ಅದ್ಭುತಗಳ ದಿನ

ಅದ್ಭುತಗಳ ದಿನ

ಸಾರಾಂಶ

ವಿಮಲನ ಸ್ನೇಹಪರವಲ್ಲದ ಹೆಂಡತಿಯೊಂದಿಗಿನ ಸಂಬಂಧವು ಹದಗೆಡುತ್ತಿದೆ. ಆದರೆ ಒಂದು ದಿನ ಮಾನವನು ಸಬ್ಬತ್ ದಿನ ಕುರಿತು ಕಲಿತನು. ಸೃಷ್ಟಿಕರ್ತನಾದ ದೇವರನ್ನು ಗೌರವಿ ಸುವ ವಿಶೇಷ ಪರಿಶುದ್ಧ ದಿನವದು. ಅವನು ಕರ್ತನಾದ ಯೇಸುವಿನ ಪುಸ್ತಕವನ್ನು ಓದಲು ಆರಂಭಿಸಿದನು ಮತ್ತು ಪ್ರತಿವಾರ ಸಬ್ಬತ್ ದಿನವನ್ನು ಆಚರಿಸಲು ಪ್ರಾರಂಭಿಸಿದನು. ನಿಧಾನವಾಗಿ ವಿಮಲ್ ನ ಕೋಪ ಕರಗಿಹೋಯಿತು, ಮತ್ತು ಅವನ ದಾಂಪತ್ಯ ಜೀವನದಲ್ಲಿ ಏನೋ ವಿಶೇಷ ನಡೆಯಲು ಪ್ರಾರಂಭವಾಯಿತು.

ವಿಧ

ಕರಪತ್ರ

ಪ್ರಕಾಶಕ

Sharing Hope Publications

ಇಲ್ಲಿ ಲಭ್ಯವಿದೆ

8 ಭಾಷೆಗಳು

ಪುಟಗಳು

6

ಡೌನ್ ಲೋಡ್

ವಿಮಲ್ ತನ್ನ ಆಟೋ ರಿಕ್ಷಾವನ್ನು ರಸ್ತೆಯ ಬದಿಗೆ ಎಳೆದನು. ಅವನು ದಿನವಿಡಿ ಅನೇಕ ಗ್ರಾಹಕರನ್ನು ಪಡೆದಿದ್ದರೂ, ಅವನಿಗೆ ಏಕೋ ಸಂತೋಷವಾಗುತ್ತಿರಲಿಲ್ಲ. ಅವನು ತನ್ನಮದುವೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲೂ ಸಾಧ್ಯವಾಗಲಿಲ್ಲ. ಅದು ಮುರಿದು ಬೀಳುವುದರಲ್ಲಿತ್ತು!

ಅವನು ತನ್ನ ಹೆಂಡತಿ, ಸೀಮಾಳನ್ನು ಪ್ರೀತಿಸುತ್ತಿದ್ದನುಆದರೆ ಕೆಲವು ದಿನಗಳಿಗೊಮ್ಮೆ ಅವಳನ್ನು ಹೊಡೆಯುವುದನ್ನು ನಿಲ್ಲಿಸಲು ಅವನಿಗೆ ಸಾಧ್ಯವಾಗಲಿಲ್ಲ. ಅವಳು ಅವನಿಗೆ ತುಂಬಾ ಕೋಪ ಬರುವಂತೆ ಮಾಡುತ್ತಿದ್ದಳು. ಅವನು ಅದನ್ನು ಮಾಡಲು ಬಯಸದಿದ್ದರು, ಅದು ಹಾಗೇ ನಡೆದುಹೋಗುತ್ತಿತ್ತು. 

ಧಾರ್ಮಿಕ ಆಚರಣೆಗಳ ಸಮಯದಲ್ಲಿ, ಸೀಮಾಗೆ ದೆವ್ವ ಹಿಡಿಯುತ್ತಿತ್ತು. ಆಗ ಅವಳು ಹುಚ್ಚುಚ್ಚಾಗಿ ಕುಣಿಯುತ್ತಿದ್ದಳು. ತನ್ನ ದೇಹದ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದಳು, ಮತ್ತು ತನ್ನಬಟ್ಟೆಗಳನ್ನು ಹರಿದುಕೊಳ್ಳುತ್ತಿದ್ದಳು. ಅವಳು ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವ ರೀತಿಯನ್ನು ವಿಮಲ್ ಇಷ್ಟಪಡಲಿಲ್ಲ. ಶಾಸ್ತ್ರೋಕ್ತ ಪದ್ಧತಿಗೆ ಹೋಗುವುದನ್ನು ನಿಲ್ಲಿಸುವಂತೆ ಅವನು ಅವಳಿಗೆ ಹೇಳಿದನು, ಆದರೆ ಅವಳು ಕೇಳುತ್ತಿರಲಿಲ್ಲ. ಅವಳು ಹರಿದ ಬಟ್ಟೆಯೊಂದಿಗೆ ಮತ್ತು ಪ್ರಾಣಿಬಲಿಗಳಿಂದ ಅವಳ ಮುಖದ ಮೇಲೆ ಹಾರಿದ ರಕ್ತದೊಂದಿಗೆ ಮನೆಗೆ ಬರುತ್ತಿದ್ದಳು, ಆಗ ವಿಮಲ್ ಕೋಪಮಾಡಿಕೊಂಡು ಅವಳನ್ನು ಹೊಡೆಯುತ್ತಿದ್ದನು. 

ಸೀಮಾ ಎರಡು ಬಾರಿ ಗರ್ಭಿಣಿಯಾದಳು, ಆದರೆ ಅವಳ ಹುಚ್ಚು ಶಾಸ್ತ್ರೋಕ್ತ ಪದ್ಧತಿಗಳಿಂದಾಗಿ ಗರ್ಭಪಾತವಾಯಿತು. ಅವಳು ಹೆಚ್ಚು ಹಠಮಾರಿಯಾದಳು, ಆಗ ವಿಮಲ್ ಕೋಪಗೊಳ್ಳುತ್ತಿದ್ದನು, ಖಿನ್ನತೆಗೆ ಒಳಗಾಗುತ್ತಿದ್ದನು, ತಪ್ಪಿತಸ್ಥನಾಗುತ್ತಿದ್ದನು.

ಉತ್ತಮ ದಾರಿ

ವಿಮಲ್ ತನ್ನ ಆಟೋ ರಿಕ್ಷಾದಲ್ಲಿ ಕುಳಿತಾಗ, ಅವನು ಉತ್ತಮ ದಾರಿಗಾಗಿ ಹತಾಶನಾಗಿ ಹಾರೈಸಿದನು. ಇದ್ದಕ್ಕಿದ್ದಂತೆ, ರಸ್ತೆಯ ಹತ್ತಿರದ ಕಟ್ಟಡದೊಳಗಿಂದ ಮಾತನಾಡುವ ಧ್ವನಿಗಳು ಅವನಿಗೆ ಕೇಳಿಸಿತು. ಒಳಗಡೆ ಮಕ್ಕಳು ಮತ್ತು ವಯಸ್ಕರು ಇದ್ದರು, ಮತ್ತು ಯಾರೋ ಒಬ್ಬರು ಕಥೆ ಹೇಳುತ್ತಿದ್ದ ಸಮಯದಲ್ಲಿ ಅವರು ಕೇಳಿಸಿಕೊಳ್ಳುತ್ತಿದ್ದರು. 

ಕಥೆಗಾರನು, ತನ್ನ ತೊಂದರೆಗಳಿಂದ ದೂರ ಓಡಿಹೋಗುತ್ತಿದ್ದ ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದನು. ಅವನು ತನ್ನ ಅವಳಿ ಸಹೋದರನಿಗೆ ದ್ರೋಹ ಬಗೆದಿದ್ದನ್ನು ಮತ್ತು ತನ್ನ ಸ್ವಂತ ಜೀವಕ್ಕಾಗಿಯೇ ಭಯ ಪಡುವಷ್ಟು ಅವನನ್ನು ಘಾಸಿಗೊಳಿಸಿದ್ದನು. ಅವನು ಓಡಿಹೋಗುತ್ತಿದ್ದಾಗ, ಅರಣ್ಯದಲ್ಲಿ ಮಲಗಲು ನಿಂತನು. ಆರಾಮವಾಗಿ ಮಲಗಲು ದಿಂಬಿನಂಥಹ ಒಂದು ಕಲ್ಲನ್ನು ಬಿಟ್ಟು ಅವನ ಬಳಿ ಏನೂ ಇರಲಿಲ್ಲ. ಅವನಿಗೆ ಏಕಾಂಗಿತನ ಕಾಡಿತು. ತನ್ನ ಕುಟುಂಬವನ್ನು ಒಡೆದಿದ್ದಕ್ಕೆ ವಿಷಾದ ಪಡುತ್ತಿದ್ದನು.

ವಿಮಲ್ ನು ಸೂಕ್ಷ್ಮವಾಗಿ ಆಲಿಸತೊಡಗಿದನು. ಈ ವ್ಯಕ್ತಿ ಹೇಗೆ ಭಾವಿಸಿರಬೇಕು ಎಂಬುದು ಅವನಿಗೆ ತಿಳಿದಿತ್ತು.

ಕಥೆಗಾರನು ತನ್ನ ಕಥೆ ಮುಂದುವರಿಸಿದನು. ಆ ಮನುಷ್ಯ ನಿದ್ರಿಸುತ್ತಿದ್ದಂತೆ, ಅವನಿಗೆ ಒಂದು ಕನಸು ಬಿದ್ದಿತು. ಆ ಕನಸಿನಲ್ಲಿ ಒಂದು ನಿಚ್ಚಣಿ ಭೂಲೋಕದಿಂದ ಪರಲೋಕದವರೆಗೂ ಮುಟ್ಟುತ್ತಿರುವದನ್ನು ಅವನು ಕಂಡನು. ಈ ಮನಮುರಿದ ವ್ಯಕ್ತಿಗೆ ಆಶೀರ್ವಾದಗಳನ್ನು ತರುತ್ತಿದ್ದವರಂತೆ ದೇವದೂತರು ನಿಚ್ಚಣಿಯ ಮೇಲೆ ಹತ್ತುತ್ತಾ ಇಳಿಯುತ್ತಾ ಇದ್ದರು. ಅವನಿಗೆ ಎಚ್ಚರವಾದಾಗ, ಅವನು ಸಂತೋಷಪಟ್ಟನು. ಅವನು ದಿಂಬಾಗಿ ಬಳಸಿಕೊಂಡಿದ್ದ ಕಲ್ಲಿನಿಂದ ಅವನು ತನ್ನ ದೇವರಿಗೆ ಸ್ಮಾರಕವನ್ನು ನಿರ್ಮಿಸಿದನು. ಏಣಿಯ ದರ್ಶನವು ಮತ್ತೊಮ್ಮೆ ತನ್ನನ್ನು ದೇವರೊಂದಿಗೆ ಕೂಡಿಸಿತು ಎಂಬ ಭಾವನೆಯನ್ನು ಅವನಿಗೆ ಮೂಡಿಸಿತು, ಮತ್ತು ಮುಂದೆ ಎಲ್ಲವೂ ಸರಿಹೋಗುತ್ತದೆ ಎಂಬುದು ಅವನಿಗೆ ತಿಳಿದಿತ್ತು.

ಒಂದು ಹೊಸ ಪುಸ್ತಕ 

ಜನರು ಹೊರಟುಹೋದ ಮೇಲೆ ವಿಮಲ್ ನಾಚಿಕೆಯಿಂದ ಕಟ್ಟಡವನ್ನು ಪ್ರವೇಶಿಸಿದನು.

ಕಥೆಗಾರನು “ಶುಭ ಸಬ್ಬತ್ತು” ಎಂದು ಅವನನ್ನು ಸ್ವಾಗತಿಸಿದನು. 

“ಸಬ್ಬತ್ ಎಂದರೇನು?” ವಿಮಲ್ ಕುತೂಹಲದಿಂದ ಕೇಳಿದ.

“ನಾವು ಸೃಷ್ಟಿಕರ್ತನಾದ ದೇವರನ್ನು ಆರಾಧಿಸುವ ದಿನ” ಎಂದು ಕಥೆಗಾರನು ಉತ್ತರಿಸಿದನು. “ವಾರದ ಏಳನೆಯ ದಿನವಾದ ಸಬ್ಬತ್ ದಿನದಂದು ತನ್ನನ್ನು ಆರಾಧಿಸುವಂತೆ ದೇವರು ನಮಗೆ ಆಜ್ಞೆ ಮಾಡಿದ್ದಾನೆ, ಏಕೆಂದರೆ ಆತನು ಆರು ದಿನಗಳಲ್ಲಿ ಲೋಕವನ್ನು ಸೃಷ್ಟಿಸಿದನು, ಏಳನೇ ದಿನ ವಿಶ್ರಮಿಸಿದನು. ಮನುಷ್ಯನ ಕನಸಿನಲ್ಲಿರುವ ಏಣಿಯು ಪರಲೋಕ ಮತ್ತು ಭೂಲೋಕ ಗಳನ್ನು ಸಂಪರ್ಕಿಸುವಂತೆಯೇ ಸಬ್ಬತ್ ನಮ್ಮನ್ನು ದೇವರೊಂದಿಗೆ ಸಂಪರ್ಕಿಸುವ ಸಾಪ್ತಾಹಿಕ ಪವಿತ್ರ ದಿನವಾಗಿದೆ. ಈ ದಿನದಂದು ನಾವು ದೇವರನ್ನು ಆರಾಧಿಸುವಾಗ, ಸೃಷ್ಟಿಕರ್ತ ದೇವರಿಗೆ ನಮ್ಮ ಭಕ್ತಿಯನ್ನು ತೋರಿಸುತ್ತೇವೆ ಮತ್ತು ಆತನ ಆಶೀರ್ವಾದಗಳನ್ನು ಪಡೆಯುತ್ತೇವೆ.” ಎಂದು ಹೇಳಿದನು.

ಅವಳಿ ಸಹೋದರರ ಕಥೆಯು ವಿಮಲ್ ನ ಮನಸ್ಸನ್ನು ಸ್ಪರ್ಶಿಸಿತು. “ಆ ಕಥೆ ನಿನಗೆ ಎಲ್ಲಿ ಸಿಕ್ಕಿತು?” 

“ಈ ಕಥೆಯು ಯೇಸುಕ್ರಿಸ್ತನ ಪುಸ್ತಕವಾದ ಸತ್ಯವೇದದಲ್ಲಿದೆ” ಎಂದು ಹೇಳಿದ ಕಥೆಗಾರನು, ಸತ್ಯವೇದದ ಒಂದು ಪ್ರತಿಯನ್ನು ಕಪಾಟಿನಿಂದ ತೆಗೆದು ವಿಮಲ್ ಕೈಗೆ ಕೊಟ್ಟನು. “ನೀನು ಈ ಕಥೆಯನ್ನು ಇಲ್ಲಿ ಓದಬಹುದು.” 

ವಿಮಲ್ ಆ ವ್ಯಕ್ತಿಗೆ ಧನ್ಯವಾದ ಅರ್ಪಿಸಿ ತನ್ನ ಹೊಸ ಪುಸ್ತಕದೊಂದಿಗೆ ಮನೆಗೆ ಹೋದನು. ಅವನು ಸತ್ಯವೇದವನ್ನು ಓದುತ್ತಿದ್ದಂತೆ ಅವನಿಗೆ ಸಮಾಧಾನವಾಯಿತು. ಮತ್ತು ಅವನು ಮುಂದಿನ ಶನಿವಾರವೂ ಮತ್ತೆ ಭೇಟಿ ನೀಡಿದನು. ಸೃಷ್ಟಿಕರ್ತನಾದ ದೇವರ ಪವಿತ್ರ ದಿನದಂದು, ಅವನು ಶಾಂತವಾಗಿ ಕುಳಿತು ಪ್ರಾರ್ಥಿಸುತ್ತಿದ್ದಾಗ, ಅವನ ಹೃದಯದಲ್ಲಿ ಒಂದು ಆಶ್ಚರ್ಯಕರವಾದ ಸಂಗತಿಯು ಸಂಭವಿಸಲು ಆರಂಭಿಸಿತು. 

ಬದಲಾದ ಮನುಷ್ಯ

ಒಂದು ದಿನ, ವಿಮಲ್ ತನ್ನ ಹೊಸ ಪುಸ್ತಕವನ್ನು ಓದುತ್ತಿರುವಾಗ, “ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ?” (ಸತ್ಯವೇದ, 1 ಕೊರಿಂಥ 3:16). ಎಂಬ ವಾಕ್ಯವನ್ನು ಅವನು ಕಂಡುಕೊಂಡನು. ಈ ವಾಕ್ಯ ಅವನ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಳಕು ಮೂಡಿಸಿತು. ದೇಹವು ದೇವರ ಆಲಯವಾಗಿರುವುದರಿಂದ, ಆ ದೇಹಕ್ಕೆ, ಕೇಡುಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಅವನು ಆಲೋಚಿಸಿದನು. ನಾನು ಇನ್ನು ಮುಂದೆ ನನ್ನ ಹೆಂಡತಿಯನ್ನು ಹೊಡೆಯಬಾರದು.

ಅವನು ಈ ಹಿಂದೆ ಅನೇಕ ಬಾರಿ ನಿಲ್ಲಿಸಲು ಪ್ರಯತ್ನಿಸಿದ್ದನು, ಆದರೆ ಈ ಸಲ ನಿಜವಾಗಿಯೂ ಕಾರ್ಯರೂಪಕ್ಕೆ ಬಂದಿತ್ತು. ಸತ್ಯವೇದವನ್ನು ಓದುವುದು ಮತ್ತು ಸಬ್ಬತ್ ದಿನದಂದು ದೇವರನ್ನು ಆರಾಧಿಸುವುದು ಅವನನ್ನು ಸೃಷ್ಟಿಕರ್ತನಾದ ದೇವರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡಿತ್ತು. ದೇವರು ಅವನ ಹೃದಯದಲ್ಲಿ ಬದಲಾವಣೆ ತಂದಿದ್ದನು. ದೈವಿಕ ಹಸ್ತವು ಕಲ್ಲಿನಂಥಹ ಹೃದಯವನ್ನು ಅವನ ಎದೆಯಿಂದ ಹೊರತೆಗೆದು ಅದರ ಸ್ಥಳದಲ್ಲಿ ದಯೆತುಂಬಿದ ಹೃದಯವನ್ನಿಟ್ಟ ಭಾವನೆ ಮೂಡಿತು. 

ಮತ್ತೆ ಒಂದಾದರು!

ಹಲವು ವರ್ಷಗಳವರೆಗೆ, ವಿಮಲ್, ಪವಿತ್ರ ಸಬ್ಬತ್ ದಿನದಂದು ಸೃಷ್ಟಿಕರ್ತ ದೇವರ ಆರಾಧನೆಯನ್ನು ಮುಂದುವರಿಸಿದನು. ನಿಧಾನವಾಗಿ, ಸೀಮಾ, ತನ್ನ ಗಂಡನ ನಡತೆಯಲ್ಲಿ ಬದಲಾವಣೆಗಳನ್ನು ಗಮನಿಸಿದಳು. ಅವನು ಇನ್ನು ಮುಂದೆ ಅವಳನ್ನು ಹೊಡೆಯಲಿಲ್ಲ. ಅದಕ್ಕೆ ಬದಲಾಗಿ, ಅವನು ಸೌಮ್ಯದಿಂದಲೂ ಮತ್ತು ದಯೆಯಿಂದಲೂ ನಡೆದುಕೊಂಡನು.

ಇಷ್ಟೊತ್ತಿಗಾಗಲೇ, ಸೀಮಾ, ತುಂಬಾ ದಣಿದಿದ್ದಳು ಮತ್ತು ಖಿನ್ನತೆಗೆ ಒಳಗಾಗಿದ್ದಳು. ಕರ್ತನಾದ ಯೇಸು ಕ್ರಿಸ್ತನ ಪುಸ್ತಕವನ್ನು ಓದಲು ಆರಂಭಿಸಿದ ನಂತರ ಮತ್ತು ಶನಿವಾರದಂದು ಆರಾಧನೆ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವಿಮಲ್, ಯಾವಾಗಲೂ ಶಾಂತವಾಗಿ ಕಾಣುತ್ತಿದ್ದನು ಎಂಬುದನ್ನು ಆಕೆ ಗಮನಿಸಿದ್ದಳು. ಅಂತಿಮವಾಗಿ, ಅವಳು ಅವನೊಂದಿಗೆ ಹೋಗಲು ಬಯಸಿದರೆ ಎಂದು ಅವನು ಅವಳನ್ನು ಕೇಳಿದಾಗ, ಅವಳು ಒಪ್ಪಿಕೊಂಡಳು. 

“ಸಬ್ಬತ್ ನಮ್ಮ ಕುಟುಂಬಕ್ಕೆ ಒಂದು ವಿಶೇಷ ಪವಿತ್ರ ದಿನವಾಗಿದೆ” ಎಂದು ವಿಮಲ್ ಹೇಳುತ್ತಾನೆ. “ಇದು ದೇವರು ನಮ್ಮನ್ನು ತನ್ನೊಂದಿಗೆ ಸಂಪರ್ಕಿಸಲು ಆಹ್ವಾನಿಸುವ ದಿನ. ನಾವು ಈ ರೀತಿಯಾಗಿ ಆತನೊಂದಿಗೆ ಸಂಪರ್ಕಿಸಿದಾಗ, ಆತನು ಅದ್ಭುತಗಳನ್ನು ಮಾಡುತ್ತಾನೆ. ನನ್ನ ಹೆಂಡತಿ ಮತ್ತು ನಾನು ಇಂದು ಸಂತೋಷದ ದಾಂಪತ್ಯವನ್ನು ಹೊಂದಿದ್ದೇವೆ ಎಂಬುದು ನನಗೆ ತಿಳಿದಿದೆ ಏಕೆಂದರೆ ನಾನು ಪ್ರತಿದಿನ ಸೃಷ್ಟಿಕರ್ತ ದೇವರನ್ನು ಆರಾಧಿಸಲು ಕಲಿತೆ ಮತ್ತು ವಿಶೇಷವಾಗಿ ಸಬ್ಬತ್ ದಿನದಂದು. ಸಬ್ಬತ್ ದಿನದ ಆಶೀರ್ವಾದಗಳು, ನಮ್ಮನ್ನುದೇವರ ಹತ್ತಿರಕ್ಕೂ ಮತ್ತು ಒಬ್ಬರಿಗೊಬ್ಬರ ಹತ್ತಿರಕ್ಕೂ ಕರೆತರುತ್ತದೆ.”

ಇಂದು, ವಿಮಲ್ ಮತ್ತು ಸೀಮಾ, ಇಬ್ಬರು ಗಂಡು ಮಕ್ಕಳೊಂದಿಗೆ ಸಂತೋಷವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅವರು ಸಬ್ಬತ್ ದಿನದ ಆಶೀರ್ವಾದಗಳ ಬಗ್ಗೆ ತಮ್ಮ ಎಲ್ಲಾ ನೆರೆಹೊರೆಯವರಿಗೆ ಹೇಳುತ್ತಾರೆ.

ನೀವು ಸಬ್ಬತ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅಥವಾ ಒಂದು ಸತ್ಯವೇದವನ್ನು ಪಡೆಯಲು ಬಯಸುವುದಾದರೆ, ದಯವಿಟ್ಟು ಈ ಲೇಖನದ ಹಿಂಭಾಗದಲ್ಲಿರುವ ಮಾಹಿತಿಯಲ್ಲಿ ನಮ್ಮನ್ನು ಸಂಪರ್ಕಿಸಿ.

Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.
ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, 2016. ಅನುಮತಿಯಿಂದ ಬಳಸಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ

ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

newsletter-cover