
ದೇವರ ವಿಶೇಷ ಜನರು
ಸಾರಾಂಶ
ಕರ್ತನಾದ ಯೇಸು ಕ್ರಿಸ್ತನು ಮುಂಬರುವ ಯುಗದಲ್ಲಿ ಪರಿಪೂರ್ಣ ಜಗತ್ತನ್ನು ತಾನು ಹೇಗೆ ಮರು ಸೃಷ್ಟಿಸುತ್ತಾನೆ ಎಂಬುದನ್ನು ಕುರಿತು ಹೇಳಿದ್ದಾನೆ. ಆತನ ವಿಶೇಷ ಜನರು ಅಲ್ಲಿ ಶಾಶ್ವತವಾಗಿ ವಾಸಿಸುವರು. ಈ ವಿಶೇಷ ಜನರು ಯಾರು? ಸತ್ಯವೇದ ಅವರನ್ನು "ಶೇಷ ಜನರು" (ಉಳಿದ ಜನರು) ಎಂದು ಕರೆಯುತ್ತದೆ. ಈ ಕರಪತ್ರವು ಶೇಷ ಜನರ ಸಂಕ್ಷಿಪ್ತ ವಿವರಣೆಯನ್ನು ಮತ್ತು ಯಾವ ಘಟನೆಯನ್ನು ನೋಡಲು ಅವರು ಕಾತುರದಿಂದ ಕಾಯುತ್ತಿದ್ದಾರೆ ಎಂಬುದನ್ನು ಕುರಿತು ನಮಗೆ ಹೇಳುತ್ತದೆ.
ವಿಧ
ಕರಪತ್ರ
ಪ್ರಕಾಶಕ
Sharing Hope Publications
ಇಲ್ಲಿ ಲಭ್ಯವಿದೆ
8 ಭಾಷೆಗಳು
ಪುಟಗಳು
6
ದೀರ್ಘ ಪ್ರಯಾಣಕ್ಕೆ ಹೋಗುವ ಮೊದಲು ತನ್ನ ಸೇವಕರನ್ನು ಒಟ್ಟುಗೂಡಿಸಿ ಮಾತನಾಡಿದ ಒಬ್ಬ ವ್ಯಕ್ತಿಯ ಕಥೆಯಿದು. ಒಬ್ಬ ಸೇವಕನಿಗೆ, ಅವನು ದೊಡ್ಡ ಹಣದ ಚೀಲವನ್ನು; ಎರಡನೇ ಸೇವಕನಿಗೆ, ಮಧ್ಯಮ ಗಾತ್ರದ ಹಣದ ಚೀಲವನ್ನು; ಮತ್ತು ಮೂರನೆಯ ಸೇವಕನಿಗೆ, ತುಂಬಾ ಚಿಕ್ಕ ಹಣದ ಚೀಲವನ್ನು ನೀಡಿಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೊಟ್ಟನು. ಅವನು ಹೋದ ಮೇಲೆ ಅವರು ತನ್ನ ಆಸ್ತಿಯನ್ನು ಕಾಳಜಿ ಮಾಡಬೇಕೆಂದು ಅವನು ಅವರಿಗೆ ಹೇಳಿದನು. ನಂತರ ಅವನು ಹೊರಟುಹೋದನು.
ಮೊದಲ ಸೇವಕನು ತನ್ನ ಹಣವನ್ನು ತೆಗೆದುಕೊಂಡು ಅದನ್ನು ವ್ಯಾಪಾರದಲ್ಲಿ ತೊಡಗಿಸಿದನು. ಅವನಂತೆಯೇ ಎರಡನೆಯ ಸೇವಕನು ಸಹ ತನ್ನ ಹಣವನ್ನು ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಉಪಯೋಗಿಸಿದನು. ಅವರು ಕಷ್ಟಪಟ್ಟು ಕೆಲಸ ಮಾಡಿದರು, ಮತ್ತು ಶೀಘ್ರದಲ್ಲೇ ಇಬ್ಬರೂ ಅವರಿಗೆ ವಹಿಸಿಕೊಟ್ಟ ಹಣದ ಮೊತ್ತವನ್ನು ದುಪ್ಪಟ್ಟುಗೊಳಿಸಿದರು.
ಆದರೆ ಮೂರನೆಯ ಸೇವಕ, ಬಹಳ ಸಣ್ಣ ಹಣದ ಚೀಲವನ್ನು ಪಡೆದಿದ್ದವನು, ವಿಭಿನ್ನನಾಗಿದ್ದನು. ಅವನು ನೆಲದಲ್ಲಿ ಒಂದು ಗುಂಡಿಯನ್ನು ತೋಡಿದನು ಮತ್ತು ಆ ಹಣ ಸುರಕ್ಷಿತವಾಗಿರಿಸುವುದಕ್ಕಾಗಿ ಹೂಳಿಟ್ಟನು. ನಂತರ ಯಾಜಮಾನನು ತಡಮಾಡಿದ್ದರಿಂದ ಅವನು ಅನೇಕ ವರ್ಷಗಳ ಕಾಲ ಆರಾಮವಾಗಿ, ಸಂತೋಷವಾಗಿ ಸೋಮಾರಿತನದಲ್ಲಿ ಕಾಲ ಕಳೆದನು.
ಕೊನೆಗೂ ಒಂದು ದಿನ ಯಜಮಾನನ ಆಗಮನವಾಯಿತು. ಮೊದಲ ಇಬ್ಬರು ಸೇವಕರು, ತಾವು ಕಷ್ಟಪಟ್ಟು ದುಡಿದು, ಯಜಮಾನನ ಆಸ್ತಿಯನ್ನು ಹೇಗೆ ದುಪ್ಪಟ್ಟುಗೊಳಿಸಿದ್ದರು ಎಂಬುದನ್ನು ತೋರಿಸಿದರು. “ಭಲಾ ಆಳು!” ಎಂದು ಅವನು ಹೇಳಿದನು. “ನೀವು ಒಳ್ಳೆಯ ಮತ್ತು ನಂಬಿಗಸ್ತ ಆಳುಗಳು. ಸಣ್ಣ ಕೆಲಸಗಳಲ್ಲಿ ನಿಮ್ಮನ್ನು ನೀವು ಸಾಬೀತು ಪಡಿಸಿಕೊಂಡಿದ್ದೀರಾ ದೊಡ್ಡ ಕೆಲಸದಲ್ಲಿ ನಿಮ್ಮನ್ನು ಇಡುತ್ತೇನೆ.” ಎಂದು ಹೇಳಿ, ಯಜಮಾನನು ಅವರಿಗೆ ಬಹುಮಾನವನ್ನು ನೀಡಿದನು.
ಮೂರನೆಯ ಸೇವಕನು ಸಂಕೋಚದಿಂದ ಮತ್ತು ಮುಜುಗರದಿಂದ ಮುಂದೆ ಬಂದನು. “ಸ್ವಾಮೀ, ನೀನು ಕಠಿಣ ಮನುಷ್ಯನು, ನೀವುಬಿತ್ತದಿರುವಲ್ಲಿಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿ ಮಾಡಿಕೊಳ್ಳುವವನು ಎಂದು ನನಗೆ ತಿಳಿದಿದೆ. ನಾನು ಹೆದರಿಕೊಂಡು ಹೋಗಿ ನಿನ್ನ ಹಣವನ್ನು ಭೂಮಿಯಲ್ಲಿ ಬಚ್ಚಿಟ್ಟೆನು; ಇಗೋ ನಿನ್ನದು ನಿನಗೆ ಸಂದಿದೆ, ನಿನಗೆ ಸ್ವಲ್ಪವೂ ನಷ್ಟವಾಗಿಲ್ಲ,” ಎಂದು ಅವನು ಹೇಳಿದನು. ಆದರೆ ಈ ಮೈಗಳ್ಳ ಆಳು, ತಾನು ದೂರದೂರಿನಲ್ಲಿ ಪ್ರಯಾಣದಲ್ಲಿದ್ದಾಗ ಏನೂ ಕೆಲಸ ಮಾಡಲಿಲ್ಲವೆಂದು ತಿಳಿದಾಗ ಯಜಮಾನನಿಗೆ ಕೋಪ ಬಂತು. ಅವನು ತನ್ನ ಹಣವನ್ನು ಹಿಂದಕ್ಕೆ ತೆಗೆದುಕೊಂಡು, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಆಳುಗಳಿಗೆ ಕೊಟ್ಟನು, ಮತ್ತು ಅಪ್ರಾಮಾಣಿಕ ಸೇವಕನನ್ನು ಶಿಕ್ಷೆಯ ಸ್ಥಳಕ್ಕೆ ಕಳುಹಿಸಿದನು.
ಒಂದು ಪರಿಪೂರ್ಣ ರಾಜ್ಯ
ಈ ಕಥೆಯನ್ನು ಶ್ರೇಷ್ಠ ಬೋಧಕನೂ ಮತ್ತು ಕಥೆಗಾರನೂ ಆದ ಕರ್ತನಾದ ಯೇಸು ಕ್ರಿಸ್ತನು ಹೇಳಿದನು. ಒಂದು ದಿನ ಆತನು ಮೇಘಾರೂಢನಾಗಿ ಹಿಂದಿರುಗಿ ಬರುವನು ಮತ್ತು ತನಗೆ ನಂಬಿಗಸ್ತರಾಗುಳಿದ ತನ್ನ ವಿಶೇಷ ಜನರಿಗೆ, ದೊಡ್ಡ ಪ್ರತಿಫಲವನ್ನು ಕೊಡುವನು ಎಂದು ಆತನ ಪುಸ್ತಕವಾದ ಸತ್ಯವೇದ ನಮಗೆ ತಿಳಿಸುತ್ತದೆ. ಆದರೆ ಆತನ ಬರೋಣಕ್ಕೆ ಯಾರು ಸಿದ್ಧರಾಗಿಲ್ಲವೋ ಅವರು ತುಂಬಾ ನಿರಾಶೆಗೊಳ್ಳುವರು.
ದೇವರ ನಂಬಿಗಸ್ತ ಸೇವಕರಿಗೆ ಸಿಗುವ ಆ ಅದ್ಭುತವಾದ ಪ್ರತಿಫಲವೇನು? ಕರ್ತನಾದ ಯೇಸು ಕ್ರಿಸ್ತನು ನಮ್ಮನ್ನು “ದೇವರ ರಾಜ್ಯ” ಎಂದು ಕರೆಯಲ್ಪಡುವ ಒಂದು ಸ್ಥಳಕ್ಕೆ ಕರೆದೊಯ್ಯುವುದಾಗಿ ವಾಗ್ದಾನ ಮಾಡಿದ್ದಾನೆ. ಸೃಷ್ಟಿಕರ್ತನಾದ ದೇವರು ವಾಸಿಸುವ ಸ್ಥಳವೇ ಈ ರಾಜ್ಯವಾಗಿದೆ. ಇದು ಪ್ರತಿಯೊಬ್ಬರು ಸಂಪೂರ್ಣ ಸಂತೋಷವಾಗಿರುವ ಪರಿಪೂರ್ಣ ಸ್ಥಳವಾಗಿದೆ ಮತ್ತು ಇಲ್ಲಿ ದೇವರು ಮಾನವರೊಂದಿಗೆ ವಾಸಿಸುತ್ತಾನೆ. ಈ ರಾಜ್ಯದ ಜನರು ದೇವರ ಆಜ್ಞೆಗಳಿಗೂ ಮತ್ತು ಒಬ್ಬರಿಗೊಬ್ಬರಿಗೂ ಸಾಮರಸ್ಯದೊಂದಿಗೆ ಜೀವಿಸುತ್ತಾರೆ. ಇಲ್ಲಿ ದುಃಖ, ನೋವು ಅಥವಾ ಸಾವು ಯಾವುದೂ ಇರುವದಿಲ್ಲ. ಈಅಭೂತಪೂರ್ವ ಸಾಮ್ರಾಜ್ಯವು ಎಂದಿಗೂ ಕೊನೆಗೊಳ್ಳುವುದಿಲ್ಲ! ಆದರೆ ದೇವರಿಗೆನಂಬಿಗಸ್ತರೂ ಮತ್ತು ವಿಧೇಯರೂ ಆದವರು ಮಾತ್ರ ಈ ಸ್ಥಳಕ್ಕೆ ಹೋಗುವರು. ಯಾರು ದೇವರನ್ನು ತಿರಸ್ಕರಿಸುತ್ತಾರೋ ಅಥವ ಆತನ ಸೇವೆಮಾಡುವುದರಲ್ಲಿ ಸೋಮಾರಿಗಳೂ, ಅಲಕ್ಷ್ಯಗಾರರೂ ಆಗಿರುತ್ತಾರೋ ಅಂಥವರು ಆತನ ರಾಜ್ಯವನ್ನು ಪ್ರವೇಶಿಸಲಾರರು.
ದೇವರ ರಾಜ್ಯದೊಳಗೆ ಪ್ರವೇಶಿಸಲು ನಮ್ಮ ದಾರಿಯನ್ನು ನಾವೇ ಸಂಪಾದಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬೆಲೆ ಒಂದು ಜೀವಿತ ಕಾಲದಲ್ಲಿ ಮಾಡಿದ ಎಲ್ಲಾ ಸುಕೃತ್ಯಗಳಿಗಿಂತಲೂ ದುಭಾರಿ. ಆದರೆ, ಸೃಷ್ಟಿಕರ್ತನಾದ ದೇವರು ನಮಗೆ ಈ ಪ್ರವೇಶವನ್ನು ಉಚಿತ ಉಡುಗೊರೆಯಾಗಿ ಕೊಟ್ಟಿರುವನು. ದೇವರ ರಾಜ್ಯ ಪ್ರವೇಶಿಸಲುಜನಾಂಗ, ಸಾಮಾಜಿಕ ಸ್ಥಾನಮಾನ, ಅಥವಾ ಗತಕಾಲದ ಇತಿಹಾಸ ಗಣನೆಗೆ ಬರುವದಿಲ್ಲ.ದೇವರ ರಾಜ್ಯಕ್ಕೆ ಯಾರು ಬೇಕಾದರೂ ಹೋಗಬಹುದು. ನಮ್ಮ ಸತ್ಕಾರ್ಯಗಳ ಮೂಲಕ ನಾವು ದೇವರ ರಾಜ್ಯವನ್ನು ಸಂಪಾದಿಸಲು ಸಾಧ್ಯವಾಗದಿದ್ದರೂ, ನಮ್ಮ ಕಾರ್ಯಗಳು ಇನ್ನೂ ಮುಖ್ಯ ಎನಿಸಿವೆ. ಪರಿಪೂರ್ಣವಾದ, ಸಾಮರಸ್ಯದಿಂದ ಕೂಡಿದ ದೇವರ ರಾಜ್ಯದಲ್ಲಿ ಸಂತೋಷವಾಗಿರಬಲ್ಲ ಜನರೇ ನಾವು ಎಂದು ತಿಳಿದುಕೊಳ್ಳಲು, ದೇವರು, ನಮ್ಮ ಸುಕಾರ್ಯಗಳನ್ನು ನೋಡುತ್ತಾನೆ.
ತಾವು ಮಾಡುವ ಎಲ್ಲ ಕೆಲಸಗಳಲ್ಲಿ ನಂಬಿಗಸ್ತರಾಗಿದ್ದ ಮೊದಲ ಇಬ್ಬರು ಸೇವಕರಂತೆ ಒಂದು ವಿಶೇಷ ಗುಂಪಿನ ಜನರನ್ನುಕುರಿತು ಸತ್ಯವೇದ ವರ್ಣಿಸುತ್ತದೆ. ಈ ವಿಶೇಷ ಜನರನ್ನು “ಶೇಷ” (“ಉಳಿದ ಜನರು”) ಎಂದು ಕರೆಯಲಾಗಿದೆ. ಇಂಥಹ ಜನ ಲೋಕದ ಪ್ರತಿಯೊಂದು ದೇಶದಲ್ಲೂ ದೇವರಿಗೆ ವಿಧೇಯರಾಗಿ ನಡೆದುಕೊಳ್ಳುತ್ತಾರೆ ಮತ್ತು ಕರ್ತನಾದ ಯೇಸುವಿನ ಬರೋಣಕ್ಕೆ ಶ್ರದ್ಧಾಪೂರ್ವಕವಾಗಿ ಎದುರುನೋಡುತ್ತಿರುತ್ತಾರೆ.
ಶೇಷರನ್ನು ಸೇರಿಕೊಳ್ಳುವುದು
ಮುಂದೊಂದು ದಿನ ದೇವರ ರಾಜ್ಯವನ್ನು ಪ್ರವೇಶಿಸಲಿರುವ ಈ ನಂಬಿಗಸ್ತ ಸೇವಕರ ಗುಂಪಾದ, ದೇವರ ವಿಶೇಷ ಜನರೊಂದಿಗೆ ನಾವೂ ಭಾಗಿಗಳಾಗುವದು ಹೇಗೆ? ಕರ್ತನಾದ ಯೇಸು ದೇವರಿಗೆ ನಂಬಿಗಸ್ತರಾಗಿರಲು ನಮಗೆ ಕಲಿಸಿದನು, ಆದರೆ ಜಟಿಲವಾದ ನಿಯಮಗಳ ಒಂದು ದೊಡ್ಡ ಪಟ್ಟಿಯನ್ನೇನೂ ಆತನು ತಯಾರಿಸಿಲ್ಲ. ನಾವು ದೇವರನ್ನು ನಮ್ಮ ಪೂರ್ಣ ಹೃದಯದಿಂದಲೂ, ಪ್ರಾಣದಿಂದಲೂ ಮತ್ತು ಮನಸ್ಸಿನಿಂದಲೂ ಪ್ರೀತಿಸಬೇಕೆಂದು ಮತ್ತು ನಾವು ನಮ್ಮ ನೆರೆಹೊರೆಯವರನ್ನೂ ನಮ್ಮಂತೆಯೇ ಪ್ರೀತಿಸಬೇಕೆಂದು ಆತನು ಹೇಳಿದ್ದಾನೆ (ಸತ್ಯವೇದ, ಮತ್ತಾಯಈ ಆಜ್ಞೆಗಳು ಬಹಳ ಸರಳವಾಗಿರುವಂತೆ ತೋರಬಹುದು, ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ನಮಗೆ ಅಪ್ರಿಯರಾದ ಜನರನ್ನು ಪ್ರೀತಿಸುವದು ಅಷ್ಟು ಸುಲಭವಲ್ಲ. ಆದರೂ, ಕರ್ತನಾದ ಯೇಸು, ನಾವು ನಮ್ಮ ವೈರಿಗಳನ್ನೂ ಸಹ ಪ್ರೀತಿಸಬೇಕೆಂದು ಹೇಳಿದ್ದಾನೆ (ಮತ್ತಾಯ 5:44).ದೇವರು ನಿಗೂಢವಾಗಿ ನಮ್ಮ ಹೃದಯಗಳನ್ನು ಪರಿವರ್ತಿಸುವುದರಿಂದ ಮತ್ತು ನಮಗೆ ಅಲೌಕಿಕ ಪ್ರೀತಿ ಮತ್ತು ಒಳ್ಳೆಯತನವನ್ನು ನೀಡುವುದರಿಂದ ಮಾತ್ರ ಇದು ಸಾಧ್ಯವಾಯಿತು. ದೇವರನ್ನು ಪ್ರೀತಿಸುವ ಮತ್ತು ನೆರೆಹೊರೆಯವರನ್ನು ಪ್ರೀತಿಸುವ ನಮ್ಮ ಜೀವನವೇ ನಾವು ಕರ್ತನಾದ ಯೇಸುವಿನ ನಂಬಿಗಸ್ತ ಸೇವಕರಾಗಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ದೇವರ ರಾಜ್ಯದಲ್ಲಿ ನಿತ್ಯಜೀವ!
ಮೇಲಿನ ಕಥೆಯಲ್ಲಿ ನಾವು ಕಂಡ ಆ ಇಬ್ಬರು ಸೇವಕರಂತೆ, ದೇವರ ನಿಜವಾದ ಹಿಂಬಾಲಕರು ಸಹನೆಯುಳ್ಳವರೂ ಮತ್ತು ನಂಬಿಗಸ್ತರೂ ಆಗಿರಬೇಕು. ನಮ್ಮ ಯಜಮಾನನಾದ ಯೇಸು ಹಿಂತಿರುಗಿ ಬರುವಾಗ, ನಮ್ಮ ನಿಷ್ಠೆ ಮತ್ತು ನಂಬಿಗಸ್ತಿಕೆಗೆ ಆತನು ನೀಡುವ ಪ್ರತಿಫಲವೆಂದರೆ ಆತನು ಶಾಶ್ವತವಾಗಿ ದೇವರ ರಾಜ್ಯಕ್ಕೆ ನೀಡುವ ಪ್ರವೇಶವಾಗಿದೆ. ಆ ರಾಜ್ಯವು “ದೇವರ ಆಜ್ಞೆಗಳನ್ನು ಮತ್ತು ಯೇಸುವಿನ ಮೇಲಣ ನಂಬಿಕೆಯನ್ನು ಕೈಕೊಂಡು ನಡೆಯು” ವವರಿಗೆ ಸಿಗಲಿದೆ(ಸತ್ಯವೇದ, ಪ್ರಕಟಣೆ 14:12).
ದೇವರ ರಾಜ್ಯದಲ್ಲಿ ಶಾಶ್ವತವಾಗಿ ಜೀವಿಸುವವರೊಂದಿಗೆ ನೀವೂ ಜೀವಿಸಲು ಬಯಸುವುದಾದರೆ, ನೀವು ಈ ರೀತಿಯಾಗಿ ಪ್ರಾರ್ಥಿಸಿರಿ:
ಪ್ರೀತಿಸ್ವರೂಪನಾದ ದೇವರೇ, ನಾನು ನಿನ್ನ ರಾಜ್ಯದಲ್ಲಿ ನಿನ್ನೊಂದಿಗೆ ಇರಲು ಬಯಸುತ್ತೇನೆ. ನೀವು ಮತ್ತೆ ಹಿಂದಿರುಗುವವರೆಗೂ ನಂಬಿಗಸ್ತನಾಗಿರಲು ನನಗೆ ಬೋಧನೆ ಮಾಡಿರಿ ಮತ್ತು ಸಹಾಯ ಮಾಡಿರಿ. ನನ್ನನ್ನು ಅತ್ಯುತ್ತಮ ಸ್ಥಳಕ್ಕೆ ಕರೆದೊಯ್ಯುವ ನಿಮ್ಮ ವಾಗ್ದಾನಕ್ಕಾಗಿ ಧನ್ಯವಾದಗಳು! ಆಮೆನ್.
ನೀವು ದೇವರ ರಾಜ್ಯವನ್ನು ಕುರಿತು ಇನ್ನಷ್ಟು ಆಳವಾಗಿ ತಿಳಿದುಕೊಳ್ಳಲು ಬಯಸುವುದಾದರೆ, ದಯವಿಟ್ಟು ಈ ಕರಪತ್ರದ ಹಿಂಭಾಗದಲ್ಲಿರುವ ಮಾಹಿತಿಯ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಿ.
Copyright © 2023 by Sharing Hope Publications. ಅನುಮತಿ ಇಲ್ಲದೆ ವಾಣಿಜ್ಯೇತರ ಉದ್ದೇಶಗಳಿಗಾಗಿ ಈ ಸಂದೇಶಗಳನ್ನು ಮುದ್ರಿಸಬಹುದು ಮತ್ತು ಹಂಚಿಕೊಳ್ಳಬಹುದು.ಕಾಪಿ ರೈಟ್ ನೋಟೀಸ್: ಕನ್ನಡ ಜೆ. ವಿ. ಬೈಬಲ್ದಿ ಬೈಬಲ್ ಸೊಸೈಟಿ ಆಫ್ ಇಂಡಿಯಾ, 2016. ಅನುಮತಿಯಿಂದ ಬಳಸಲಾಗಿದೆ. ಪ್ರಪಂಚದಾದ್ಯಂತ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.
ನಮ್ಮ ಸುದ್ದಿಪತ್ರಕ್ಕಾಗಿ ಸಹಿಮಾಡಿ
ನಮ್ಮ ಹೊಸ ಪ್ರಕಟಣೆಗಳು ಯಾವಾಗ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳುವ ಮೊದಲಿಗರು ನೀವೇ!

ನಿಮ್ಮ ಪ್ರೇಕ್ಷಕರನ್ನು ಕಂಡುಕೊಳ್ಳಿ
ವೈಶಿಷ್ಟ್ಯಗೊಳಿಸಿದ ಪ್ರಕಾಶನಗಳು
© 2023 Sharing Hope Publications