕಳು. “ಅದು ಅತ್ಯುತ್ತಮ ಭಾಗ. ಕರ್ತನಾದ ಯೇಸುಕ್ರಿಸ್ತನು ಪ್ರಾಯಶ್ಚಿತ್ತ ಬಲಿಯಾಗಿ ಸತ್ತನು ಮತ್ತುಪುನಃ ಜೀವಿತನಾಗಿ ಎದ್ದು ಬಂದನು. ನಾವು ನಮ್ಮ ಪಾಪಗಳನ್ನು ಒಪ್ಪಿಕೊಂಡು ಆತನಲ್ಲಿ ನಂಬಿಕೆಯಿಟ್ಟರೆ, ನಮಗಾಗಿ ತನ್ನ ಪ್ರಾಣವನ್ನೇತ್ಯಾಗಮಾಡಿದ ಆತನ ಸತ್ಕಾರ್ಯವು ಎಷ್ಟು ಶಕ್ತಿಯುತವಾಗಿದೆಯೆಂದರೆ, ಅದು ನಮ್ಮ ಎಲ್ಲಾ ಪಾಪಗಳನ್ನು ಪುಸ್ತಕದಿಂದ ಅಳಿಸಿಹಾಕುತ್ತದೆ ಎಂದು ಆತನೇ ವಾಗ್ದಾನ ಮಾಡಿದ್ದಾನೆ.” 

ಅತ್ಯುತ್ತಮ ನ್ಯಾಯತೀರ್ಪಿನ ಸಂದೇಶ

ನಿರ್ಲಕ್ಷಿತ ಮಹಿಳೆಯರ ಅಗತ್ಯಗಳನ್ನು ಪೂರೈಸುವ ಕೇಂದ್ರವನ್ನು ಅವರು ತಲುಪಿದ್ದರು. ವಿಮಲ ಪ್ರತಿದಿನದ ಊಟಕ್ಕಾಗಿ ಹೊರಗೆ ಕಾಯುತ್ತಿರುವ ಬಡ, ತೆಳ್ಳಗಿನ ವಿಧವೆಯರನ್ನು ನೋಡಿದಳು. ಕಪ್ಪು ಕನ್ನಡಕದ ಹಿಂದೆ ಕಪ್ಪು ಕಣ್ಣನ್ನು ಮರೆಮಾಚಲು ಪ್ರಯತ್ನಿಸುತ್ತಿರುವ ಮಧ್ಯಮ ವರ್ಗದ ಮಹಿಳೆಯೊಬ್ಬಳು ಬೇಗನೇ ಒಳಗೆ ಪ್ರವೇಶಿಸುವುದನ್ನು ಅವಳು ನೋಡಿದಳು. ವಿಮಲಳ ಹೃದಯವು ಸಹಾನುಭೂತಿಯಿಂದ ಹಿಂಡಲ್ಪಟಿತು. ಅವಳು ಒಬ್ಬಳು ಮಾತ್ರ ನೋವುಂಡ ಮಹಿಳೆ ಆಗಿರಲಿಲ್ಲ!

ಸೈರಾ ಗಮನಿಸಿದಳು, “ನೀನು ಚೆನ್ನಾಗಿದ್ದೀಯಾ?” ಎಂದು ಕೇಳಿದಳು.

“ಹೌದು, ನಾನು ಚೆನ್ನಾಗಿದ್ದೇನೆ” ಎಂದು ವಿಮಲ ಉತ್ತರಿಸಿದಳು. “ನಮ್ಮ ನ್ಯಾಯಾಧೀಶನಾಗಲು ನಮಗೆ ಶೀಘ್ರದಲ್ಲೇ ಕರ್ತನಾದ ಯೇಸು ಬರಬೇಕು ಎಂದು ನಾನು ಯೋಚಿಸಲು ಪ್ರಾರಂಭಿಸುತ್ತಿದ್ದೇನೆ. ಆತನು ದುಷ್ಟ ಜನರನ್ನು ಶಿಕ್ಷಿಸಿ, ಕಣ್ಮರೆಯಾಗುವಂತೆ ಮಾಡುತ್ತಾನೆ ಮತ್ತು ಒಳ್ಳೆಯ ಜನರು ನಿತ್ಯಕಾಲಕ್ಕೂ ಜೀವಿಸಲು ಸುಂದರವಾದ ಸ್ಥಳಕ್ಕೆ ಕರೆದೊಯ್ಯುತ್ತಾನೆ ಎಂಬುದು ನಿಜವಾದರೆ, ಅದು ನಿಜಕ್ಕೂ ನಾನು ಕೇಳಿದ ಅತ್ಯುತ್ತಮ ತೀರ್ಪು ಆಗಿರುತ್ತದೆ!”

ಕರ್ತನಾದ ಯೇಸು ಕ್ರಿಸ್ತನ ಪುಸ್ತಕವನ್ನು ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವುದಾದರೆ, ದಯವಿಟ್ಟು ಈ ಕರಪತ್ರದಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, 2016. ಅನುಮತಿಯಿಂದ ಬಳಸಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover