
ಕ್ಷಮೆಯನ್ನು ಕಂಡುಕೊಳ್ಳುವುದು
ಸಾರಾಂಶ
ನಾವೆಲ್ಲರೂ ಜೀವನದಲ್ಲಿ ತಪ್ಪುಗಳನ್ನು ಮಾಡುತ್ತೇವೆ. ನಾವು ಕರ್ಮಫಲಕಾಗಿ ಕಾಯಲೇಬೇಕೇ, ಆಥವಾ ದೈವಿಕ ಕ್ಷಮೆ ಎನ್ನುವಂತದ್ದು ಏನಾದರೂ ಇದೆಯೇ? ಈ ಕರಪತ್ರವು ಯೇಸುವಿನ ದಾರಿತಪ್ಪಿದ ಮಗನ ಸಾಮ್ಯವನ್ನು ಸ್ಥಳೀಯ ರೂಪದಲ್ಲಿ ಕೊಡುತ್ತದೆ ಮತ್ತು ಸೃಷ್ಟಿಕರ್ತನಾದ ದೇವರು ಪಾಪಿಗಳನ್ನು ತೆರೆದ ಬಾಹುಗಳಿಂದ ಹೇಗೆ ಸ್ವಾಗತಿಸುತ್ತಿದ್ದಾನೆ ಹಾಗು ಜೀವಮಾನದ ಪಾಪವನ್ನು ಕ್ಷಣಮಾತ್ರದಲ್ಲಿ ಹೇಗೆ ಕ್ಷಮಿಸುತ್ತಾನೆ ಎಂಬುದನ್ನು ತೋರಿಸುತ್ತದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
8 ಭಾಷೆಗಳು
ಪುಟಗಳು
6
ಪ್ರತಾಪ ಒಬ್ಬ ಶ್ರೀಮಂತ ಜಮೀನ್ದಾರನ ಮಗನಾಗಿದ್ದನು. ಅವರು ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದರು ಮತ್ತು ಅನೇಕ ಆಳುಗಳನ್ನು ಹೊಂದಿದ್ದರು. ಪ್ರತಾಪನು ಯಾವಾಗಲೂ ಅತ್ಯುತ್ತಮವಾದ ಬಟ್ಟೆಗಳನ್ನು, ಆಹಾರವನ್ನು ಮತ್ತು ಶಿಕ್ಷಣವನ್ನು ಹೊಂದಿದ್ದನುತನ್ನ ಹೆತ್ತವರು ತನ್ನನ್ನು ತುಂಬಾ ಪ್ರೀತಿಸುತ್ತಾರೆ, ವಿಶೇಷವಾಗಿ ತನ್ನ ತಂದೆ ಎಂಬುದು ಅವನಿಗೆ ತಿಳಿದಿತ್ತು.
ಆದರೆ ಪ್ರತಾಪನು ದೊಡ್ಡವನಾದಂತೆ, ಅವನು ಬದಲಾಗಲು ಪ್ರಾರಂಭಿಸಿದನು. ಹಳೆಯ ರೀತಿ ನೀತಿಗಳು ಅವನಿಗೆ ಆಕರ್ಷಕವಾಗಿರಲಿಲ್ಲ. ತಂದೆಯ ಮನೆ ಮತ್ತು ತಂದೆಯ ರೀತಿ ನೀತಿಗಳು ನಿರ್ಬಂಧಿತವಾಗತೊಡಗಿದವು ಎಂದು ಅನಿಸಿತು. ಪ್ರತಾಪನು ಸ್ವಾತಂತ್ರ್ಯಕ್ಕಾಗಿ ಹಾತೊರೆಯುತ್ತಿದ್ದನು.
ಒಂದು ದಿನ, ತನ್ನ ತಾಯಿಯನ್ನು ತನಗೋಸ್ಕರ ವಿಶೇಷ ಮನವಿಯನ್ನು ತಂದೆಯ ಬಳಿ ಮಾಡುವಂತೆ ಪ್ರತಾಪನು ಕೇಳಿಕೊಂಡನು. ಅವನು ತನಗೆ ಏನು ಬೇಕೋ ಅದನ್ನು ಅವಳಿಗೆ ಹೇಳಿದಾಗ, ಆಕೆ ಭಯಭೀತಳಾಗಿ ಹಿಂದೆ ಸರಿದಳು. ಆದರೆ ಅವಳು ಕೇಳಲು ಒಪ್ಪಿಕೊಳ್ಳುವವರೆಗೂ ಅವನು ಅವಳನ್ನು ಒತ್ತಾಯಿಸಿದನು. ಇದಕ್ಕೆ ಹಲವಾರು ದಿನ ತೆಗೆದುಕೊಂಡಳು. ಅಂತಿಮವಾಗಿ ಆಕೆ ಅಳುತ್ತಾ ಹಿಂದಿರುಗಿದಳು.
ತನ್ನ ಮಗನನ್ನು ಕಣ್ಣೆತ್ತಿ ನೋಡಲು ಸಾಧ್ಯವಾಗದೆ “ಅವನು ಅದನ್ನು ಮಾಡುತ್ತಾನೆ,” ಎಂದು ಆಕೆ ಹೇಳಿದಳು. “ಅವನು ನಮ್ಮ ಅರ್ಧದಷ್ಟು ಆಸ್ತಿಯನ್ನು ಮಾರಿ ನಿನಗೆ ಸೇರಬೇಕಾದ ಪಿತ್ರಾರ್ಜಿತ ಆಸ್ತಿಯನ್ನು ನಿನಗೆ ಕೊಡುತ್ತಾನೆ. ಆದರೆ ಯಾಕೆ, ನನ್ನ ಮಗನೇ? ಯಾಕೆ?”
ಪ್ರತಾಪನಿಗೆ, ಸಣ್ಣ ಪಶ್ಚಾತ್ತಾಪದ ನೋವುಂಟಾಯಿತು, ಆದರೆ ಅವನು ಉತ್ಸುಕನೂ ಆದನು. ಅವನ ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. ತಾನು ಬಯಸಿದ ಜೀವನವನ್ನು ನಡೆಸಲು ಅವನು ತಂದೆಯ ಹಣದಲ್ಲಿ ತನ್ನ ಪಾಲನ್ನು ಪಡೆಯಲಿದ್ದನು.
ಸ್ವೇಚ್ಛಾಚಾರಿಯಾಗಿ ಜೀವಿಸುವುದು
ಪ್ರತಾಪನು ದೊಡ್ಡ ನಗರಕ್ಕೆ ತೆರಳಿದನು. ಅವನು ದುಬಾರಿಯಾದ ಮೇಲ್ಮಹಡಿಯ ಒಂದು ಅಪರ್ಟ್ಮೆಮೆಂಟ್ ಅನ್ನು ಬಾಡಿಗೆಗೆ ಪಡೆದನುಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಪ್ರಾರಂಭಿಸಿದನು. ಶೀಘ್ರದಲ್ಲೇ ಅವನು ಔತಣಗಳನ್ನು ಏರ್ಪಡಿಸಿದನು ಶ್ರೀಮಂತರು ಮತ್ತು ನಗರದ ಹೆಸರುವಾಸಿಯಾದವರು ಆಕರ್ಷಿಸಲ್ಪಟ್ಟರು. ಅವನು ಕಾರುಗಳನ್ನು ಖರೀದಿಸಿದನು, ಸುಂದರ ಮಹಿಳೆಯರೊಂದಿಗೆ ಮಲಗಿದನು ಮತ್ತು ದುಬಾರಿರೆಸ್ಟೋರೆಂಟ್ ಗಳಲ್ಲಿ ಊಟಮಾಡುತ್ತಿದ್ದನು. ಅವನು ಬಯಸಿದ್ದೆಲ್ಲವೂ ಅವನ ಬಳಿಯಲ್ಲಿತ್ತು.
ಆದರೆ ಒಂದು ದಿನ, ಪ್ರತಾಪನ ದುಡ್ಡು ಖಾಲಿಯಾಯಿತು. ಮುಜುಗರಕ್ಕೊಳಗಾದ ಅವನು ತನ್ನ ಕೆಲವು ಹೊಸ ಸ್ನೇಹಿತರ ಹತ್ತಿರ ಸ್ವಲ್ಪ ಹಣವನ್ನು ಸಾಲವಾಗಿ ನೀಡುವಂತೆ ಕೇಳಿದನು, ಆದರೆ ಅವರು ಇದ್ದಕ್ಕಿದ್ದಂತೆ ಆತನ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದರು. ಅವನಿಗೆ ತನ್ನ ಖರ್ಚುಗಳನ್ನು ಸರಿತೂಗಿಸಿಕೊಂಡು ಹೋಗುವದು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಮನೆಯ ಮಾಲೀಕ ಅವನನ್ನು ಮನೆಯಿಂದ ಹೊರದಬ್ಬಿದನು. ಹಣವೂ ಇಲ್ಲ ಮತ್ತುಸ್ನೇಹಿತರೂ ಇಲ್ಲ, ಅವನು ಎಲ್ಲಿಗೆ ಹೋಗಲು ಸಾಧ್ಯ?
ಪ್ರತಾಪನು ಗೊಂದಲ ಮತ್ತು ಆತಂಕದಿಂದ ನಗರದಾದ್ಯಂತ ಅಲೆದಾಡಿದನು. ಸೂರ್ಯ ಮುಳುಗಲು ಪ್ರಾರಂಭಿಸಿದಾಗ, ಅವನಿಗೆ ಭಯವಾಯಿತು. ಅವನು ಎಲ್ಲಿ ಮಲಗಬಹುದು? ಅವನು ಏನನ್ನು ತಿನ್ನಬಹುದು? ತನ್ನ ಜೀವನದಲ್ಲಿ ಮೊದಲ ಬಾರಿಗೆ, ಪ್ರತಾಪ್ ಬೀದಿಯಲ್ಲಿ ಮಲಗಿದನು, ಹಸಿವಿನಿಂದ ಅವನ ಹೊಟ್ಟೆ ಗುರು ಗುಟ್ಟುತ್ತಿತ್ತು.
ಪಶ್ಚಾತ್ತಾಪಕ್ಕೆ ಬರುವುದು
ಮುಂದಿನ ಕೆಲವು ದಿನಗಳ ಕಾಲ, ಪ್ರತಾಪನು ನಗರದಲ್ಲಿ ಕೆಲಸವನ್ನು ಪಡೆಯಲು ಪ್ರಯತ್ನಿಸಿದನು. ಅವನು ಬೀದಿಯಲ್ಲಿ ಮಲಗುವುದರಿಂದ ಚಿಂದಿ ಬಟ್ಟೆಯನ್ನು ಧರಿಸಿದಂತೆ ಕಾಣುತ್ತಿದ್ದನು, ಆದ್ದರಿಂದ ಹೋಟೆಲಿನ ಮ್ಯಾನೇಜರ್ ಹೊರತುಪಡಿಸಿ ಬೇರೆ ಯಾರೂ ಅವನಿಗೆ ಕೆಲಸವನ್ನು ಕೊಡಲಿಲ್ಲ. ಪ್ರತಾಪನು ಗಂಟೆಗಟ್ಟಲೆ, ಊಟ ಮಾಡುವವರಿಗೆ ಆಹಾರವನ್ನು ಒಯ್ಯುತ್ತ, ಮೇಜುಗಳನ್ನು ಒರೆಸುತ್ತಿದ್ದನು. ಅವನಿಗೆ ತುಂಬಾ ಹಸಿವಾಗುತಿತ್ತು ಮತ್ತು ದಣಿವಾಗುತಿತ್ತು. ಇದು ಹೇಗೆ ಸಾಧ್ಯ ಇವನು, ಒಬ್ಬ ಶ್ರೀಮಂತನ ಮಗನು, ಆಹಾರವನ್ನು ಬಡಿಸುತ್ತಿದ್ದೇನೆ! ಎಂದು ಅವನು ಆಶ್ಚರ್ಯಪಡುತ್ತಿದ್ದನು. ಕೊನೆಯ ಗಿರಾಕಿಯು ರೆಸ್ಟೋರೆಂಟ್ ನಿಂದ ಹೋದ ಮೇಲೆ ಅವನು ಅಡಿಗೆ ಮನೆಗೆ ಹೋಗಿ ಪಾತ್ರೆಗಳನ್ನು ತೊಳೆಯಲು ಸಹಾಯ ಮಾಡಬೇಕಿತ್ತು. ಅವನು ಕಸದ ಡಬ್ಬಿಯ ಬಳಿ ಇರುವ ತಟ್ಟೆಯಲ್ಲಿ ತಿಂದುಳಿದ ಅರ್ಧರೊಟ್ಟಿಯನ್ನು ಕಂಡನು. ಅವನಿಗೆ ತುಂಬಾ ಹಸಿವಾಗುತ್ತಿತ್ತು ಅದನ್ನು ಅವನು ತೆಗೆದುಕೊಳ್ಳಲು ಬಹುತೇಕ ತಲುಪಿದ್ದನು.
ನನಗೇನಾಗಿದೆ? ಎಂದು ಅವನು ತನ್ನನ್ನು ತಾನೇ ಖಂಡಿಸಿಕೊಂಡನು. ನನ್ನ ತಂದೆಯ ಮನೆಯಲ್ಲಿ ಸೇವಕರಿಗೂ ಕೂಡಾ ಹೊಟ್ಟೆ ತುಂಬಾ ತಿನ್ನುವಷ್ಟು ರೊಟ್ಟಿಗಳಿವೆ. ತಿಂದು ಸಾಕಷ್ಟು ಉಳಿಯುತ್ತದೆ. ಆದರೆ ನಾನು ಇಲ್ಲಿ, ಹೊಲಸಾದ ಎಂಜಲನ್ನು ತಿನ್ನುವ ಶೋಧನೆಗೆ ಒಳಗಾಗಿದ್ದೇನೆ!
ಅವನು ಭಕ್ಷ್ಯಗಳ ರಾಶಿಯನ್ನು ದಿಟ್ಟಿಸಿ ನೋಡಿದನು ಮತ್ತು ದೀರ್ಘಕಾಲದವರೆಗೆ ಚಿಂತನೆ ನಡೆಸಿದನು.
ನಾನು ಏನು ಮಾಡುತ್ತೇನೆ ಎಂಬುದು ನನಗೆ ತಿಳಿದಿದೆ, ಎಂದು ಅವನು ಆಲೋಚಿಸಿದನು. ನಾನು ನನ್ನ ತಂದೆಯ ಬಳಿಗೆ ಹಿಂದಿರುಗಿ ಹೋಗಿ ಅವನಿಗೆ ಹೀಗೆ ಹೇಳುವೆನು, “ತಂದೆಯೇ, ನಾನು ನಿನ್ನ ವಿರುದ್ಧವಾಗಿಯೂ ಮತ್ತು ದೇವರ ವಿರುದ್ಧವಾಗಿಯೂ ಪಾಪ ಮಾಡಿದ್ದೇನೆ. ನಾನು ಇನ್ನು ಮುಂದೆ ನಿಮ್ಮ ಮಗನಾಗಿರಲು ಯೋಗ್ಯನಲ್ಲ. ದಯವಿಟ್ಟು ನನ್ನನ್ನು ನಿಮ್ಮ ಆಳುಗಳಲ್ಲಿ ಒಬ್ಬನನ್ನಾಗಿ ಸೇರಿಸಿಕೋ.”
ಒಂದೇ ಒಂದು ಪಾತ್ರೆಯನ್ನೂ ತೊಳೆಯದೆ, ಪ್ರತಾಪ್, ಹೋಟೆಲಿನಿಂದ ಹೊರಬಂದು ಮನೆ ಕಡೆಗೆತನ್ನ ಪ್ರಯಾಣವನ್ನು ಪ್ರಾರಂಭಿಸಿದನು.
ಮನೆಗೆ ಹಿಂತಿರುಗಿ ಹೋಗುವುದು
ಮನೆಗೆ ಹೋಗುವಾಗ ಪ್ರತಾಪನಿಗೆ ಯೋಚಿಸಲು ಅನೇಕ ವಿಷಯಗಳಿದ್ದವು. ಅವನನ್ನು ನೋಡಿದಾಗ ಅವನ ತಂದೆ ಅವನೊಂದಿಗೆ ಹೇಗೆ ಪ್ರತಿಕ್ರಿಯಿಸುವನು? ಅವನು ಬಂದಾಗ ತಾನು ಏನು ಹೇಳಬೇಕೆಂಬುದನ್ನು ಪೂರ್ವಾಭ್ಯಾಸ ಮಾಡಿಕೊಂಡನು, ಆದರೆ ಇದು ಅವನಿಗೆ ಯಾವುದೇ ಉತ್ತಮ ಭಾವನೆಯನ್ನು ನೀಡಲಿಲ್ಲ. ಅಂತಿಮವಾಗಿ, ದೀರ್ಘ ಪ್ರಯಾಣದ ನಂತರ, ಅವನು ದೂರದಲ್ಲಿ ತನ್ನ ತಂದೆಯ ಮನೆಯನ್ನು ನೋಡಿದನು. ಅವನು ನಿಧಾನವಾಗಿ ರಸ್ತೆಯ ಮೇಲೆ ನಡೆಯುತ್ತಿದ್ದನು.
ಇದ್ದಕ್ಕಿದ್ದಂತೆ, ಅವನಿಗೆ ಒಂದು ಕೂಗು ಕೇಳಿಸಿತು. ಅವನ ತಂದೆ, ಸಾಮಾನ್ಯವಾಗಿ ತುಂಬಾ ಶಾಂತಸ್ವಭಾವದವರು ಮತ್ತು ಘನತೆಯುಳ್ಳವರು, ಅಂದು ಮನೆಯಿಂದ ಹೊರಗೆ ಓಡಿಬಂದಿದ್ದರು. ಅವನು ಪ್ರತಾಪನ ಬಳಿಗೆ ಬಂದು, ಅವನನ್ನು ಬಿಗಿಯಾಗಿ ಅಪ್ಪಿಕೊಂಡನು. ಪ್ರತಾಪನಿಗೆ ತನ್ನ ಹೃದಯವೇ ಒಡೆದುಹೋಗುತ್ತದೆಯೇನೋ ಎಂದು ಅನಿಸಿತ್ತು.
“ತಂದೆಯೇ,” ಅವನು ಉಸಿರುಗಟ್ಟಿದ ಧ್ವನಿಯಲ್ಲಿ, “ನಾನು ನಿಮ್ಮ ವಿರುದ್ಧವಾಗಿಯೂ ದೇವರ ವಿರುದ್ಧವಾಗಿಯೂ ಪಾಪ ಮಾಡಿದ್ದೇನೆ. ನಾನು ಇನ್ನು ಮುಂದೆ ನಿಮ್ಮ ಮಗನಾಗಿರಲು ಯೋಗ್ಯನಲ್ಲ...”
ಅಪ್ಪನು ಒಂದೇ ಒಂದು ಶಬ್ದವನ್ನೂ ಕೇಳಿಸಿಕೊಳ್ಳದವನಂತೆ ಕಾಣುತ್ತಿದ್ದನು. ತಂದೆಯ ಮುಖದ ಮೇಲೆ ಕಣ್ಣೀರು ಹರಿಯುತ್ತಿತ್ತು. ಮನೆಯ ಆಳುಗಳು ಅಳುವ ಗದ್ದಲವನ್ನು ಕೇಳಿ ಓಡೋಡಿ ಬಂದರು.
“ಬೇಗ!” ತಂದೆ ಅವರಿಗೆ ಆಜ್ಞಾಪಿಸಿದನು. “ಅವನ ಕೋಣೆಯನ್ನು ಸಿದ್ಧಗೊಳಿಸಿರಿ! ಅವನಿಗೆ ಹೊಸ ಬಟ್ಟೆಗಳನ್ನು ಸಿದ್ಧಗೊಳಿಸಿರಿ! ಔತಣವನ್ನು ಸಿದ್ಧಪಡಿಸಿರಿ, ನಾವು ಹಬ್ಬವನ್ನು ಆಚರಿಸೋಣ! ಇವನು ನನ್ನ ಮಗನುಇವನು ಸತ್ತಿದ್ದನು ಮತ್ತು ಜೀವಂತವಾಗಿದ್ದಾನೆ; ಇವನು ಕಳೆದುಹೋಗಿದ್ದನು ಮತ್ತು ಈಗ ಮತ್ತೆ ಸಿಕ್ಕಿದ್ದಾನೆ!”
ಕ್ಷಮೆಯನ್ನು ಕಂಡುಕೊಳ್ಳುವುದು
ಈ ಕಥೆಯು ಸೃಷ್ಟಿಕರ್ತನಾದ ದೇವರಿಂದ, ನಾವು ಹೇಗೆ ಕ್ಷಮೆಯನ್ನು ಪಡೆಯಲು ಸಾಧ್ಯವಿದೆ ಎಂಬುದನ್ನು ವಿವರಿಸಲು, ಕರ್ತನಾದ ಯೇಸು ಕ್ರಿಸ್ತನು ಹೇಳಿದ ಒಂದು ಸಾಮ್ಯವನ್ನು ಆಧರಿಸಿದೆ. ನಾವು ಜೀವನದಲ್ಲಿ ಪಾಪಗಳನ್ನು ಮಾಡಿದಾಗ, ಅಂದರೆ ಬಹಳ ದೊಡ್ಡ ಪಾಪಗಳನ್ನು ಮಾಡಿದಾಗ, ಪ್ರತಾಪನು ತನ್ನ ತಂದೆಯ ಬಳಿಗೆ ಹಿಂದಿರುಗಿದ ರೀತಿಯಲ್ಲಿಯೇ ನಾವು ದೇವರ ಬಳಿಗೆ ಹಿಂದಿರುಗಬಹುದು. ಪಾಪ ಕ್ಷಮೆಗಾಗಿ ನಾವು ಯಾವುದೇ ಸಂಕೀರ್ಣವಾದ ಆಚರಣೆಗಳು ಮತ್ತು ತ್ಯಾಗಗಳನ್ನು ಮಾಡಬೇಕಾಗಿಲ್ಲ. ದೇವರು ನಮಗಾಗಿ ತೆರೆದ ತೋಳುಗಳಿಂದ ಕಾಯುತ್ತಿದ್ದಾನೆ. ಹೃದಯದಲ್ಲಿ ಆಗುವ ಬದಲಾವಣೆಯನ್ನು ಆತನು ಹೆಚ್ಚು ಗೌರವಿಸುತ್ತಾನೆ. ನಾವು, ನಮ್ಮ ಪಾಪಗಳನ್ನು ವಿನಮ್ರತೆಯಿಂದ ಒಪ್ಪಿಕೊಳ್ಳಬೇಕು; ನಿಜವಾಗಿಯೂ ಪಶ್ಚಾತ್ತಾಪ ಪಡಬೇಕು ಮತ್ತು ಕ್ಷಮೆಯನ್ನು ಕೇಳಬೇಕು. ದೇವರ ಕ್ಷಮೆಯ ದೈವಿಕ ಅದ್ಭುತವನ್ನು ನೀವು ಅನುಭವಿಸಲು ಬಯಸುವಿರಾ? ನೀವು ಮಾಡಿದ ಪ್ರತಿಯೊಂದು ಪಾಪದಿಂದ, ನಿಮ್ಮನ್ನು ಇಂದು, ಈಗಲೇ, ಶುದ್ಧಗೊಳಿಸಿಕೊಳ್ಳಬಹುದು. ನೀವು ಈ ರೀತಿಯಾಗಿ ಪ್ರಾರ್ಥಿಸಬಹುದು:
ಪ್ರಿಯ ದೇವರೇ, ನನ್ನ ಪಾಪಗಳಿಗಾಗಿ ನಾನು ಆಳವಾಗಿ ವಿಷಾದಿಸುತ್ತೇನೆ. ಕರ್ತನಾದ ಯೇಸುಕ್ರಿಸ್ತನ ಮಹಾತ್ಯಾಗದ ನಿಮಿತ್ತವಾಗಿ ನನ್ನನ್ನು ಕ್ಷಮಿಸಿರಿ ಮತ್ತು ಎಲ್ಲಾ ಕಲ್ಮಶಗಳಿಂದ ನನ್ನನ್ನು ಶುದ್ದೀಕರಿಸಿ. ನನ್ನನ್ನು ಆಂತರ್ಯದಲ್ಲಿ ಹೊಸ ವ್ಯಕ್ತಿಯನ್ನಾಗಿ ಸೃಷ್ಟಿಮಾಡಿ. ಆಮೆನ್.
ಕರ್ತನಾದ ಯೇಸು ಕ್ರಿಸ್ತನ ಬೋಧನೆಗಳ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವುದಾದರೆ, ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.
Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications