
ಲೋಕದ ಅಂತ್ಯ: ಒಂದು ಆಘಾತಕಾರಿ ಪ್ರವಾದನೆ!
ಸಾರಾಂಶ
ನಮ್ಮ ಪ್ರಪಂಚದ ಭವಿಷ್ಯವು ನಿಗೂಢವಲ್ಲ. ಕರ್ತನಾದ ಯೇಸು ಕ್ರಿಸ್ತನ ಪುಸ್ತಕವಾದ ಸತ್ಯವೇದದಲ್ಲಿ ಇದು ಮುಂತಿಳಿಸಲ್ಪಟ್ಟಿದೆ. ಅಂತ್ಯವು ಹತ್ತಿರದಲ್ಲಿದೆ ಎಂದು ನಾವು ತಿಳಿದುಕೊಳ್ಳಲು ನಿರ್ದಿಷ್ಟ ಗುರುತುಗಳನ್ನು ವೀಕ್ಷಿಸಲು ಯೇಸು ನಮಗೆ ಹೇಳಿದನು. ನಾವು ಆತನ ಬೋಧನೆಗಳನ್ನು ಅನುಸರಿಸಿ, ಆತನಲ್ಲಿ ನಮ್ಮ ನಂಬಿಕೆಯನ್ನು ಇಟ್ಟರೆ, ಭವಿಷ್ಯದ ಬಗ್ಗೆ ನಮಗೆ ಖಚಿತತೆ ಇರುತ್ತದೆ. ಈ ಕರಪತ್ರವು ಪ್ರಪಂಚದ ಅಂತ್ಯ ಮತ್ತು ನಿತ್ಯತ್ವದ ಆರಂಭಕ್ಕೆ ಹೇಗೆ ಸಿದ್ದರಾಗಬೇಕೆಂದು ನಮಗೆ ತಿಳಿಸಿಕೊಡುತ್ತದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
8 ಭಾಷೆಗಳು
ಪುಟಗಳು
6
ವಯಸ್ಸಾದ ರಮಣದೀಪ್ ಹೆಚ್ಚು ಆರಾಮದಾಯಕ ಭಂಗಿಯನ್ನು ಕಂಡುಕೊಳ್ಳಲು ತಿರುಗಿದನು. ಇತ್ತೀಚಿನ ದಿನಗಳಲ್ಲಿ ಅವನ ಕೀಲುಗಳು ಹೆಚ್ಚು ಹೆಚ್ಚು ನೋಯುತ್ತಿವೆ, ಮತ್ತು ಅವನು ಅತ್ತಲಾಗಿ ಭತ್ತದ ಗದ್ದೆಗಳನ್ನು ನೋಡಿದಾಗ, ಬಣ್ಣಗಳು ಒಟ್ಟಿಗೆ ಮಸುಕಾಗಿರುವಂತೆ ತೋರುತ್ತಿತ್ತು. ಅವನ ಸೊಸೆ ಅಡಿಗೆ ಮಾಡುವುದನ್ನು ಅವನು ಕೇಳಿಸಿಕೊಳ್ಳುತ್ತಿದ್ದನು. ತನ್ನ ಮನೆಯವರಿಗೆ ತಾನು ಹೊರೆಯಾಗಿದ್ದೇನೋ ಎಂಬ ಅನುಮಾನ ಸಹ ಅವನನ್ನು ಕಾಡುತ್ತಿತ್ತು. ವಯಸ್ಸಾಗುವುದು ಸುಲಭವಾಗಿರಲಿಲ್ಲಅವನಿಗಾಗಲಿ ಅಥವಾ ಅವನನ್ನು ಆರೈಕೆ ಮಾಡುವವರಿಗಾಗಲಿ.
ಅವನು ಚಿಕ್ಕವನಾಗಿದ್ದಾಗ ತನ್ನ ಗುರುಗಳು ಹೇಳಿದ್ದನ್ನು ಕೇಳಿಸಿಕೊಂಡಿದ್ದರ ಬಗ್ಗೆ ಆಲೋಚಿಸಿದನು ಮತ್ತು ಇನ್ನೂ ದೇವಸ್ಥಾನಕ್ಕೆ ನಡೆದುಕೊಂಡು ಹೋಗಬಹುದು. ಅವನ ಗುರುಗಳು, ನಾಲ್ಕು ವಿಶ್ವಯುಗಗಳು ಇವೆಮತ್ತು ಪ್ರತಿಯೊಂದು ಯುಗವೂ ಹಂತಹಂತವಾಗಿ ಕೆಟ್ಟದಾಗಿ ಬೆಳೆಯುತ್ತಿದೆ ಎಂದು ಹೇಳಿದ್ದರು. ಅಂತಿಮ ಯುಗಕಲಿಯುಗ. ಅದು ಎಲ್ಲಕ್ಕಿಂತ ಕೆಟ್ಟ ಯುಗವಾಗಿದೆ ಮತ್ತು ದುರ್ಗುಣ, ದುಃಖ ಹಾಗೂ ಕತ್ತಲೆಯಿಂದ ತುಂಬಿರುತ್ತದೆ. ರಮಣದೀಪ್ ನಿಟ್ಟುಸಿರು ಬಿಟ್ಟನು. ಪ್ರಾಯಶಃ ಕಲಿಯುಗವು ಸ್ವಲ್ಪ ವೃದ್ಧಾಪ್ಯದಂತೆಯೇ ಇತ್ತುಒಂದು ಕಾಲದಲ್ಲಿ ಉತ್ತಮವಾಗಿದ್ದ ಎಲ್ಲದರ ಅಂತಿಮ ಅವನತಿ. ಭೂಕಂಪಗಳು, ರೋಗಗಳು, ಕೊಲೆಗಳು ಮತ್ತು ಯುದ್ಧಗಳಿಂದ ಜನರು ಹೇಗೆ ಸಾಯುತ್ತಿದ್ದಾರೆ ಎಂಬ ಸುದ್ದಿಯನ್ನು ಅವನು ಕೇಳಿಸಿಕೊಂಡಿದ್ದನು. ಸತ್ತಿಲ್ಲದವರೂ, ಪ್ರಾಪಂಚಿಕರೂ, ಖಿನ್ನತೆಗೊಳಗಾದವರೂ ಮತ್ತು ಅನೈತಿಕರೂ ಆಗುತ್ತಿದ್ದಾರೆ.
ಈ ದುಃಖ ತುಂಬಿದ ಪ್ರಪಂಚದ ಅಂತ್ಯವು ಯಾವಾಗ ಆಗುತ್ತದೆ? ಅವನ ಮುದಿ ದೇಹ ಮತ್ತು ಅವನತಿ ಹೊಂದುತ್ತಿರುವ ಗ್ರಹ ಮರುಹುಟ್ಟು ಪಡೆಯಬಹುದೇ?
ಭೂಮಿಯ ಭವಿಷ್ಯ ಮುನ್ಸೂಚಿಸುವುದು
ನಾನು ನಿಮಗೆ ದೈವಿಕ ಕಾಲಜ್ಞಾನಿಯೊಬ್ಬನನ್ನು ಪರಿಚಯಿಸಲು ಬಯಸುತ್ತೇನೆ. ಅವನು ನೀಡಿದ ಭವಿಷ್ಯದ ಚಿಹ್ನೆಗಳನ್ನು ನಾನು ನಿಸ್ಸಂದೇಹವಾಗಿ ನಂಬುತ್ತೇನೆ. ಆ ಕಾಲಜ್ಞಾನಿಯೇ ಕರ್ತನಾದ ಯೇಸು ಕ್ರಿಸ್ತನು. ಆತನು ಮನುಷ್ಯನಾಗಿ ಭೂಮಿಗೆ ಬಂದನು. ಜನರನ್ನು ಗುಣಪಡಿಸಿದನು ಮತ್ತು ಆತನು ಪರಲೋಕ ರಾಜ್ಯಕ್ಕೆ ಹೇಗೆ ಪ್ರವೇಶಿಸಬಹುದು ಎಂದು ಎಲ್ಲರಿಗೂ ತಿಳಿಸಿದನು. 33 ನೇ ವಯಸ್ಸಿನಲ್ಲಿ, ಆತನು ತನ್ನ ಜೀವವನ್ನು ತ್ಯಾಗಬಲಿಯಾಗಿ ಸಮರ್ಪಿಸಿದನು. ನಂತರ ಆಶ್ಚರ್ಯಕರವಾಗಿ, ಮತ್ತೆ ಜೀವಂತವಾಗಿ ಎದ್ದು ಬಂದಿದ್ದನು! ನಾವು ಆತನನ್ನು ನಂಬಿ, ಆತನಿಗೆ ವಿಧೇಯರಾಗಿ ನಡೆದುಕೊಂಡರೆ, ಆತನ ತ್ಯಾಗವು ನಮಗಾಗಿ ಕ್ಷಮೆ ಮತ್ತು ಬಿಡುಗಡೆಯನ್ನು ಸಾಧಿಸುತ್ತದೆ ಎಂದು ಆತನು ಹೇಳಿದ್ದಾನೆ.
ಕರ್ತನಾದ ಯೇಸು ಕ್ರಿಸ್ತನು ನಮ್ಮ ಪ್ರಪಂಚದ ಭವಿಷ್ಯದ ಬಗ್ಗೆ ಮಾತನಾಡಿದ್ದನು ಮತ್ತು ಆತನು ಈ ಪ್ರಸ್ತುತ ದುಷ್ಟ ಯುಗವನ್ನು ಅಂತ್ಯಕ್ಕೆ ತರುವದಾಗಿ ಸಹ ನುಡಿದಿದ್ದಾನೆ. ಆತನ ಪುಸ್ತಕವಾದ, ಸತ್ಯವೇದವು ಪ್ರವಾದನೆಗಳಿಂದ ತುಂಬಿದೆ. ಯುಗದ ಅಂತ್ಯವು ಹತ್ತಿರದಲ್ಲಿರುವದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನಾವು ಆತನ ಪ್ರವಾದನೆಗಳ ಕಡೆಗೆ ಗಮನ ಹರಿಸಬೇಕು.
ಲೋಕದ ಅಂತ್ಯ
ಒಂದು ದಿನ, ಕರ್ತನಾದ ಯೇಸುವಿನ ವಿದ್ಯಾರ್ಥಿಗಳು (ಶಿಷ್ಯರು) ಆತನನ್ನು ಕುರಿತು ಹೀಗೆ ಕೇಳಿದರು“ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು?” (ಸತ್ಯವೇದ, ಮತ್ತಾಯ 24:3). ಆತನ ಬರೋಣವು ಸಮೀಪವಾಗಿದೆ ಎಂದು ನಮಗೆ ತಿಳಿಸಲು ಸಹಾಯ ಮಾಡುವ ಚಿಹ್ನೆಗಳಿಂದ ಯುಗದ ಅಂತ್ಯವು ಮುಂಚಿತವಾಗಿರುತ್ತದೆ ಎಂದು ಕರ್ತನಾದ ಯೇಸು ಅವರಿಗೆ ಹೇಳಿದನು. ಈ ಚಿಹ್ನೆಗಳು ಒಳಗೊಂಡಿವೆ:
ಸುಳ್ಳು ರಕ್ಷಕರು.ಕರ್ತನಾದ ಯೇಸು ಹೀಗೆ ಹೇಳಿದನು “ಯಾವನಾದರೂ ನಿಮ್ಮನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರ್ರಿ. ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡುನಾನು ಕ್ರಿಸ್ತನು, ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು” (ಮತ್ತಾಯಯೇಸು ಕ್ರಿಸ್ತನು ಎಂದು ಹೇಳಿಕೊಳ್ಳುವ ಕಪಟವೇಷಧಾರಿಗಳಿಂದ ನಾವು ಮೋಸ ಹೋಗಲೇಬಾರದು. “ಹೇಗೆ ಮಿಂಚು ಮೂಡಣದಲ್ಲಿ ಹುಟ್ಟಿ ಪಡುವಣದವರೆಗೂ ಕಾಣಿಸುತ್ತದೋ ಹಾಗೇ” (ಮತ್ತಾಯ 24:27), ಕ್ರಿಸ್ತನ ನಿಜವಾದ ಬರುವಿಕೆಯನ್ನು ಪ್ರಪಂಚದಾದ್ಯಂತ ಇರುವರೆಲ್ಲರೂ ನೋಡುವರುಇಡೀ ಪ್ರಪಂಚವು ಭಯಾನಕ ಮತ್ತು ವಿಸ್ಮಯಕಾರಿ ಪಿಡುಗಿನಿಂದ ನರಳಿದ ನಂತರ ಇದು ಸಂಭವಿಸುತ್ತದೆ.
ಯುದ್ಧಗಳು ಮತ್ತು ಯುದ್ಧಗಳ ವದಂತಿಗಳು. ಯೇಸು ಹೀಗೆ ಹೇಳಿದನು, “ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳಬೇಕಾಗಿರುವದು. ಕಳವಳಪಡದಂತೆ ನೋಡಿಕೊಳ್ಳಿರಿ; ಯಾಕಂದರೆ ಹಾಗಾಗುವದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ. ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು” (ಮತ್ತಾಯನಾವು ಯುಗದ ಅಂತ್ಯವನ್ನು ತಲುಪುತ್ತಿದ್ದಂತೆ, ಯುದ್ಧಗಳು ಹೆಚ್ಚಾಗಿ ಆಗುತ್ತವೆ ಮತ್ತು ಹೆಚ್ಚು ತೀವ್ರವಾಗುತ್ತವೆ.
ಬರಗಳು, ಭೂಕಂಪಗಳು ಮತ್ತು ವ್ಯಾಧಿಗಳು. ಆತನು ಮುನ್ಸೂಚಿಸಿದ ಮೂರನೆಯ ಚಿಹ್ನೆ ಏನೆಂದರೆ, “ಅಲ್ಲಲ್ಲಿ ಬರಗಳು, ಘೋರ ವ್ಯಾಧಿಗಳು ಮತ್ತು ಭೂಕಂಪಗಳು ಆಗುವವು; ಇವೆಲ್ಲವುಗಳು ಸಂಕಟಗಳ ಆರಂಭವು” (ಮತ್ತಾಯಈ ಶತಮಾನದ ಆರಂಭದಿಂದ 20 ದಶಲಕ್ಷಕ್ಕೂ ಹೆಚ್ಚು ಜನರು ಕ್ಷಾಮದಿಂದ ಬಳಲುತ್ತಿದ್ದಾರೆ. 2015 ರಂದು ನೇಪಾಳದಲ್ಲಿ ಸಂಭವಿಸಿದ ಭೂಕಂಪವು 8,000 ಜನರನ್ನು ಬಲಿತೆಗೆದುಕೊಂಡಿತು. ಇದು ಇತಿಹಾಸದಲ್ಲೇ ಅತ್ಯಂತ ಭಯಾನಕವಾದ ದುರ್ಘಟನೆ. ರೋಗಗಳು ಲೆಕ್ಕವಿಲ್ಲದಷ್ಟು ಜೀವಗಳನ್ನು ಬಲಿ ತೆಗೆದುಕೊಂಡಿವೆ. ಕರ್ತನಾದ ಯೇಸು ನುಡಿದ ಪ್ರವಾದನೆಯು ನಿಶ್ಚಿತವಾಗಿ, ನೆರವೇರುತ್ತಿರುವದನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ.
ನೈತಿಕ ಅವನತಿ. ಕರ್ತನಾದ ಯೇಸು ಹೀಗೆ ಹೇಳಿದನು“ಇದಲ್ಲದೆ ಅಧರ್ಮವು ಹೆಚ್ಚಾಗುವುದರಿಂದ, ಬಹುಜನರ ಪ್ರೀತಿಯು ತಣ್ಣಗಾಗಿ ಹೋಗುವದು” (ಮತ್ತಾಯ 24:12). ಭಾರತದಲ್ಲಿ ಪ್ರತಿ ದಿನ ಸರಾಸರಿ 91 ಅತ್ಯಾಚಾರಗಳು ಮತ್ತು 79 ಕೊಲೆಗಳು ನಡೆಯುತ್ತಿವೆ ಎಂದು ಅಂದಾಜಿಸಲಾಗಿದೆ. ಜನರು ತುಂಬಾ ಸ್ವಾರ್ಥಿಗಳಾಗಿ ಬೆಳೆಯುತ್ತಿದ್ದಾರೆ ಅವರ ದುಷ್ಟ ಕಾರ್ಯಗಳು ಇತರರನ್ನು ಎಷ್ಟರ ಮಟ್ಟಿಗೆ ನೋಯಿಸುತ್ತಿದೆ ಎಂಬುದರ ಬಗ್ಗೆ ಅವರು ಕಾಳಜಿ ವಹಿಸುವದೇ ಇಲ್ಲ.
ಕರ್ತನಾದ ಯೇಸು ತಾನು ಮೇಘಾರೂಢನಾಗಿ ಬರುವ ಮುನ್ನ ಈ ಎಲ್ಲಾ ಚಿಹ್ನೆಗಳು ಕಾಣಿಸಿಕೊಳ್ಳುವವು ಎಂದು ಪ್ರವಾದಿಸಿದ್ದನು. ಈ ಚಿಹ್ನೆಗಳು ಸಂಭವಿಸುವುದನ್ನು ನಾವು ನೋಡುತ್ತಿದ್ದಂತೆ, ಆತನ ಪ್ರವಾದನೆಗಳು ನಿಜವೆಂದೂ ಮತ್ತು ಆತನ ಬರೋಣ ಬಹಳ ಹತ್ತಿರದಲ್ಲಿದೆ ಎಂದೂ ನಾವು ತಿಳಿಯಬಹುದು!
ಕರ್ತನಾದ ಯೇಸುವಿನ ಪುನರಾಗಮನಕ್ಕಾಗಿ ಸಿದ್ದತೆ!
ಸ್ವಾರ್ಥ, ಅಹಂಕಾರ ಮತ್ತು ಅನೈತಿಕತೆಯಲ್ಲಿ ಬದುಕುತ್ತಿರುವವರು ಕರ್ತನಾದ ಯೇಸು ಬಂದಾಗ ಸಂತೋಷಪಡುವುದಿಲ್ಲ. ವಾಸ್ತವವಾಗಿ, ಆತನು ಮೇಘಗಳಲ್ಲಿ ಹಿಂತಿರುಗಿ ಬರುವಾಗ, ಅವರ ಎಲ್ಲಾ ಕೆಟ್ಟ ಕಾರ್ಯಗಳು, ಒಂದು ವಿನಾಶಕಾರಿ ಕ್ಷಣದಲ್ಲಿ ಅವರ ಮೇಲೆ ಆಕ್ರಮಣ ಮಾಡುವವು. ಅವರು ಆತನಿಂದ ಮರೆಯಾಗಲು ಹುಡುಕುತ್ತಾರೆ ಮತ್ತು ಬೆಟ್ಟಗಳಿಗೂ ಮತ್ತು ಬಂಡೆಗಳಿಗೂ ಕೂಗುತ್ತಾರೆ:“ನಮ್ಮ ಮೇಲೆ ಬೀಳಿರಿ ಮತ್ತು ಸಿಂಹಾಸನದ ಮೇಲೆ ಕುಳಿತಿರುವ ಆತನ ಮುಖದಿಂದ ನಮ್ಮನ್ನು ಮರೆಮಾಡಿರಿ!”(ಸತ್ಯವೇದ, ಪ್ರಕಟನೆ 6:16).
ಆದರೆ ಕರ್ತನಾದ ಯೇಸು ಕ್ರಿಸ್ತನ ತ್ಯಾಗದಲ್ಲಿ ಭರವಸೆಯಿಡುವವರು, ಆತನು ಬರುವ ಆ ದಿನದಲ್ಲಿ ತಕ್ಷಣವೇ ಬದಲಾಗುವರು ಮತ್ತು ಹೊಸ ಹಾಗೂ ಅಮರ ದೇಹಗಳನ್ನು ಧರಿಸಿಕೊಳ್ಳುವರು. ಅವರು ಮೋಡಗಳೊಳಗೆ ತೇಲುತ್ತಾರೆ ಮತ್ತು ಈ ಕ್ಷೀಣಿಸಿದ ಪ್ರಪಂಚದಿಂದ ಶಾಶ್ವತವಾಗಿ ತಪ್ಪಿಸಿಕೊಳ್ಳುತ್ತಾರೆ. ನೀವು ಪರಲೋಕದಲ್ಲಿ, ಶಾಶ್ವತವಾಗಿ, ಸಂತೋಷವಾಗಿರುವ ವ್ಯಕ್ತಿಗಳಲ್ಲಿ, ಒಬ್ಬರಾಗಲು ಬಯಸಿದರೆ, ಇಂದು ನೀವು ಈ ಸರಳ ಪ್ರಾರ್ಥನೆಯನ್ನು ಮಾಡಿರಿ:
ಪ್ರೀತಿಸ್ವರೂಪಿಯಾದ ಸೃಷ್ಟಿಕರ್ತನಾದ ದೇವರೇ, ಕರ್ತನಾದ ಯೇಸು ಶೀಘ್ರದಲ್ಲೇ ಹಿಂತಿರುಗುಲಿದ್ದಾನೆ ಎಂದು ನಾನು ನಂಬುತ್ತೇನೆ. ಕರ್ತನಾದ ಯೇಸುವನ್ನು ಹೇಗೆ ತಿಳಿಯುವುದು ಮತ್ತು ನಂಬುವುದು ಎಂಬುದನ್ನು ದಯವಿಟ್ಟು ನನಗೆ ಕಲಿಸಿ, ಇದರಿಂದ ನಾನು ಸ್ವರ್ಗಕ್ಕೆ ಕರೆದೊಯ್ಯುವವರಲ್ಲಿ ಒಬ್ಬನಾಗುತ್ತೇನೆ. ಆಮೆನ್.
ಕರ್ತನಾದ ಯೇಸುವಿನ ಭವಿಷ್ಯದ ಪ್ರವಾದನೆಗಳ ಕುರಿತು ಹೆಚ್ಚಾಗಿ ತಿಳಿದುಕೊಳ್ಳಲು ನೀವು ಬಯಸುವುದಾದರೆ, ದಯವಿಟ್ಟು ಈ ಕರಪತ್ರದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.
Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, 2016. ಅನುಮತಿಯಿಂದ ಬಳಸಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications